ವಿಶ್ವದ ಪ್ರಮುಖ ವೀಸಾ ಸೇವಾ ಸಂಸ್ಥೆಯಾದ ಬಿಎಲ್ಎಸ್ ಇಂಟರ್‌ನ್ಯಾಷನಲ್, ಕಝಾಕಿಸ್ತಾನ್‌ನಲ್ಲಿ ರಿಪಬ್ಲಿಕ್ ಆಫ್ ಸಿಪ್ರಸ್‌ ಪರವಾಗಿ ವೀಸಾ ಅರ್ಜಿ ಕೇಂದ್ರಗಳನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಕಝಾಕಿಸ್ತಾನ್‌ನ ಪ್ರಮುಖ ನಗರಗಳಾದ ಅಸ್ತಾನಾ (Astana) ಮತ್ತು ಅಲ್ಮತಿ (Almaty) ನಗರಗಳಲ್ಲಿ ಈ ಹೊಸ ವೀಸಾ ಅರ್ಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಈ ಕೇಂದ್ರಗಳು ಸಿಪ್ರಸ್‌ ಪ್ರವಾಸಕ್ಕೆ ಬಯಸುವ ಕಝಾಕಿಸ್ತಾನ್ ನಾಗರಿಕರಿಗೆ ವೀಸಾ ಅರ್ಜಿ ಸಲ್ಲಿಕೆ, ಬಯೋಮೆಟ್ರಿಕ್ ಡೇಟಾ ಸಂಗ್ರಹಣೆ ಮತ್ತು ಇತರ ಪೂರಕ ಸೇವೆಗಳನ್ನು ಒದಗಿಸಲಿವೆ. ಬಿಎಲ್ಎಸ್ ಇಂಟರ್‌ನ್ಯಾಷನಲ್ ತನ್ನ ಸುಧಾರಿತ ತಂತ್ರಜ್ಞಾನದ ಮೂಲಕ ಅರ್ಜಿದಾರರಿಗೆ ಪಾರದರ್ಶಕ, ಸುರಕ್ಷಿತ ಮತ್ತು ಸುಲಭವಾದ ವೀಸಾ ಪ್ರಕ್ರಿಯೆಯನ್ನು ಖಚಿತಪಡಿಸಲಿದೆ.

ದುಬೈ ʼಬಂಗಾರದ ನಗರಿʼಯಾಗಿದ್ದು ಹೇಗೆ ಗೊತ್ತಾ?

ಈ ಉಪಕ್ರಮವು ಸಿಪ್ರಸ್‌ ಮತ್ತು ಕಝಾಕಿಸ್ತಾನ್ ನಡುವಿನ ಪ್ರವಾಸೋದ್ಯಮವನ್ನು ಉತ್ತೇಜಿಸುವುದಲ್ಲದೆ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸಲು ಸಹಕಾರಿಯಾಗಲಿದೆ.

ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಶಿಖರ್ ಅಗರ್ವಾಲ್ ಈ ಬಗ್ಗೆ, “ಸಿಪ್ರಸ್‌ ಸರಕಾರದೊಂದಿಗೆ ನಮ್ಮ ಸಹಭಾಗಿತ್ವವನ್ನು ವಿಸ್ತರಿಸಲು ಹೆಮ್ಮೆಪಡುತ್ತೇವೆ. ಕಝಾಕಿಸ್ತಾನ್‌ನಲ್ಲಿ ನಮ್ಮ ಅತ್ಯಾಧುನಿಕ ಸೌಲಭ್ಯಗಳ ಮೂಲಕ ಅರ್ಜಿದಾರರಿಗೆ ಅತ್ಯುತ್ತಮ ಸೇವೆಯನ್ನು ನೀಡಲು ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದ್ದಾರೆ.

ಆನ್‌ಲೈನ್ ಮೂಲಕ ಸುಲಭವಾಗಿ ಅಪಾಯಿಂಟ್‌ಮೆಂಟ್ ಪಡೆಯುವ ಸೌಲಭ್ಯ, ಅರ್ಜಿಯ ಸ್ಥಿತಿಯನ್ನು ತಿಳಿಯಲು ಎಸ್‌ಎಮ್‌ಎಸ್ ಮತ್ತು ಇಮೇಲ್ ಅಪ್‌ಡೇಟ್‌ಗಳು, ವೀಸಾ ಪ್ರಕ್ರಿಯೆಯಲ್ಲಿ ಹೆಚ್ಚಿನ ವೇಗ ಮತ್ತು ನಿಖರತೆ ಇರಲಿದೆ.