Wednesday, July 22, 2026
Wednesday, July 22, 2026

117 ಪ್ರವಾಸೋದ್ಯಮ ಮೂಲಸೌಕರ್ಯ ಯೋಜನೆಗಳಿಗೆ ಕೇಂದ್ರದ ಅನುಮೋದನೆ

ದೇಶದ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಕಳೆದ ಎರಡು ವರ್ಷಗಳಲ್ಲಿ ಒಟ್ಟು 117 ಪ್ರವಾಸೋದ್ಯಮ ಮೂಲಸೌಕರ್ಯ ಯೋಜನೆಗಳಿಗೆ ₹5,756.62 ಕೋಟಿ ಮಂಜೂರು ಮಾಡಿದೆ.

ದೇಶದ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಕಳೆದ ಎರಡು ವರ್ಷಗಳಲ್ಲಿ ಒಟ್ಟು 117 ಪ್ರವಾಸೋದ್ಯಮ ಮೂಲಸೌಕರ್ಯ ಯೋಜನೆಗಳಿಗೆ 5,756.62 ಕೋಟಿ ರು. ಮಂಜೂರು ಮಾಡಿದೆ. ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ, ಸಂಪರ್ಕ ವ್ಯವಸ್ಥೆಯ ಸುಧಾರಣೆ ಹಾಗೂ ವಿಶೇಷ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.

ಈ ಯೋಜನೆಗಳನ್ನು ಸ್ವದೇಶ್ ದರ್ಶನ 2.0, ಚಾಲೆಂಜ್ ಆಧಾರಿತ ತಾಣ ಅಭಿವೃದ್ಧಿ ಯೋಜನೆ, ಪ್ರಸಾದ್ (PRASHAD), ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸಂಸ್ಥೆಗಳಿಗೆ ನೆರವು, ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ತ್ಕರ್ಷ ಅಭಿಯಾನ (DA-JUGA) ಹಾಗೂ ರಾಜ್ಯಗಳಿಗೆ ಬಂಡವಾಳ ಹೂಡಿಕೆ ವಿಶೇಷ ನೆರವು (SASCI) ಸೇರಿದಂತೆ ವಿವಿಧ ಯೋಜನೆಗಳಡಿ ಜಾರಿಗೊಳಿಸಲಾಗುತ್ತಿದೆ.

Untitled design - 2026-07-21T165033.789

ಒಟ್ಟು ಯೋಜನೆಗಳಲ್ಲಿ ಸ್ವದೇಶ್ ದರ್ಶನ 2.0 ಅಡಿಯಲ್ಲಿ 24 ಯೋಜನೆಗಳಿಗೆ 1,565.62 ಕೋಟಿ ರು., ಚಾಲೆಂಜ್ ಆಧಾರಿತ ಯೋಜನೆಯಡಿ 36 ಯೋಜನೆಗಳಿಗೆ 687.99 ಕೋಟಿ ರು., ಪ್ರಸಾದ್ ಯೋಜನೆಯಡಿ 9 ಧಾರ್ಮಿಕ ಪ್ರವಾಸ ಯೋಜನೆಗಳಿಗೆ 172.27 ಕೋಟಿ ರು. ಹಾಗೂ SASCI ಅಡಿಯಲ್ಲಿ 41 ಯೋಜನೆಗಳಿಗೆ 3,295.76 ಕೋಟಿ ರು. ಮಂಜೂರಾಗಿದೆ. ಈ ಯೋಜನೆಗಳು ಕಡಲತೀರ, ಪರಿಸರ, ಸಾಂಸ್ಕೃತಿಕ, ಆಧ್ಯಾತ್ಮಿಕ, ಸಾಹಸ, ಬುಡಕಟ್ಟು ಹಾಗೂ ಪಾರಂಪರಿಕ ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಒಳಗೊಂಡಿವೆ.

ಇದರ ಜತೆಗೆ, ಸರಕಾರ ಇನ್‌ಕ್ರೆಡಿಬಲ್ ಇಂಡಿಯಾ ಡಿಜಿಟಲ್ ವೇದಿಕೆ, 174 ರಾಷ್ಟ್ರಗಳಿಗೆ ಇ-ವೀಸಾ ಸೌಲಭ್ಯ, 24x7 ಬಹುಭಾಷಾ ಪ್ರವಾಸಿ ಸಹಾಯವಾಣಿ, ಪ್ರವಾಸಿ ಮಾರ್ಗದರ್ಶಕರ ತರಬೇತಿ ಕಾರ್ಯಕ್ರಮ ಹಾಗೂ ಉಡಾನ್ ಯೋಜನೆಯಡಿ 53 ಪ್ರವಾಸಿ ವಿಮಾನ ಮಾರ್ಗಗಳ ಅಭಿವೃದ್ಧಿ ಮೂಲಕ ದೇಶವನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ರೂಪಿಸಲು ಕ್ರಮ ಕೈಗೊಂಡಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!