ಗೋವಾ–ಟೆಲ್ ಅವಿವ್ ನಡುವೆ ನೇರ ವಿಮಾನ ಆರಂಭ!
ಇಸ್ರೇಲ್ ಪ್ರವಾಸೋದ್ಯಮ ಇಲಾಖೆಯ ಭಾರತ ಕಾನ್ಸುಲ್ ಗಾಲಿಟ್ ಹೋಫ್ಮಾನ್ ಅವರು, ಗೋವಾ ಮತ್ತು ಟೆಲ್ ಅವಿವ್ ನಡುವೆ ನೇರ ವಿಮಾನ ಸೇವೆಗೆ ಹೆಚ್ಚು ಅವಕಾಶಗಳಿವೆ. ಪ್ರಸ್ತುತ ವರ್ಷಕ್ಕೆ ಸುಮಾರು 20,000 ದಿಂದ 30,000 ಇಸ್ರೇಲಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡುತ್ತಾರೆ. ನೇರ ವಿಮಾನ ಸೇವೆ ಆರಂಭವಾದರೆ ಇಸ್ರೇಲ್‌ನಿಂದ ಭಾರತಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಗೋವಾ ಮತ್ತು ಇಸ್ರೇಲ್‌ನ ಟೆಲ್ ಅವಿವ್ ನಗರಗಳ ನಡುವೆ ನೇರ ವಿಮಾನ ಸೇವೆ ಆರಂಭಿಸುವ ಯೋಜನೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ “ಗೇಮ್ ಚೇಂಜರ್” ಆಗಲಿದೆ ಎಂದು ಇಸ್ರೇಲ್ ಪ್ರವಾಸೋದ್ಯಮ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ. ಭಾರತದಲ್ಲಿರುವ ಇಸ್ರೇಲ್ ಪ್ರವಾಸೋದ್ಯಮ ಪ್ರತಿನಿಧಿಗಳು ಈ ಸಂಪರ್ಕವು ಎರಡು ದೇಶಗಳ ಪ್ರವಾಸೋದ್ಯಮ ಮತ್ತು ವ್ಯಾಪಾರ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ತಿಳಿಸಿದರು.
ಇಸ್ರೇಲ್ ಪ್ರವಾಸೋದ್ಯಮ ಇಲಾಖೆಯ ಭಾರತ ಕಾನ್ಸುಲ್ ಗಾಲಿಟ್ ಹೋಫ್ಮಾನ್ ಅವರು, ಗೋವಾ ಮತ್ತು ಟೆಲ್ ಅವಿವ್ ನಡುವೆ ನೇರ ವಿಮಾನ ಸೇವೆಗೆ ಹೆಚ್ಚು ಅವಕಾಶಗಳಿವೆ. ಪ್ರಸ್ತುತ ವರ್ಷಕ್ಕೆ ಸುಮಾರು 20,000 ದಿಂದ 30,000 ಇಸ್ರೇಲಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡುತ್ತಾರೆ. ನೇರ ವಿಮಾನ ಸೇವೆ ಆರಂಭವಾದರೆ ಇಸ್ರೇಲ್‌ನಿಂದ ಭಾರತಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಹೋಫ್ಮಾನ್ ಅವರು ಮಾತನಾಡುತ್ತಾ “ಈ ನೇರ ವಿಮಾನ ಸಂಪರ್ಕವು ಕೇವಲ ಪ್ರವಾಸೋದ್ಯಮವನ್ನಷ್ಟೇ ಉತ್ತೇಜಿಸದೆ ವ್ಯವಹಾರ ಸಂಬಂಧವಾಗಿ ಪ್ರಯಾಣಿಸುವ ಪ್ರಯಾಣಿಕರಿಗೂ ಅನುಕೂಲವಾಗಲಿದೆ ಜತೆಗೆ ಹೊಸ ವಿಭಾಗದ ಪ್ರವಾಸಿಗರನ್ನೂ ಆಕರ್ಷಿಸಲಿದೆ” ಎಂದು ಅವರು ತಿಳಿಸಿದರು.
ಗೋವಾ ಭಾರತೀಯರಿಗಷ್ಟೇ ಅಲ್ಲದೆ ಇಸ್ರೇಲಿ ಯುವ ಪ್ರವಾಸಿಗರಿಗೂ ಬಹಳ ಜನಪ್ರಿಯ ತಾಣವಾಗಿದ್ದು, ನೇರ ಸಂಪರ್ಕದಿಂದ ಅವರು ಆರಾಮಾಗಿ ಗೋವಾ ರಾಜ್ಯಕ್ಕೆ ಪ್ರಯಾಣ ಬೆಳೆಸಬಹುದು. ಸಾಮಾನ್ಯವಾಗಿ ಮಿಡಲ್-ಈಸ್ಟ್ ಅಥವಾ ಯುರೋಪ್ ಮಾರ್ಗದ ಮೂಲಕ ಪ್ರಯಾಣ ಮಾಡಬೇಕಿತ್ತು, ನೇರ ಹಾರಾಟದಿಂದ ಪ್ರಯಾಣದ ಸಮಯವು ಸುಮಾರು ಐದು ಗಂಟೆ 30 ನಿಮಿಷಕ್ಕೆ ಸೀಮಿತವಾಗಲಿದೆ. ಇದರಿಂದ ಪ್ರಯಾಣ ವೇಗ ಮತ್ತು ಸುಗಮವಾಗಲಿದೆ ಎಂದರು.
ಈ ನಿಟ್ಟಿನಲ್ಲಿ ಅವರು ಗೋವಾ ಪ್ರವಾಸೋದ್ಯಮ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿರುವುದಾಗಿ ತಿಳಿಸಿದರು.