Wednesday, November 4, 2026
Wednesday, November 4, 2026

ದೀಪಾವಳಿ ಎಫೆಕ್ಟ್: ರೈಲು ಟಿಕೆಟ್‌ಗೆ ಭಾರೀ ಬೇಡಿಕೆ

ಹಬ್ಬದ ವೇಳೆ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಉತ್ತರ ರೈಲ್ವೇ 6,200ಕ್ಕೂ ಹೆಚ್ಚು ವಿಶೇಷ ರೈಲು ಟ್ರಿಪ್‌ಗಳನ್ನು ಯೋಜಿಸಿದೆ. ಆದರೂ ಬೇಡಿಕೆಗೆ ಅನುಗುಣವಾಗಿ ಟಿಕೆಟ್‌ಗಳು ಲಭ್ಯವಾಗುತ್ತಿಲ್ಲ. ಕೆಲವು ಮಾರ್ಗಗಳಲ್ಲಿ ವಿಶೇಷ ರೈಲುಗಳ ದರ ಸಾಮಾನ್ಯ ರೈಲುಗಳಿಗಿಂತ ಸುಮಾರು ಒಂದೂವರೆ ಪಟ್ಟು ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.

ದೀಪಾವಳಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಸ್ವಗ್ರಾಮಗಳಿಗೆ ತೆರಳಲು ಸಿದ್ಧತೆ ನಡೆಸಿರುವ ಪ್ರಯಾಣಿಕರಿಗೆ ಖಚಿತ ಟಿಕೆಟ್ ಪಡೆಯುವುದು ಸವಾಲಾಗಿ ಪರಿಣಮಿಸಿದೆ. ವಾರಾಣಸಿ, ಗೋರಖ್‌ಪುರ, ಅಯೋಧ್ಯೆ, ಬಿಹಾರ ಮತ್ತು ಪಶ್ಚಿಮ ಬಂಗಾಳದತ್ತ ಸಂಚರಿಸುವ ಹಲವು ರೈಲುಗಳಲ್ಲಿ ವೇಟಿಂಗ್ ಲಿಸ್ಟ್ ನೂರಾರು ಸಂಖ್ಯೆಯನ್ನು ತಲುಪಿದೆ. ಹಬ್ಬದ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲುಗಳನ್ನು ಆರಂಭಿಸಿದ್ದರೂ, ಟಿಕೆಟ್‌ಗಳ ಕೊರತೆ ಮುಂದುವರಿದಿದೆ. ಮತ್ತೊಂದೆಡೆ, ಕೆಲವು ವಿಶೇಷ ರೈಲುಗಳ ಪ್ರಯಾಣ ದರ ಸಾಮಾನ್ಯ ರೈಲುಗಳಿಗಿಂತ ಹೆಚ್ಚಿರುವುದು ಪ್ರಯಾಣಿಕರ ಹೊರೆಯನ್ನು ಹೆಚ್ಚಿಸಿದೆ. ದೆಹಲಿ, ಮುಂಬೈ ಮತ್ತು ಬೆಂಗಳೂರಿನಂಥ ಮಹಾನಗರಗಳಿಂದ ಊರಿಗೆ ತೆರಳುವವರು ಟಿಕೆಟ್‌ಗಾಗಿ ಪರದಾಡುತ್ತಿದ್ದಾರೆ. ಕೆಲವು ದಿನಗಳಲ್ಲಿ ಟಿಕೆಟ್ ಕಾಯ್ದಿರಿಸಲು ಅವಕಾಶವಿಲ್ಲದಿದ್ದರೆ, ಇನ್ನು ಕೆಲವು ದಿನಗಳಲ್ಲಿ ದೀರ್ಘ ವೇಟಿಂಗ್ ಲಿಸ್ಟ್ ಇರುವುದರಿಂದ ಖಚಿತ ಆಸನ ಸಿಗುವುದು ಕಷ್ಟವಾಗಿದೆ.

ಇದನ್ನೂ ಓದಿ: ಹಂಪಿ ಸಂರಕ್ಷಣೆಗೆ ಯುನೆಸ್ಕೋ ತಜ್ಞರ ಮೆಚ್ಚುಗೆ

ಹಬ್ಬದ ವೇಳೆ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಉತ್ತರ ರೈಲ್ವೇ 6,200ಕ್ಕೂ ಹೆಚ್ಚು ವಿಶೇಷ ರೈಲು ಟ್ರಿಪ್‌ಗಳನ್ನು ಯೋಜಿಸಿದೆ. ಆದರೂ ಬೇಡಿಕೆಗೆ ಅನುಗುಣವಾಗಿ ಟಿಕೆಟ್‌ಗಳು ಲಭ್ಯವಾಗುತ್ತಿಲ್ಲ. ಕೆಲವು ಮಾರ್ಗಗಳಲ್ಲಿ ವಿಶೇಷ ರೈಲುಗಳ ದರ ಸಾಮಾನ್ಯ ರೈಲುಗಳಿಗಿಂತ ಸುಮಾರು ಒಂದೂವರೆ ಪಟ್ಟು ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ. ಜಾರ್ಖಂಡ್‌ಗೆ ತೆರಳುವ ರೈಲುಗಳಲ್ಲಿಯೂ ಟಿಕೆಟ್‌ಗಳಿಗಾಗಿ ತೀವ್ರ ಬೇಡಿಕೆ ಕಂಡುಬಂದಿದೆ. ನವದೆಹಲಿ–ರಾಂಚಿ ಗರೀಬ್ ರಥ್ ಎಕ್ಸ್‌ಪ್ರೆಸ್‌ನಲ್ಲಿ ನವೆಂಬರ್ 3ರಿಂದ 15ರವರೆಗಿನ ಕೆಲವು ದಿನಗಳ ಪ್ರಯಾಣಕ್ಕೆ ವೇಟಿಂಗ್ ಲಿಸ್ಟ್ 200 ಮೀರಿದೆ. ಆನಂದ್ ವಿಹಾರ್–ಹಟಿಯಾ ಎಕ್ಸ್‌ಪ್ರೆಸ್‌ನಲ್ಲಿ ನವೆಂಬರ್ 3ರಿಂದ 17ರವರೆಗೆ ವಿವಿಧ ದರ್ಜೆಗಳಲ್ಲಿ ವೇಟಿಂಗ್ ಲಿಸ್ಟ್ 10ರಿಂದ 112ರವರೆಗೆ ಇದೆ. ಜಾರ್ಖಂಡ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ನಲ್ಲಿ ನವೆಂಬರ್ 4, 7, 11 ಮತ್ತು 14ರಂದು ಸ್ಲೀಪರ್ ದರ್ಜೆಯ ವೇಟಿಂಗ್ ಲಿಸ್ಟ್ 100 ದಾಟಿದ್ದು, ತೃತೀಯ ಎಸಿ ದರ್ಜೆಯಲ್ಲಿ 86ರವರೆಗೆ ತಲುಪಿದೆ.

ಬೆಂಗಳೂರಿನಿಂದ ಜಾರ್ಖಂಡ್‌ಗೆ ಪ್ರಯಾಣಿಸುವವರಿಗೂ ಟಿಕೆಟ್ ಸಮಸ್ಯೆ ಎದುರಾಗಿದೆ. ಬೆಂಗಳೂರು–ಹಟಿಯಾ ಎಕ್ಸ್‌ಪ್ರೆಸ್‌ನಲ್ಲಿ ತೃತೀಯ ಎಸಿ ದರ್ಜೆಯ ವೇಟಿಂಗ್ ಲಿಸ್ಟ್ 125ರವರೆಗೆ ತಲುಪಿದ್ದು, ಸ್ಲೀಪರ್ ದರ್ಜೆಯಲ್ಲಿ ಕೆಲವು ದಿನಗಳ ಕಾಯುವಿಕೆ ಪಟ್ಟಿ 100 ಮೀರಿದೆ. ಮುಂಬೈನಿಂದ ಹಟಿಯಾಗೆ ತೆರಳುವ ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್‌ನಲ್ಲಿಯೂ ಹಲವು ದಿನಗಳಲ್ಲಿ ಎಲ್ಲ ದರ್ಜೆಗಳ ಟಿಕೆಟ್‌ಗಳು ಭರ್ತಿಯಾಗಿವೆ. ಹಬ್ಬದ ಪ್ರಯಾಣದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಮುಂಚಿತವಾಗಿಯೇ ಟಿಕೆಟ್ ಕಾಯ್ದಿರಿಸುವುದು ಹಾಗೂ ಪ್ರಯಾಣದ ದಿನಾಂಕಕ್ಕೆ ಅನುಗುಣವಾಗಿ ರೈಲ್ವೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಟಿಕೆಟ್ ಲಭ್ಯತೆ ಮತ್ತು ದರಗಳನ್ನು ಪರಿಶೀಲಿಸುವುದು ಸೂಕ್ತವಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..