ಕಾಶ್ಮೀರ ಪ್ರವಾಸೋದ್ಯಮ ಪುನರುಜ್ಜೀವನಕ್ಕಾಗಿ ದೇಶಾದ್ಯಂತ ರೋಡ್ ಶೋ
ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಮುಂದಿನ ಕೆಲವು ತಿಂಗಳುಗಳು ಪ್ರವಾಸೋದ್ಯಮ ಕ್ಷೇತ್ರದ ಪುನರುಜ್ಜೀವನಕ್ಕೆ ಅತ್ಯಂತ ಮಹತ್ವದ ಅವಧಿಯಾಗಿವೆ ಎಂದು ಹೇಳಿದ್ದಾರೆ. ಶ್ರೀನಗರ, ಗುಲ್ಮರ್ಗ್, ಪಹಲ್ಗಾಮ್, ಸೊನ್ಮರ್ಗ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರಿಂದ ದೇಶಿ ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ.
ಜಮ್ಮು–ಕಾಶ್ಮೀರದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತೆ ಚೇತರಿಸಿಕೊಳ್ಳುವಂತೆ ಮಾಡಲು ಅಲ್ಲಿನ ಸರಕಾರ ದೇಶಾದ್ಯಂತ ರೋಡ್‌ಶೋಗಳನ್ನು ಮತ್ತು ಹಬ್ಬಗಳನ್ನು ಆಚರಿಸಲು ಸಜ್ಜಾಗಿದೆ. ಪ್ರವಾಸೋದ್ಯಮ ಇಲಾಖೆಯು ವಿಂಟರ್ ಟೂರಿಸಂ ಅನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕ್ರಿಸ್‌ಮಸ್, ಹೊಸ ವರ್ಷ ಹಾಗೂ ಇತರ ಉತ್ಸವಗಳನ್ನು ಪ್ರಮುಖ ಪ್ರವಾಸಿ ತಾಣಗಳಲ್ಲಿ ಹಮ್ಮಿಕೊಂಡಿದೆ.

ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಮುಂದಿನ ಕೆಲವು ತಿಂಗಳುಗಳು ಪ್ರವಾಸೋದ್ಯಮ ಕ್ಷೇತ್ರದ ಪುನರುಜ್ಜೀವನಕ್ಕೆ ಅತ್ಯಂತ ಮಹತ್ವದ ಅವಧಿಯಾಗಿವೆ ಎಂದು ಹೇಳಿದ್ದಾರೆ. ಶ್ರೀನಗರ, ಗುಲ್ಮಾರ್ಗ್, ಪಹಲ್ಗಾಮ್, ಸೋನ್ಮಾರ್ಗ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರಿಂದ ದೇಶಿ ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ.
ಈ ಕುರಿತು ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ವಸೀಮ್ ರಾಜಾ, “ಹಬ್ಬದ ವಾತಾವರಣ ಮತ್ತು ರೋಡ್ ಶೋಗಳ ಮೂಲಕ ಪ್ರವಾಸಿಗರ ವಿಶ್ವಾಸವನ್ನು ಮರುಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ. ಕಾಶ್ಮೀರದ ಆತಿಥ್ಯ ಮತ್ತು ಪ್ರಕೃತಿ ಸೌಂದರ್ಯವೇ ನಮ್ಮ ದೊಡ್ಡ ಶಕ್ತಿ” ಎಂದು ಹೇಳಿದರು.