ಕೊಂಕಣ ರೇಲ್ವೆಯಿಂದ ಮೊದಲ ರೋ ರೋ ರೈಲು
ಆ.23 ರ ಸಂಜೆ 5 ಗಂಟೆಗೆ ಮಹಾರಾಷ್ಟ್ರ ದ ಕೊಲಾಡ್ ನಿಂದ ಹಾಗೂ ಆ.24ರಿಂದ ಗೋವಾದ ವೆರ್ಣಾದಿಂದ ಬೆಳಗ್ಗೆ 5 ಕ್ಕೆ ಮೊದಲ ರೋ ರೋ ರೈಲು ಹೊರಡಲಿದೆ. ಒಂದು ಪ್ರಯಾಣದಲ್ಲಿ 40 ಕಾರುಗಳಿಗೆ ಅವಕಾಶವಿದ್ದು, ಒಂದು ಪ್ರಯಾಣದಲ್ಲಿ 16 ಕಾರುಗಳಿಗೂ ಕಡಿಮೆ ಇದ್ದರೆ ಅಂದು ಪ್ರಯಾಣ ರದ್ದಾಗಲಿದೆ.
ಶಿರಸಿ: ಕೊಂಕಣ ರೇಲ್ವೆ ನಿಗಮವು ಬರುವ ಹಬ್ಬಗಳಿಗಾಗಿ ಕಾರುಗಳಿಗೆ ರೋ ರೋ ಸೇವೆಯನ್ನು ಪ್ರಾರಂಭಿಸಲಿದೆ. ಹೆದ್ದಾರಿಗಳಲ್ಲಿಯ ವಾಹನ ದಟ್ಟಣೆ, ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಅನಿರೀಕ್ಷಿತ ಪ್ರಯಾಣದಲ್ಲಿ ವಿಳಂಬವಾಗುವುದು ಕಳೆದ ಕೆಲವು ವರ್ಷಗಳಲ್ಲಿ ಸಾಮಾನ್ಯವಾಗಿರುವುದರಿಂದ ಎಚ್ಚೆತ್ತುಕೊಂಡ ಕೊಂಕಣ ರೈಲ್ವೆ ನಿಗಮ ಹಬ್ಬಗಳಿಗೆ ಊರಿಗೆ ಹೋಗಿ ಬರುವವರಿಗೆ, ಸಾರ್ಜನಿಕರ ಅನುಕೂಲಕ್ಕಾಗಿ ಈ ಸೇವೆಯನ್ನು ಪ್ರಾರಂಬಿಸಿದೆ.

ಆ.23 ರ ಸಂಜೆ 5 ಗಂಟೆಗೆ ಮಹಾರಾಷ್ಟ್ರ ದ ಕೊಲಾಡ್ ನಿಂದ ಹಾಗೂ ಆ.24ರಿಂದ ಗೋವಾದ ವೆರ್ಣಾದಿಂದ ಬೆಳಗ್ಗೆ 5 ಕ್ಕೆ ಮೊದಲ ರೋ ರೋ ರೈಲು ಹೊರಡಲಿದೆ. ಒಂದು ಪ್ರಯಾಣದಲ್ಲಿ 40 ಕಾರುಗಳಿಗೆ ಅವಕಾಶವಿದ್ದು, ಒಂದು ಪ್ರಯಾಣದಲ್ಲಿ 16 ಕಾರುಗಳಿಗೂ ಕಡಿಮೆ ಇದ್ದರೆ ಅಂದು ಪ್ರಯಾಣ ರದ್ದಾಗಲಿದೆ. ಒಂದು ಕಾರಿಗೆ ಗರಿಷ್ಟ ಮೂರು ಪ್ರಯಾಣಿಕರು ಟಿಕೆಟ್ ಪಡೆದು ಸಾಮಾನ್ಯ ಹಾಗೂ ಏರ್ ಕಂಡಿಷನ್ಡ್ ವರ್ಗಗಳಲ್ಲಿ ರೋ ರೋ ರೈಲಿಗೆ ಸೇರಿಸುವ ಬೋಗಿಗಳಲ್ಲಿ ಪ್ರಯಾಣಿಸಬಹುದಾಗಿದೆ. ಒಂದು ಕಾರಿಗೆ ನೊಂದಣಿ ಹಾಗೂ ಜಿಎಸ್ಟಿ ಸೇರಿ 7845 ರು. ನಿಗದಿ ಪಡಿಸಲಾಗಿದೆ. ರೋ ರೋ ಸೇವೆಯು ಆ.23 ರಿಂದ ಸೆ .11 ವರೆಗೆ ಚಾಲನೆಯಲ್ಲಿರಲಿದೆ.