ಕುವೈತ್‌ಗೆ ವಿಮಾನ ಸೇವೆ ಮರು ಆರಂಭ
ಕೊಲಂಬೊ ಮೂಲಕ ಮಧ್ಯಪ್ರಾಚ್ಯ ಮತ್ತು ದಕ್ಷಿಣ ಭಾರತದ ಪ್ರಮುಖ ನಗರಗಳಾದ ಚೆನ್ನೈ, ತಿರುವನಂತಪುರಂ, ಕೊಚ್ಚಿ, ಮಧುರೈ ಮತ್ತು ತಿರುಚ್ಚಿ ನಡುವೆ ಕೇವಲ 90 ನಿಮಿಷಗಳಿಗೂ ಕಡಿಮೆ ಅವಧಿಯಲ್ಲಿ ತಲುಪಲು ಅತ್ಯುತ್ತಮ ಮತ್ತು ಸುಲಭ ಕನೆಕ್ಟಿವಿಟಿ ದೊರೆಯಲಿದೆ.
ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಶ್ರೀಲಂಕನ್ ಏರ್‌ಲೈನ್ಸ್ ಮಧ್ಯಪ್ರಾಚ್ಯ ಪ್ರದೇಶದಲ್ಲಿ ತನ್ನ ವಿಮಾನಯಾನ ಸೇವೆಗಳನ್ನು ಸಂಪೂರ್ಣವಾಗಿ ಪುನರಾರಂಭಿಸಿದೆ. ಆಗಸ್ಟ್ 8, 2026 ರಿಂದ ಕುವೈತ್‌ಗೆ ವಾರಕ್ಕೆ ಆರು ವಿಮಾನಗಳ ಹಾರಾಟವನ್ನು ಮರು ಆರಂಭಿಸುವ ಮೂಲಕ, ಕಂಪೆನಿಯು ಮಧ್ಯಪ್ರಾಚ್ಯದ ತನ್ನ ಇಡೀ ನೆಟ್‌ವರ್ಕ್ ಅನ್ನು ಯಶಸ್ವಿಯಾಗಿ ಮರಳಿ ಸ್ಥಾಪಿಸಿದೆ.
ಇದನ್ನೂ ಓದಿ: ಗಯಾದಿಂದ ಬ್ಯಾಂಕಾಕ್‌ಗೆ ನೇರ ವಿಮಾನ ಸೇವೆ ಶುರು!
ಕೆಲವು ತಿಂಗಳುಗಳ ಹಿಂದೆ ಮಧ್ಯಪ್ರಾಚ್ಯ ಕಾರ್ಯಾಚರಣೆಯಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿ ನಿಂತು, ಶ್ರೀಲಂಕನ್ ಏರ್‌ಲೈನ್ಸ್ ಈಗ ರಿಯಾಧ್, ದಮ್ಮಾಮ್, ದುಬೈ, ದೋಹಾ ಮತ್ತು ಕುವೈತ್ ನಗರಗಳನ್ನು ಒಳಗೊಂಡ ತನ್ನ ಪೂರ್ಣ ಪ್ರಮಾಣದ ಮಧ್ಯಪ್ರಾಚ್ಯ ಮಾರ್ಗಗಳನ್ನು ಮರಳಿ ಸಕ್ರಿಯಗೊಳಿಸಿದೆ.
ಕೊಲಂಬೊ ಮೂಲಕ ಮಧ್ಯಪ್ರಾಚ್ಯ ಮತ್ತು ದಕ್ಷಿಣ ಭಾರತದ ಪ್ರಮುಖ ನಗರಗಳಾದ ಚೆನ್ನೈ, ತಿರುವನಂತಪುರಂ, ಕೊಚ್ಚಿ, ಮಧುರೈ ಮತ್ತು ತಿರುಚ್ಚಿ ನಡುವೆ ಕೇವಲ 90 ನಿಮಿಷಗಳಿಗೂ ಕಡಿಮೆ ಅವಧಿಯಲ್ಲಿ ತಲುಪಲು ಅತ್ಯುತ್ತಮ ಮತ್ತು ಸುಲಭ ಕನೆಕ್ಟಿವಿಟಿ ದೊರೆಯಲಿದೆ.
ಭಾರತವು ಶ್ರೀಲಂಕನ್ ಏರ್‌ಲೈನ್ಸ್‌ಗೆ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದ್ದು, ಭಾರತದ ಪ್ರಮುಖ ನಗರಗಳಿಂದ ಕೊಲಂಬೊಗೆ ವಾರಕ್ಕೆ ಒಟ್ಟು 90 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ದಕ್ಷಿಣ ಭಾರತದಿಂದ ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸುವ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ 7 ಕೆ.ಜಿ ಹ್ಯಾಂಡ್ ಗೇಜ್ ಜೊತೆಗೆ 30 ಕೆ.ಜಿ ಚೆಕ್-ಇನ್ ಲಗೇಜ್ ಸೌಲಭ್ಯವನ್ನು ನೀಡಲಾಗುತ್ತಿದೆ. ಜತೆಗೆ ವಿಮಾನದೊಳಗೆ ದಕ್ಷಿಣ ಭಾರತದ ಮೆನುವಿನ ಆಹಾರ ಪದಾರ್ಥಗಳು ಮತ್ತು ವಿವಿಧ ಭಾಷೆಗಳ ಮನರಂಜನಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಮಧ್ಯಪ್ರಾಚ್ಯದೊಂದಿಗೆ ಸಂಪೂರ್ಣ ವಿಮಾನಯಾನ ಸಂಪರ್ಕವನ್ನು ಮರಳಿ ಪಡೆದಿರುವುದು ಶ್ರೀಲಂಕನ್ ಏರ್‌ಲೈನ್ಸ್‌ನ ಜಾಗತಿಕ ಪ್ರವಾಸೋದ್ಯಮ ಮತ್ತು ವ್ಯಾಪಾರ ವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಲಿದೆ.