Saturday, February 28, 2026
Saturday, February 28, 2026

ಕಸ ವಿಲೇವಾರಿಗೆ NGT ನಿಯಮ ಪಾಲಿಸಿ: ಸೋನ್ಮಾರ್ಗ್‌ ಪ್ರವಾಸೋದ್ಯಮ ಪ್ರಾಧಿಕಾರ

ಸಂಸ್ಥೆಗಳು ತ್ಯಾಜ್ಯವನ್ನು ಸಂಗ್ರಹಿಸಬೇಕು. ಇದಕ್ಕಾಗಿ ಸಂಸ್ಥೆಯ ಒಳಗೆ ಮತ್ತು ಹೊರಗೂ ಡಸ್ಟ್‌ಬಿನ್‌ಗಳನ್ನು ಅಳವಡಿಸಬೇಕು. ನಂತರ ಸಂಗ್ರಹವಾಗುವ ತ್ಯಾಜ್ಯವನ್ನು ಕಡ್ಡಾಯವಾಗಿ ಹಸಿ ಕಸ, ಒಣ ಕಸ, ಅಪಾಯಕಾರಿ ಮತ್ತು ನೈರ್ಮಲ್ಯ ತ್ಯಾಜ್ಯಗಳಾಗಿ ವಿಂಗಡಿಸಿ ಪುರಸಭೆಗೆ ನೀಡಬೇಕು ಎಂದು ಪ್ರಾಧಿಕಾರ ನಿರ್ದೇಶಿಸಿದೆ.

ಕಸ ವಿಲೇವಾರಿಯಲ್ಲಿ ನ್ಯಾಷನಲ್‌ ಗ್ರೀನ್‌ ಟ್ರಿಬ್ಯುನಲ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೋನ್ಮಾರ್ಗ್‌ ಪ್ರವಾಸೋದ್ಯಮ ಪ್ರಾಧಿಕಾರ ಸೂಚನೆ ಹೊರಡಿಸಿದೆ.

ಹೊಟೇಲ್- ರೆಸ್ಟೋರೆಂಟ್, ಅತಿಥಿ ಗೃಹಗಳ ಮಾಲೀಕರು, ಟೆಂಟ್ - ಟೂರ್‌ ಮ್ಯಾನೇಜರ್‌ಗಳು, ಅಂಗಡಿಯವರು, ಗ್ರಾಮಸ್ಥರು, ಹೊರಗುತ್ತಿಗೆ ಏಜೆನ್ಸಿಗಳು ಹೀಗೆ ಹಲವರು ತ್ಯಾಜ್ಯ ನಿರ್ಹಣೆಯ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಗಮನಿಸಿರುವ ಪ್ರಾಧಿಕಾರ ಈ ಸೂಚನೆ ಹೊರಡಿಸಿದೆ.

ರಸ್ತೆ, ಓಪನ್‌ ಪ್ಲೇಸ್‌, ಪ್ರವಾಸಿ ತಾಣಗಳು, ಜಲಮೂಲಗಳಲ್ಲಿ ತ್ಯಾಜ್ಯಗಳನ್ನು ಎಸೆಯುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದು, ಘನ ಅಥವಾ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸುಡುವುದು, ಏಕ ಬಳಕೆ ಪ್ಲಾಸ್ಟಿಕ್‌ ಸಂಗ್ರಹ ಮತ್ತು ವಿತರಣೆ ಮಾಡುವುದನ್ನು ನಿಷೇದಿಸಲಾಗಿದೆ.

ಸಂಸ್ಥೆಗಳು ತ್ಯಾಜ್ಯವನ್ನು ಸಂಗ್ರಹಿಸಬೇಕು. ಇದಕ್ಕಾಗಿ ಸಂಸ್ಥೆಯ ಒಳಗೆ ಮತ್ತು ಹೊರಗೂ ಡಸ್ಟ್‌ಬಿನ್‌ಗಳನ್ನು ಅಳವಡಿಸಬೇಕು. ನಂತರ ಸಂಗ್ರಹವಾಗುವ ತ್ಯಾಜ್ಯವನ್ನು ಕಡ್ಡಾಯವಾಗಿ ಹಸಿ ಕಸ, ಒಣ ಕಸ, ಅಪಾಯಕಾರಿ ಮತ್ತು ನೈರ್ಮಲ್ಯ ತ್ಯಾಜ್ಯಗಳಾಗಿ ವಿಂಗಡಿಸಿ ಪುರಸಭೆಗೆ ನೀಡಬೇಕು ಎಂದು ಪ್ರಾಧಿಕಾರ ನಿರ್ದೇಶಿಸಿದೆ. ಉಲ್ಲಂಘನೆ ಅಥವಾ ನಿರ್ಲಕ್ಷ್ಯ ಕಂಡುಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!