ಟೂರಿಸ್ಟ್ ಗೈಡ್‌ಗಳ ನೊಂದಣಿ ಕಡ್ಡಾಯ- ಗೋವಾ ಪ್ರವಾಸೋದ್ಯಮ ಇಲಾಖೆಯ ಹೊಸ ನಿಯಮ
ಪ್ರವಾಸೋದ್ಯಮ ಇಲಾಖೆ ಶೀಘ್ರದಲ್ಲೇ ಹೊಸ ಆನ್‌ಲೈನ್ ನೊಂದಣಿ ಪೋರ್ಟಲ್ ಆರಂಭಿಸಲು ಕ್ರಮ ಕೈಗೊಂಡಿದ್ದು, ಇದರಿಂದ ರಾಜ್ಯದ ಎಲ್ಲ ಮಾರ್ಗದರ್ಶಕರು ಸುಲಭವಾಗಿ ನೊಂದಣಿ ಮಾಡಿಕೊಳ್ಳಲು ಸಾಧ್ಯವಾಗಲಿದೆ.
ಗೋವಾ ಸರ್ಕಾರವು ರಾಜ್ಯದ ಪ್ರವಾಸೋದ್ಯಮ ಸೇವೆಗಳಲ್ಲಿ ಪಾರದರ್ಶಕತೆ ತೋರಲು ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಹೊಸ ಕ್ರಮ ಕೈಗೊಂಡಿದೆ. ಈ ಕ್ರಮದಡಿ, ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಪ್ರವಾಸಿ ಮಾರ್ಗದರ್ಶಕರು (ಟೂರ್ ಗೈಡ್‌ಗಳು) ಅಧಿಕೃತವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸುವುದು ಕಡ್ಡಾಯವಾಗಿದೆ.

ಗೋವಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ಕ್ರಮವು ಮಾರ್ಗದರ್ಶನ ವಲಯದಲ್ಲಿ ಸೂಕ್ತ ಮಾನದಂಡವನ್ನು ತರಲು ಮತ್ತು ಅಕ್ರಮ ಅಥವಾ ಅಪ್ರಮಾಣಿತ ಮಾರ್ಗದರ್ಶಕರನ್ನು ತಡೆಗಟ್ಟಲು ಸಹಾಯಕವಾಗಿದೆ. ಸರಕಾರವು ಮಾರ್ಗದರ್ಶಕರಿಗೆ ಅಗತ್ಯ ತರಬೇತಿ, ಗುರುತಿನ ಚೀಟಿ ಮತ್ತು ಅಧಿಕೃತ ಅನುಮತಿ ನೀಡಲಿದ್ದು, ಇದರ ಮೂಲಕ ಪ್ರವಾಸಿಗರಿಗೆ ಸುರಕ್ಷಿತ ಅನುಭವ ಹಾಗೂ ನಿಖರ ಮಾಹಿತಿ ದೊರೆಯಲಿದೆ.
ಪ್ರವಾಸೋದ್ಯಮ ಇಲಾಖೆ ಶೀಘ್ರದಲ್ಲೇ ಹೊಸ ಆನ್‌ಲೈನ್ ನೊಂದಣಿ ಪೋರ್ಟಲ್ ಆರಂಭಿಸಲು ಕ್ರಮ ಕೈಗೊಂಡಿದ್ದು, ಇದರಿಂದ ರಾಜ್ಯದ ಎಲ್ಲ ಮಾರ್ಗದರ್ಶಕರು ಸುಲಭವಾಗಿ ನೊಂದಣಿ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಹೊಸ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯು ಎಚ್ಚರಿಕೆ ನೀಡಿದೆ.