ಗೋವಾಕ್ಕೆ ಇಂಗ್ಲೆಂಡ್‌ನಿಂದ ಚಾರ್ಟರ್ ವಿಮಾನಗಳ ಆಗಮನ
ಇಂಗ್ಲೆಂಡ್‌ನ ಪ್ರಮುಖ ಏರ್‌ಲೈನ್ ಸಂಸ್ಥೆ TUI Airways ಈ ಚಾರ್ಟರ್ ಸೇವೆಗಳನ್ನು ಪ್ರಾರಂಭಿಸಿದ್ದು, ಮೊದಲ ವಿಮಾನ ಇತ್ತೀಚೆಗೆ ಗೋವಾದ ”ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ” ಕ್ಕೆ ಆಗಮಿಸಿತು. ಮ್ಯಾಂಚೆಸ್ಟರ್ ಮತ್ತು ಲಂಡನ್ ಗ್ಯಾಟ್‌ವಿಕ್‌ನಿಂದ ನೇರವಾಗಿ ಪ್ರಯಾಣ ಆರಂಭಿಸಿದ ಈ ವಿಮಾನದಲ್ಲಿ ಸುಮಾರು 300 ಪ್ರಯಾಣಿಕರು ಪಯಣಿಸಿದ್ದರು.
ಗೋವಾ ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯವನ್ನು ನೀಡುವ ರೀತಿಯಲ್ಲಿ ಬ್ರಿಟನ್‌ನಿಂದ ನೇರ ಚಾರ್ಟರ್ ವಿಮಾನಗಳ ಆಗಮನ ಪ್ರಾರಂಭವಾಗಿದೆ.
ಇಂಗ್ಲೆಂಡ್‌ನ ಪ್ರಮುಖ ಏರ್‌ಲೈನ್ ಸಂಸ್ಥೆ TUI Airways ಈ ಚಾರ್ಟರ್ ಸೇವೆಗಳನ್ನು ಪ್ರಾರಂಭಿಸಿದ್ದು, ಮೊದಲ ವಿಮಾನ ಇತ್ತೀಚೆಗೆ ಗೋವಾದ ”ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ” ಕ್ಕೆ ಆಗಮಿಸಿದೆ. ಮ್ಯಾಂಚೆಸ್ಟರ್ ಮತ್ತು ಲಂಡನ್ ಗ್ಯಾಟ್‌ವಿಕ್‌ನಿಂದ ನೇರವಾಗಿ ಪ್ರಯಾಣ ಆರಂಭಿಸಿದ ಈ ವಿಮಾನದಲ್ಲಿ ಸುಮಾರು 300 ಪ್ರಯಾಣಿಕರು ಪಯಣಿಸಿದ್ದರು.
ಅಧಿಕೃತ ಮಾಹಿತಿಯ ಪ್ರಕಾರ, ಈ ಚಾರ್ಟರ್ ಸೇವೆ ಚಳಿಗಾಲದ ಮುಂಚಿನ ತಿಂಗಳುಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಲಿದೆ. ವಾರಕ್ಕೆ ನಾಲ್ಕು ಚಾರ್ಟರ್ ವಿಮಾನಗಳು ಆಗಮಿಸಲಿದ್ದು, ಡಿಸೆಂಬರ್‌ರಿಂದ ಜನವರಿವರೆಗೆ ಒಟ್ಟು 80ಕ್ಕೂ ಹೆಚ್ಚು ವಿಮಾನಗಳು ಗೋವಾಕ್ಕೆ ಬರಲಿವೆ.

ಗೋವಾ ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಗಳು ಮಾತನಾಡಿ, “ಈ ಚಾರ್ಟರ್ ವಿಮಾನಗಳು ಗೋವಾ ರಾಜ್ಯಕ್ಕೆ ಹೆಚ್ಚು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯಲಿವೆ. ರಾಜ್ಯದ ಪ್ರವಾಸೋದ್ಯಮ ಆರ್ಥಿಕತೆಯು ಇದರ ಫಲದಿಂದ ಮತ್ತಷ್ಟು ಬಲಪಡಲಿದೆ ಹಾಗೂ ಗೋವಾ ಈಗ ಕೇವಲ ಕಡಲತೀರದ ರಾಜ್ಯವಲ್ಲ; ಇದು ಸಂಸ್ಕೃತಿ, ಆಹಾರ, ಹೇರಿಟೇಜ್ ಹಾಗೂ ಸಾಹಸ ಪ್ರವಾಸೋದ್ಯಮದ ಆಕರ್ಷಣೆಯ ಕೇಂದ್ರವಾಗಿದೆ. ಈ ವಿಮಾನ ಸಂಪರ್ಕವು ಪ್ರವಾಸಿಗರ ಅನುಭವವನ್ನು ಸುಗಮಗೊಳಿಸುವತ್ತ ಮತ್ತೊಂದು ದೊಡ್ಡ ಹೆಜ್ಜೆ,” ಎಂದು ಅಭಿಪ್ರಾಯಪಟ್ಟರು.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸ್ವಾಗತಕ್ಕಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಥಳೀಯ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಚಾರ್ಟರ್ ವಿಮಾನಗಳ ನಿರಂತರ ಸೇವೆಯಿಂದ ಸ್ಥಳೀಯ ಹೊಟೇಲ್, ರೆಸ್ಟೋರೆಂಟ್ ಹಾಗೂ ಪ್ರವಾಸೋದ್ಯಮ ಸಂಬಂಧಿತ ವಲಯಗಳು ಆರ್ಥಿಕವಾಗಿ ಬಲಗೊಳ್ಳುವ ಸಾಧ್ಯತೆಯಿದೆ.