ಗೋವಾ ಮತ್ತು ನಾರ್ವೆ ನಡುವೆ ದ್ವಿಪಕ್ಷೀಯ ಒಪ್ಪಂದ
ಈ ಒಪ್ಪಂದವು ಭಾರತ ಮತ್ತು ನಾರ್ವೆ ನಡುವಿನ ಬಾಂಧವ್ಯವನ್ನು ಬಲಪಡಿಸಿ, ಆರ್ಥಿಕ ಸಹಯೋಗಕ್ಕೆ ನಾಂದಿಯಾಗಲಿದೆ. ಗೋವಾ ರಾಜ್ಯವನ್ನು ಭವಿಷ್ಯದ ಸುಸ್ಥಿರ ಪ್ರವಾಸೋದ್ಯಮ ಮತ್ತು ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರವನ್ನೂ ವಹಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ತಂತ್ರಜ್ಞಾನ, ಪ್ರವಾಸೋದ್ಯಮ ಮತ್ತು ಸೃಜನಾತ್ಮಕ ಉದ್ಯಮಗಳ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬಲು ಗೋವಾ ಸರಕಾರ ಮತ್ತು ನಾರ್ವೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿವೆ. ಗೋವಾಕ್ಕೆ ಭೇಟಿ ನೀಡಿದ ನಾರ್ವೆಯ ರಾಯಭಾರಿ ಹಾನ್ಸ್ ಜೇಕಬ್ ಫ್ರೈಡನ್‌ಲಂಡ್ ಅವರ ನೇತೃತ್ವದ ಪ್ರತಿನಿಧಿ ಮಂಡಳಿ ಮತ್ತು ಗೋವಾ ಸರಕಾರದ ನಡುವೆ ಈ ಕುರಿತಾಗಿ ವಿಸ್ತೃತ ಚರ್ಚೆಗಳು ನಡೆದವು.
ಡ್ರೋನ್ ತಂತ್ರಜ್ಞಾನ, ಸುಸ್ಥಿರ ಪ್ರವಾಸೋದ್ಯಮ, ಸಮುದ್ರ ಸುರಕ್ಷತೆ, ರಿನಿವೇಬಲ್ ಎನರ್ಜಿ, ಬ್ಲೂ ಎಕಾನಾಮಿ ಜತೆಗೆ ಸಂಗೀತ, ಕಲೆ ಮತ್ತು ಚಿತ್ರರಂಗ ಮುಂತಾದ ಸೃಜನಾತ್ಮಕ ವಲಯಗಳಲ್ಲಿ ಸಹಭಾಗಿತ್ವ ಬಲಪಡಿಸುವ ಕುರಿತು ಎರಡೂ ಪಕ್ಷಗಳು ಒಮ್ಮತ ವ್ಯಕ್ತಪಡಿಸಿದವು. ಪ್ರವಾಸೋದ್ಯಮದ ಗುಣಮಟ್ಟವನ್ನು ಸುಧಾರಿಸಲು, ಮೂಲಸೌಕರ್ಯ ಅಭಿವೃದ್ಧಿಯನ್ನು ವೇಗಗೊಳಿಸಲು ಮತ್ತು ಗೋವಾವನ್ನು ಜಾಗತಿಕ ಮಟ್ಟದ ಪ್ರವಾಸಿ ತಾಣವನ್ನಾಗಿ ರೂಪಿಸಲು ನಾರ್ವೆಯ ಪರಿಣಿತಿ ಉಪಯುಕ್ತವಾಗಲಿದೆ ಎಂದು ರಾಜ್ಯ ಸರಕಾರ ಅಭಿಪ್ರಾಯಪಟ್ಟಿದೆ.