ಕೇದಾರನಾಥ್ ದರ್ಶನಕ್ಕೆ ಚಾರಣವೇ ಗತಿ!
ಪ್ರತಿ ವರ್ಷ ಕೇದಾರಕ್ಕೆ ಹೋಗಲು ಅಂದಾಜು 31 ಸಾವಿರ ಹೆಲಿ ಟೂರ್ ಸೀಟ್ ಗಳನ್ನು ಪ್ರವಾಸೋದ್ಯಮ ಇಲಾಖೆ ನಿಗದಿಪಡಿಸುತ್ತದೆ. ಈ ಬಾರಿ ಬುಕಿಂಗ್ ಪ್ರಾರಂಭಗೊಂಡ ಕೇವಲ 90 ನಿಮಿಷದಲ್ಲಿ ಅಷ್ಟೂ ಸೀಟ್ ಗಳು ಮಾರಾಟವಾಗಿದೆ.
ಈ ಬಾರಿ ಕೇದಾರನಾಥ್ ದರ್ಶನಕ್ಕೆ ಹೋಗುವ ಯೋಜನೆ ಹಾಕಿಕೊಂಡವರಿಗೆ ಸದ್ಯ ನಿರಾಸೆಯಾಗಲಿದೆ. ಅದರಲ್ಲೂ ಹೆಲಿ ಟೂರ್ ಸರ್ವಿಸ್ ಬಳಕೆ ಮಾಡುವ ಉದ್ದೇಶವಿದ್ದರೆ ಈಗಲೇ ಅದನ್ನು ಕೈಬಿಡುವುದು ಒಳ್ಳೆಯದು. ಯಾಕೆಂದರೆ ಈ ಬಾರಿಯ ಚಾರ್ ಧಾಮ್ ಪ್ರವಾಸಕ್ಕೆ ಬುಕಿಂಗ್ ಮಾಡಿಕೊಂಡಿರುವ ಸಂಖ್ಯೆ ಬರೋಬ್ಬರಿ 18 ಲಕ್ಷ. ಪ್ರತಿ ವರ್ಷ ಕೇದಾರಕ್ಕೆ ಹೋಗಲು ಅಂದಾಜು 31 ಸಾವಿರ ಹೆಲಿ ಟೂರ್ ಸೀಟ್ ಗಳನ್ನು ಪ್ರವಾಸೋದ್ಯಮ ಇಲಾಖೆ ನಿಗದಿಪಡಿಸುತ್ತದೆ. ಈ ಬಾರಿ ಬುಕಿಂಗ್ ಪ್ರಾರಂಭಗೊಂಡ ಕೇವಲ 90 ನಿಮಿಷದಲ್ಲಿ ಅಷ್ಟೂ ಸೀಟ್ ಗಳು ಮಾರಾಟವಾಗಿದೆ. ಈ ಹೆಲಿ ಟೂರಿನ ರೈಡ್ ಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಚಿಂತಿಸಿದರೂ ಅದು ಅಸಾಧ್ಯ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ಈ ಕುರಿತು ಸರಕಾರ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಿದೆ ಎಂದು ಸಚಿವಾಲಯ ತಿಳಿಸಿದೆ.