ಜಿಮ್ ಕಾರ್ಬೆಟ್‌ನಲ್ಲಿ 'ಕಾರ್ಬೆಟ್ ಹೈಡವೇ ಸೆಲೆಕ್ಷನ್ಸ್' ರೆಸಾರ್ಟ್
ಇಲ್ಲಿನ 'ಇಜಾ' (Ija) ಎಂಬ ಎಲ್ಲಾ ಸಮಯದಲ್ಲೂ ಲಭ್ಯವಿರುವ ಉಪಾಹಾರ ಗೃಹವು ಅತಿಥಿಗಳಿಗೆ ಅಧಿಕೃತ ಕುಮಾವೂನಿ ತಿನಿಸುಗಳು, ಭಾರತೀಯ ಸಾಂಪ್ರದಾಯಿಕ ಹಾಗೂ ಅಂತಾರಾಷ್ಟ್ರೀಯ ಮೆನುಗಳನ್ನು ಒದಗಿಸಲಿದೆ.
ಭಾರತದ ಪ್ರಸಿದ್ಧ ವನ್ಯಜೀವಿ ತಾಣವಾದ ಜಿಮ್ ಕಾರ್ಬೆಟ್‌ನಲ್ಲಿ ಇಂಡಿಯನ್ ಹೊಟೇಲ್ಸ್ ಕಂಪೆನಿ ತನ್ನ ಹೊಸ ಐಷಾರಾಮಿ ರೆಸಾರ್ಟ್ ಆದ 'ಕಾರ್ಬೆಟ್ ಹೈಡವೇ - ಐಎಚ್‌ಸಿಎಲ್ ಸೆಲೆಕ್ಷನ್ಸ್' ಅನ್ನು ಉತ್ತರಾಖಂಡದಲ್ಲಿ ಅಧಿಕೃತವಾಗಿ ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಪ್ರಮುಖ ಹೊಟೇಲ್ ಉದ್ಘಾಟನೆಯೊಂದಿಗೆ ಉತ್ತರಾಖಂಡದಲ್ಲಿ ತನ್ನ ಇರುವಿಕೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳುವುದರ ಜತೆಗೆ, ಲೀಷರ್ ಹೊಟೇಲ್ಸ್ ಗ್ರೂಪ್‌ನೊಂದಿಗೆ (Leisure Hotels Group) ಹೊಂದಿರುವ ಪಾಲುದಾರಿಕೆಯನ್ನು ಇದು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.
ಇದನ್ನೂ ಓದಿ: ಜಿಮ್ ಕಾರ್ಬೆಟ್, ಚಾರ್‌ಧಾಮ ಯಾತ್ರೆಗೆ ಹೊಸ ರೈಲು ಸಂಪರ್ಕ
ಕೋಸಿ ನದಿಯ ದಡದಲ್ಲಿ ನೆಲೆಗೊಂಡಿರುವ 'ಕಾರ್ಬೆಟ್ ಹೈಡವೇ - ಐಎಚ್‌ಸಿಎಲ್ ಸೆಲೆಕ್ಷನ್ಸ್' ಪ್ರಕೃತಿ ಪ್ರೇಮಿಗಳಿಗೆ ಮತ್ತು ಪ್ರವಾಸಿಗರಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ. ಸುಮಾರು 7 ಎಕರೆ ಪ್ರದೇಶದಲ್ಲಿ ಹಬ್ಬಿರುವ ಈ ರೆಸಾರ್ಟ್ ಒಟ್ಟು 80 ಕೊಠಡಿಗಳನ್ನು ಹೊಂದಿದ್ದು, ನದಿಯ ಸುಂದರ ನೋಟವನ್ನು ಸವಿಯಲು ಪ್ರತ್ಯೇಕ ವ್ಯವಸ್ಥೆ ಹಾಗೂ ಆಕರ್ಷಕ ಹಸಿರು ಉದ್ಯಾನವನಗಳನ್ನು ಹೊಂದಿದೆ. ಇಲ್ಲಿನ 'ಇಜಾ' (Ija) ಎಂಬ ಎಲ್ಲಾ ಸಮಯದಲ್ಲೂ ಲಭ್ಯವಿರುವ ಉಪಾಹಾರ ಗೃಹವು ಅತಿಥಿಗಳಿಗೆ ಅಧಿಕೃತ ಕುಮಾವೂನಿ ತಿನಿಸುಗಳು, ಭಾರತೀಯ ಸಾಂಪ್ರದಾಯಿಕ ಹಾಗೂ ಅಂತಾರಾಷ್ಟ್ರೀಯ ಮೆನುಗಳನ್ನು ಒದಗಿಸಲಿದೆ. ಜತೆಗೆ, 'ಹಿಮಾಲಯ ಬಾರ್ & ಡೆಕ್' ನದಿಯ ಸುಂದರ ಪರಿಸರದ ನಡುವೆ ಉತ್ತಮ ಅನುಭವವನ್ನು ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ.
ದೇಶದ ಅತ್ಯಂತ ಆಕರ್ಷಕ ವನ್ಯಜೀವಿ ಗಮ್ಯಸ್ಥಾನಗಳಲ್ಲಿ ಒಂದಾದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವು ತನ್ನ ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಲೀಷರ್ ಹೊಟೇಲ್ಸ್ ಗ್ರೂಪ್‌ನೊಂದಿಗೆ ಕೈಜೋಡಿಸಿರುವ ಈ ನೂತನ ರೆಸಾರ್ಟ್‌ನ ಆರಂಭದಿಂದ ಕಂಪೆನಿಯ ಒಟ್ಟು ಆರು ರೆಸಾರ್ಟ್‌ಗಳು ಐಎಚ್‌ಸಿಎಲ್ ಬ್ರ್ಯಾಂಡ್ ಪೋರ್ಟ್‌ಫೋಲಿಯೊದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಐಎಚ್‌ಸಿಎಲ್‌ನ ಪೂರ್ಣ-ಸೇವಾ ವ್ಯವಹಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗೌರವ್ ಪೊಖರಿಯಾಲ್ ತಿಳಿಸಿದ್ದಾರೆ.
ಲೀಷರ್ ಹೊಟೇಲ್ಸ್ ಗ್ರೂಪ್‌ನ ನಿರ್ದೇಶಕ ವಿಭಾಸ್ ಪ್ರಸಾದ್ ಮಾತನಾಡಿ, ಐಎಚ್‌ಸಿಎಲ್ ಜತೆಗಿನ ಒಡನಾಟವನ್ನು ಮುಂದುವರಿಸಲು ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ. ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಆತಿಥ್ಯ ರಂಗದ ಪ್ರವರ್ತಕರಾಗಿರುವ ತಮ್ಮ ಗುಂಪು, ಈ ಪ್ರದೇಶವನ್ನು ಅತ್ಯುತ್ತಮ ವನ್ಯಜೀವಿ ಮತ್ತು ವಿಹಾರ ತಾಣವಾಗಿ ರೂಪುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜಿಮ್ ಕಾರ್ಬೆಟ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಗೈಡೆಡ್ ಜಂಗಲ್ ಸಫಾರಿ, ಪಕ್ಷಿವೀಕ್ಷಣೆ, ನದಿ ರಾಫ್ಟಿಂಗ್ ಮತ್ತು ಗರ್ಜಿಯಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡುವಂಥ ರೋಮಾಂಚನಕಾರಿ ಅನುಭವಗಳನ್ನು ಈ ರೆಸಾರ್ಟ್ ಮೂಲಕ ಕಲ್ಪಿಸಲಾಗುತ್ತಿದೆ.