ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತ ಮತ್ತು ಇರಾನ್ ನಡುವೆ ಮಹತ್ವದ ಒಪ್ಪಂದ
ವೀಸಾ ಪ್ರಕ್ರಿಯೆ ಸರಳಗೊಳಿಸುವುದು, ಎರಡೂ ರಾಷ್ಟ್ರಗಳ ನಡುವೆ ನೇರ ವಿಮಾನ ಸಂಪರ್ಕ ಕಲ್ಪಿಸುವುದು ಮತ್ತು ಪ್ರವಾಸೋದ್ಯಮ ಹೂಡಿಕೆಗಳಿಗೆ ಪ್ರೋತ್ಸಾಹ ನೀಡುವಂಥ ಪ್ರಮುಖ ವಿಷಯಗಳಲ್ಲಿ ಪರಸ್ಪರ ಒಡಂಬಡಿಕೆ ಮಾಡಿಕೊಂಡಿರುವ ಭಾರತ ಮತ್ತು ಇರಾನ್, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಲು ಮುಂದಾಗಿವೆ.
ಭಾರತ ಮತ್ತು ಇರಾನ್ ನಡುವಿನ ಸಾಂಸ್ಕೃತಿಕ ಸಂಬಂಧಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದೀಗ ಪ್ರವಾಸೋದ್ಯಮದ ಬೆಳವಣಿಗೆಯ ನಿಮಿತ್ತ ಎರಡೂ ರಾಷ್ಟ್ರಗಳು ಪರಸ್ಪರ ಸಹಭಾಗಿತ್ವಕ್ಕೆ ಮುಂದಾಗಿರುವುದು ವಿಶೇಷ. ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಎರಡೂ ರಾಷ್ಟ್ರಗಳ ಅಧಿಕಾರಿಗಳು ಭಾಗವಹಿಸಿ, ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದರು.
ವೀಸಾ ಪ್ರಕ್ರಿಯೆ ಸರಳಗೊಳಿಸುವುದು, ಎರಡೂ ರಾಷ್ಟ್ರಗಳ ನಡುವೆ ನೇರ ವಿಮಾನ ಸಂಪರ್ಕ ಕಲ್ಪಿಸುವುದು ಮತ್ತು ಪ್ರವಾಸೋದ್ಯಮ ಹೂಡಿಕೆಗಳಿಗೆ ಪ್ರೋತ್ಸಾಹ ನೀಡುವಂಥ ಪ್ರಮುಖ ವಿಷಯಗಳಲ್ಲಿ ಪರಸ್ಪರ ಒಡಂಬಡಿಕೆ ಮಾಡಿಕೊಂಡಿರುವ ಭಾರತ ಮತ್ತು ಇರಾನ್, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಲು ಮುಂದಾಗಿವೆ.

ಭಾರತದ Outbound Tour Operators Association of India (OTOAI) ಮತ್ತು ಇರಾನ್‌ನ Iranian Tour Operators Association (ITOA) ನಡುವೆ ಈ ಒಪ್ಪಂದ ಏರ್ಪಟ್ಟಿದ್ದು, ಇದಕ್ಕನುಗುಣವಾಗಿ ಪ್ರವಾಸೋದ್ಯಮ ವಿನಿಮಯ ಕಾರ್ಯಕ್ರಮಗಳು, ಸಂಸ್ಕೃತಿಪರ ಪ್ರದರ್ಶನಗಳು ಮತ್ತು ಜಂಟಿ ಪ್ರಚಾರ ಅಭಿಯಾನಗಳು ನಡೆಯಲಿವೆ.
ಇರಾನ್ ತನ್ನ ಐತಿಹಾಸಿಕ ನಗರಗಳು, ಪವಿತ್ರ ತಾಣಗಳು ಮತ್ತು ಸಾಂಪ್ರದಾಯಿಕ ಕಲೆಗಳನ್ನು ಭಾರತೀಯ ಪ್ರವಾಸಿಗರಿಗೆ ಪರಿಚಯಿಸಲು ಯೋಜನೆ ರೂಪಿಸಿದ್ದು, ಭಾರತವೂ ತನ್ನ ವೈವಿಧ್ಯಮಯ ಸಂಸ್ಕೃತಿ ಮತ್ತು ಹೇರಿಟೇಜ್ ತಾಣಗಳನ್ನು ಇರಾನಿಯನ್ ಪ್ರವಾಸಿಗರಿಗೆ ಪರಿಚಯಿಸಲು ಕೆಲವು ಪ್ರಮುಖ ಕಾರ್ಯಸೂಚಿಗಳನ್ನು ರೂಪಿಸಿದೆ.
ಇರಾನ್ ಪ್ರವಾಸೋದ್ಯಮ ಮಂಡಳಿ ಇತ್ತೀಚೆಗೆ ಭಾರತದ ಮೂರು ಪ್ರಮುಖ ನಗರಗಳಲ್ಲಿ ಪ್ರವಾಸೋದ್ಯಮ ರೋಡ್‌ಶೋ ಆಯೋಜಿಸಿದ್ದು, ಇದರಿಂದ ದ್ವಿಪಕ್ಷೀಯ ಸಹಕಾರ ಮತ್ತಷ್ಟು ಬಲ ಪಡೆದಿದೆ. ಈ ಪ್ರಯತ್ನವು ಎರಡೂ ದೇಶಗಳ ಪ್ರವಾಸೋದ್ಯಮ ವಲಯಕ್ಕೆ ಹೊಸ ಬಂಡವಾಳ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.