ಥಾಯ್ ನಾಗರಿಕರಿಗೆ ಉಚಿತ ಇ-ಟೂರಿಸ್ಟ್ ವೀಸಾ
ಥಾಯ್ಲೆಂಡ್‌ನ ಪ್ರವಾಸಿಗರಿಗೆ ಭಾರತ ಸರಕಾರ ಮಹತ್ವದ ವೀಸಾ ಸೌಲಭ್ಯವನ್ನು ಘೋಷಿಸಿದೆ. ಥಾಯ್ ನಾಗರಿಕರು ಇನ್ನು ಮುಂದೆ 30 ದಿನಗಳ ಇ-ಟೂರಿಸ್ಟ್ ವೀಸಾವನ್ನು ಯಾವುದೇ ಶುಲ್ಕವಿಲ್ಲದೆ ಪಡೆಯಬಹುದಾಗಿದೆ. ಈ ವೀಸಾದಲ್ಲಿ ಎರಡು ಬಾರಿ ಭಾರತ ಪ್ರವೇಶಿಸಲು ಅವಕಾಶವಿದ್ದು, ಪ್ರವಾಸಿಗರ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಬ್ಯಾಂಕಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಉಚಿತ ಡಬಲ್-ಎಂಟ್ರಿ ವೀಸಾ ಸೌಲಭ್ಯವು 2027ರ ಡಿಸೆಂಬರ್ 31ರವರೆಗೆ ಜಾರಿಯಲ್ಲಿರಲಿದೆ. ಸರ್ಕಾರವು ಮುಂದಿನ ಆದೇಶ ಹೊರಡಿಸಿದರೆ ಅವಧಿಯಲ್ಲಿ ಬದಲಾವಣೆಯಾಗಬಹುದು.
ಥಾಯ್ ನಾಗರಿಕರು ಭಾರತದ ಅಧಿಕೃತ ಇ-ವೀಸಾ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ 30 ದಿನಗಳ ಇ-ಟೂರಿಸ್ಟ್ ವೀಸಾಕ್ಕೆ ಯಾವುದೇ ವೀಸಾ ಶುಲ್ಕ ವಿಧಿಸಲಾಗುವುದಿಲ್ಲ.
ಭಾರತ ಮತ್ತು ಥಾಯ್ಲೆಂಡ್ ನಡುವಿನ ಪ್ರವಾಸೋದ್ಯಮ ಹಾಗೂ ಜನ-ಜನರ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ನಿರ್ಧಾರ ಮಹತ್ವದ್ದಾಗಿದೆ. ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ಪ್ರವಾಸೋದ್ಯಮ ಸಂಬಂಧ ವೃದ್ಧಿಸುವ ಭಾರತದ ಪ್ರಯತ್ನಕ್ಕೂ ಇದು ಉತ್ತೇಜನ ನೀಡಲಿದೆ.