ಭಾರತ ಮತ್ತು ರಷ್ಯಾ ನಾಯಕರ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಷ್ಯಾ ನಾಗರಿಕರಿಗೆ 30 ದಿನಗಳ ಉಚಿತ ಇ-ಟೂರಿಸ್ಟ್ ವೀಸಾ ಸೌಲಭ್ಯವನ್ನು ನೀಡಲಾಗುವುದು ಎಂದು ತಿಳಿಸಿದರು. ಈ ನಿರ್ಧಾರ ಶೀಘ್ರದಲ್ಲೇ ಜಾರಿಗೆ ಬರುವುದಾಗಿ ಕೇಂದ್ರ ಸರಕಾರ ಕೂಡ ತಿಳಿಸಿದೆ.

“ಭಾರತ ಮತ್ತು ರಷ್ಯಾ ನಡುವೆ ದೀರ್ಘಕಾಲದಿಂದ ಉತ್ತಮ ಸಾಂಸ್ಕೃತಿಕ ಮತ್ತು ಸ್ನೇಹಮಯ ಸಂಬಂಧವಿದ್ದು, ಈ ಹೊಸ ವೀಸಾ ಸೌಲಭ್ಯವು ಜನರ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ಪ್ರಧಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ರಷ್ಯಾ ಪ್ರವಾಸಿಗರಿಗೆ ಇ-ಟೂರಿಸ್ಟ್ ವೀಸಾ ಹಾಗೂ 30 ದಿನಗಳ ಗ್ರೂಪ್ ಟೂರಿಸ್ಟ್ ವೀಸಾ ಎರಡೂ ಉಚಿತವಾಗಿ ಲಭ್ಯವಾಗಲಿದೆ.

Travel Made Easy_ India Offers Free e-Visas to Russian Visitors


ಈ ಹೊಸ ಕ್ರಮದಿಂದ ರಷ್ಯಾ ಪ್ರವಾಸಿಗರಿಗೆ ಭಾರತದ ಪ್ರವಾಸ ಮತ್ತಷ್ಟು ಸುಲಭವಾಗಲಿದ್ದು, ಪ್ರವಾಸೋದ್ಯಮ ವಲಯಕ್ಕೆ ಹೊಸ ಚೈತನ್ಯ ದೊರಕಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೊಟೇಲ್, ಹೋಂ ಸ್ಟೇಗಳು, ಲೋಕಲ್‌ ಟೂರಿಸಂ ಸೇರಿದಂತೆ ವಿವಿಧ ಸೇವಾ ವಲಯಗಳು ಇದರ ಪ್ರಯೋಜನ ಪಡೆಯಲಿವೆ.

ಇದೇ ಸಂದರ್ಭದಲ್ಲಿ, ಭಾರತ ಮತ್ತು ರಷ್ಯಾ ದೇಶಗಳ ನಡುವೆ 2030ರವರೆಗೆ ವ್ಯಾಪಾರ, ತಂತ್ರಜ್ಞಾನ, ಸಾಂಸ್ಕೃತಿಕ ಹಾಗೂ ಆರ್ಥಿಕ ಸಹಕಾರವನ್ನು ಬಲಪಡಿಸುವ ದೀರ್ಘಕಾಲಿಕ ಯೋಜನೆಗೂ ಸಹಿ ಹಾಕಲಾಯಿತು.