ಡಿಸೆಂಬರ್ 26 ರಿಂದ ರೈಲ್ವೆ ಟಿಕೆಟ್ ದರ ಹೆಚ್ಚಳ
ಇಲಾಖೆಯ ಪ್ರಕಾರ, 215 ಕಿಲೋಮೀಟರ್‌ಗಿಂತ ಹೆಚ್ಚು ದೂರ ಪ್ರಯಾಣಿಸುವವರಿಗೆ ಮಾತ್ರ ದರ ಹೆಚ್ಚಳ ಜಾರಿಯಾಗುತ್ತದೆ. ಸಾಮಾನ್ಯ (ನಾನ್-ಎಸಿ) ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರತಿ ಕಿಲೋಮೀಟರಿಗೆ 1 ಪೈಸೆ ಹೆಚ್ಚಳ ಮಾಡಲಾಗಿದೆ. ಎಸಿ ಕೋಚ್ ರೈಲುಗಳಲ್ಲಿ ಪ್ರತಿ ಕಿಮೀ. ಗೆ 2 ಪೈಸೆ ದರ ಏರಿಕೆ ಜಾರಿಯಾಗಲಿದೆ.
ಭಾರತೀಯ ರೈಲ್ವೆ ಇಲಾಖೆ ಡಿಸೆಂಬರ್ 26, 2025 ರಿಂದ ರೈಲು ಪ್ರಯಾಣದ ಟಿಕೆಟ್ ದರವನ್ನು ಹೆಚ್ಚಿಸುವುದಾಗಿ ಅಧಿಕೃತ ಘೋಷಣೆ ಮಾಡಿದೆ. ಈ ದರ ಏರಿಕೆ ಎಕ್ಸ್‌ಪ್ರೆಸ್ ಮತ್ತು ಎಸಿ ರೈಲುಗಳ ಮೂಲಕ ದೂರ ಪ್ರಯಾಣ ಮಾಡುವವರಿಗೆ ಅನ್ವಯಿಸುತ್ತದೆ. ಕಡಿಮೆ ದೂರ ಪಯಣಿಸುವವರಿಗೆ ಮತ್ತು ಉಪನಗರ ರೈಲುಗಳ ಮೂಲಕ ಪ್ರಯಾಣಿಸುವವರಿಗೆ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇಲಾಖೆಯ ಪ್ರಕಾರ, 215 ಕಿಲೋಮೀಟರ್‌ಗಿಂತ ಹೆಚ್ಚು ದೂರ ಪ್ರಯಾಣಿಸುವವರಿಗೆ ಮಾತ್ರ ದರ ಹೆಚ್ಚಳ ಜಾರಿಯಾಗುತ್ತದೆ. ಸಾಮಾನ್ಯ (ನಾನ್-ಎಸಿ) ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರತಿ ಕಿಲೋಮೀಟರಿಗೆ 1 ಪೈಸೆ ಹೆಚ್ಚಳ ಮಾಡಲಾಗಿದೆ. ಎಸಿ ಕೋಚ್ ರೈಲುಗಳಲ್ಲಿ ಪ್ರತಿ ಕಿಲೋಮೀಟರಿಗೆ 2 ಪೈಸೆ ದರ ಏರಿಕೆ ಜಾರಿಯಾಗಲಿದೆ.
ರೈಲ್ವೆ ಇಲಾಖೆ ಈ ದರ ಏರಿಕೆಯಿಂದ ವಾರ್ಷಿಕವಾಗಿ ಸುಮಾರು 600 ಕೋಟಿ ರುಪಾಯಿ ಹೆಚ್ಚುವರಿ ಆದಾಯ ದೊರೆಯಲಿದೆ ಎಂದು ಅಂದಾಜಿಸಿದೆ. ಈ ಮೊತ್ತವನ್ನು ರೈಲ್ವೆಯ ನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರಯಾಣಿಕರ ಸುರಕ್ಷತಾ ಕ್ರಮಗಳಿಗೆ ಬಳಸಲಾಗುವುದು ಎಂದು ಇಲಾಖೆ ತಿಳಿಸಿದೆ.