Saturday, August 1, 2026
Saturday, August 1, 2026

ದೇಶೀಯ ಸಾಂಸ್ಕೃತಿಕ ಪ್ರವಾಸದತ್ತ ಭಾರತೀಯರ ಒಲವು

ಪ್ರವಾಸಿಗರು ಇತಿಹಾಸ ಪ್ರಸಿದ್ಧ ತಾಣಗಳು, ಸ್ಥಳೀಯ ಉತ್ಸವಗಳು, ಸಾಂಪ್ರದಾಯಿಕ ಆಹಾರ ಸಂಸ್ಕೃತಿ, ಕರಕುಶಲ ಕಲೆಗಳು ಹಾಗೂ ಗ್ರಾಮೀಣ ಜೀವನಶೈಲಿಯನ್ನು ಅನುಭವಿಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

ಭಾರತೀಯರು ಈಗ ಕೇವಲ ವಿಶ್ರಾಂತಿಗಾಗಿ ಮಾತ್ರವಲ್ಲ, ಸ್ಥಳೀಯ ಸಂಸ್ಕೃತಿ, ಪರಂಪರೆ, ಆಹಾರ ಮತ್ತು ಆಚರಣೆಗಳನ್ನು ಅನುಭವಿಸುವ ಉದ್ದೇಶದಿಂದ ದೇಶೀಯ ಪ್ರವಾಸಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಸ್ಕೈಸ್ಕ್ಯಾನರ್‌ನ ಇಂಡಿಯಾ ಕಲ್ಚರ್ ಟ್ರಾವೆಲ್ ಇಂಡೆಕ್ಸ್ ವರದಿ ತಿಳಿಸಿದೆ. ವರದಿ ಪ್ರಕಾರ, ಸ್ಕೈಸ್ಕ್ಯಾನರ್‌ನ ಇಂಡಿಯಾ ಕಲ್ಚರ್ ಟ್ರಾವೆಲ್ ಇಂಡೆಕ್ಸ್ ವರದಿ ಎಂದು ಹೇಳಿದ್ದಾರೆ.

ವರದಿಯ ಪ್ರಕಾರ, ಪ್ರವಾಸಿಗರು ಇತಿಹಾಸ ಪ್ರಸಿದ್ಧ ತಾಣಗಳು, ಸ್ಥಳೀಯ ಉತ್ಸವಗಳು, ಸಾಂಪ್ರದಾಯಿಕ ಆಹಾರ ಸಂಸ್ಕೃತಿ, ಕರಕುಶಲ ಕಲೆಗಳು ಹಾಗೂ ಗ್ರಾಮೀಣ ಜೀವನಶೈಲಿಯನ್ನು ಅನುಭವಿಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಪ್ರವಾಸವನ್ನು ಕೇವಲ ಪ್ರವಾಸಿ ತಾಣಗಳ ವೀಕ್ಷಣೆಗೆ ಸೀಮಿತಗೊಳಿಸದೆ, ಆ ಪ್ರದೇಶದ ಸಂಸ್ಕೃತಿ ಮತ್ತು ಜನಜೀವನವನ್ನು ಅರಿಯುವ ಪ್ರಯತ್ನ ಹೆಚ್ಚಾಗಿದೆ.

Untitled design - 2026-08-01T153457.882

ಸ್ಕೈಸ್ಕ್ಯಾನರ್ ಅಧ್ಯಯನವು ಭಾರತದ ಸಾಂಸ್ಕೃತಿಕ ಪ್ರವಾಸದ ಬೆಳವಣಿಗೆಯನ್ನು ರೂಪಿಸುತ್ತಿರುವ ಐದು ಪ್ರಮುಖ ಪ್ರವೃತ್ತಿಗಳನ್ನು ಗುರುತಿಸಿದೆ. ವಿಶೇಷವಾಗಿ ಸ್ಥಳೀಯ ಉತ್ಸವಗಳಲ್ಲಿ ಭಾಗವಹಿಸುವುದು, ಪ್ರಾದೇಶಿಕ ಆಹಾರವನ್ನು ಸವಿಯುವುದು, ಪರಂಪರೆಯ ಕಲಾ-ಸಂಸ್ಕೃತಿಯನ್ನು ಅನುಭವಿಸುವುದು ಮತ್ತು ಕಡಿಮೆ ಪರಿಚಿತ ಸಾಂಸ್ಕೃತಿಕ ತಾಣಗಳನ್ನು ಅನ್ವೇಷಿಸುವ ಪ್ರವೃತ್ತಿ ವೇಗವಾಗಿ ಬೆಳೆಯುತ್ತಿದೆ.

ಪ್ರವಾಸೋದ್ಯಮ ಕ್ಷೇತ್ರದ ತಜ್ಞರ ಪ್ರಕಾರ, ಈ ಬದಲಾವಣೆ ದೇಶೀಯ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡುವ ಜತೆಗೆ ಸ್ಥಳೀಯ ಸಮುದಾಯಗಳು, ಸಾಂಪ್ರದಾಯಿಕ ಕೈಗಾರಿಕೆಗಳು ಹಾಗೂ ಸಣ್ಣ ಉದ್ಯಮಗಳಿಗೆ ಆರ್ಥಿಕ ಲಾಭ ತಂದುಕೊಡಲಿದೆ. ಸಂಸ್ಕೃತಿ ಆಧಾರಿತ ಪ್ರವಾಸದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಗಳು ತಮ್ಮ ಪರಂಪರೆ, ಉತ್ಸವಗಳು ಮತ್ತು ಸ್ಥಳೀಯ ವೈಶಿಷ್ಟ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಚಾರ ಮಾಡುವತ್ತ ಗಮನ ಹರಿಸುವ ಸಾಧ್ಯತೆಯಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!