Thursday, August 6, 2026
Thursday, August 6, 2026

ನಾಲ್ಕು ಲಕ್ಷದೊಳಗೆ ಜಪಾನ್‌ ಟೂರ್‌-ಹೇಗೆ ಗೊತ್ತಾ?

ಈ ವಿಶೇಷ ಪ್ರವಾಸವು ದೆಹಲಿಯಿಂದ ಆಲ್ ನಿಪ್ಪಾನ್ ಏರ್‌ವೇಸ್ ವಿಮಾನದ ಮೂಲಕ ಆರಂಭವಾಗಲಿದ್ದು, 10 ದಿನಗಳ ಅವಧಿಯಲ್ಲಿ ಜಪಾನ್‌ನ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ನಗರಗಳಾದ ಟೋಕಿಯೋ, ಕ್ಯೋಟೋ, ಒಸಾಕಾ, ನಾರಾ, ಹಿರೋಷಿಮಾ ಮತ್ತು ಮೌಂಟ್ ಫ್ಯೂಜಿಯನ್ನು ಕವರ್ ಮಾಡಲಿದೆ.

ಜಪಾನ್‌ನ ಸುಂದರ ಪ್ರಕೃತಿ, ಶ್ರೀಮಂತ ಸಂಸ್ಕೃತಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ವೈಭವವನ್ನು ಕಣ್ಣುಂಬಿಕೊಳ್ಳಲು ಬಯಸುವ ಭಾರತೀಯ ಪ್ರವಾಸಿಗರಿಗಾಗಿ ಭಾರತೀಯ ರೈಲ್ವೆ ಆಹಾರ ಸೌಲಭ್ಯ ಮತ್ತು ಪ್ರವಾಸೋದ್ಯಮ ನಿಗಮವು ದೆಹಲಿಯಿಂದ ಆಲ್-ಇನ್‌ಕ್ಲೂಸಿವ್ (All-Inclusive) ಅಂತಾರಾಷ್ಟ್ರೀಯ ಪ್ರವಾಸಿ ಪ್ಯಾಕೇಜ್ ಅನ್ನು ಪ್ರಕಟಿಸಿದೆ. 'ಜಪಾನ್ x ದೆಹಲಿ' ಎಂಬ ಹೆಸರಿನ ಈ 10 ದಿನ ಮತ್ತು 9 ರಾತ್ರಿಗಳ ಸಮಗ್ರ ಪ್ರವಾಸಿ ಪ್ಯಾಕೇಜ್‌ ಸೆಪ್ಟೆಂಬರ್ 6, 2026 ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ವನ್ಯಜೀವಿ ಸಫಾರಿಗೆ ಐಆರ್‌ಸಿಟಿಸಿಯ ಪ್ಯಾಕೇಜ್

ಈ ವಿಶೇಷ ಪ್ರವಾಸವು ದೆಹಲಿಯಿಂದ ಆಲ್ ನಿಪ್ಪಾನ್ ಏರ್‌ವೇಸ್ ವಿಮಾನದ ಮೂಲಕ ಆರಂಭವಾಗಲಿದ್ದು, 10 ದಿನಗಳ ಅವಧಿಯಲ್ಲಿ ಜಪಾನ್‌ನ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ನಗರಗಳಾದ ಟೋಕಿಯೋ, ಕ್ಯೋಟೋ, ಒಸಾಕಾ, ನಾರಾ, ಹಿರೋಷಿಮಾ ಮತ್ತು ಮೌಂಟ್ ಫ್ಯೂಜಿಯನ್ನು ಕವರ್ ಮಾಡಲಿದೆ. ಈ ಪ್ರವಾಸದ ಪ್ರಮುಖ ಆಕರ್ಷಣೆಯಾಗಿ ಪ್ರಯಾಣಿಕರು ವಿಶ್ವಪ್ರಸಿದ್ಧ 'ಶಿಂಕಾನ್ಸೆನ್ ಬುಲೆಟ್ ಟ್ರೇನ್'ನಲ್ಲಿ ಪ್ರಯಾಣಿಸುವ ಅವಕಾಶ ಪಡೆಯಲಿದ್ದಾರೆ. ಅಲ್ಲದೆ ಕ್ಯೋಟೋದ ಬಿದಿರಿನ ಕಾಡು, ಮೌಂಟ್ ಫುಜಿಯ ಸರೋವರ ಕ್ರೂಸ್ ಹಾಗೂ ಹಿರೋಷಿಮಾ ಪೀಸ್ ಮೆಮೋರಿಯಲ್ ಪಾರ್ಕ್‌ಗಳಿಗೂ ಭೇಟಿ ನೀಡಲಾಗುತ್ತದೆ.

ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಐಆರ್‌ಸಿಟಿಸಿ ದರಗಳನ್ನು ನಿಗದಿಪಡಿಸಿದ್ದು, ಟ್ರಿಪಲ್ ಶೇರಿಂಗ್ ಆಧಾರದ ಮೇಲೆ ಪ್ರತಿಯೊಬ್ಬರಿಗೆ ರು. 3,45,999 ದರ ನಿಗದಿಯಾಗಿದೆ. ಟ್ವಿನ್ ಶೇರಿಂಗ್ ಪಡೆಯುವ ಪ್ರಯಾಣಿಕರಿಗೆ ರು. 3,49,999 ಹಾಗೂ ಸಿಂಗಲ್ ಆಕ್ಯುಪೆನ್ಸಿ ಬಯಸುವವರಿಗೆ ರು. 4,73,999 ದರ ಇರಲಿದೆ. 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಬೆಡ್ ಸಹಿತ ರು. 2,92,499 ಹಾಗೂ ಬೆಡ್ ರಹಿತ ಸೌಲಭ್ಯಕ್ಕೆ ರು.2,63,999 ದರವನ್ನು ನಿಗದಿಪಡಿಸಲಾಗಿದೆ.

ಈ ಆಲ್-ಇನ್‌ಕ್ಲೂಸಿವ್ ಪ್ಯಾಕೇಜ್‌ನಲ್ಲಿ ದೆಹಲಿಯಿಂದ ಟೋಕಿಯೋಗೆ ಎರಡೂ ಕಡೆಯ ವಿಮಾನ ಟಿಕೆಟ್‌ಗಳು, ಜಪಾನ್ ಪ್ರವಾಸಿ ವೀಸಾ ಶುಲ್ಕ, 4-ಸ್ಟಾರ್ ಹೊಟೇಲ್‌ಗಳಲ್ಲಿ ವಸತಿ ಸೌಕರ್ಯ, ದಿನನಿತ್ಯದ ಮೂರು ಹೊತ್ತಿನ ಆಹಾರ, ಸ್ಥಳೀಯ ಸಾರಿಗೆ ಹಾಗೂ ಟ್ರಾವೆಲ್ ಇನ್ಶೂರೆನ್ಸ್ ಸೌಲಭ್ಯಗಳು ಒಳಗೊಂಡಿವೆ. ಪ್ರಯಾಣ ಕೈಗೊಳ್ಳಲು ಬಯಸುವವರ ಪಾಸ್‌ಪೋರ್ಟ್ ಕನಿಷ್ಠ 6 ತಿಂಗಳ ಸಿಂಧುತ್ವ ಹೊಂದಿರಬೇಕಾಗಿದ್ದು, ಪರಿಮಿತ ಸೀಟುಗಳು ಲಭ್ಯವಿರುವುದರಿಂದ ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡ ಬುಕಿಂಗ್ ಮಾಡಿಕೊಳ್ಳಲು ಸೂಚಿಸಲಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ