Monday, September 7, 2026
Monday, September 7, 2026

ಗಂಗೆಯಲ್ಲಿ ಜಪಾನ್ ರಾಯಭಾರಿಯ ಪವಿತ್ರ ಸ್ನಾನ: ಅವಿಸ್ಮರಣೀಯ ಅನುಭವ

ಜನ್ಮಾಷ್ಟಮಿಯಂದು ಹೃಷಿಕೇಶದ ಗಂಗಾನದಿಯಲ್ಲಿ ಮೂರು ಬಾರಿ ಪವಿತ್ರ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದ ಜಪಾನ್ ರಾಯಭಾರಿ ಒನೊ ಕೆಯಿಚಿ, ಇದೊಂದು ಅವಿಸ್ಮರಣೀಯ ಆಧ್ಯಾತ್ಮಿಕ ಅನುಭವವೆಂದು ಬಣ್ಣಿಸಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಗೌರವಿಸಿ ಅವರು ಹಂಚಿಕೊಂಡ ಈ ಸುಂದರ ಕ್ಷಣಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಭಾರತದಲ್ಲಿನ ಜಪಾನ್ ರಾಯಭಾರಿ ಒನೊ ಕೆಯಿಚಿ ಅವರು ಜನ್ಮಾಷ್ಟಮಿ ಹಬ್ಬದ ವಾರಾಂತ್ಯದಲ್ಲಿ ಉತ್ತರಾಖಂಡದ ಪವಿತ್ರ ಕ್ಷೇತ್ರ ಹೃಷಿಕೇಶಕ್ಕೆ ಭೇಟಿ ನೀಡಿ ಗಂಗಾನದಿಯಲ್ಲಿ ಮೂರು ಬಾರಿ ಪೂರ್ಣವಾಗಿ ಮುಳುಗೆದ್ದು ಪವಿತ್ರ ಸ್ನಾನ ಮಾಡಿದ್ದಾರೆ. ಈ ಸುಂದರ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನದಿಯ ದಡದಲ್ಲಿ ದೀಪ ಬೆಳಗಿ, ಕೈಮುಗಿದು ಪ್ರಾರ್ಥಿಸುತ್ತಾ ನಿಂತಿರುವ ಚಿತ್ರಗಳನ್ನು ಹಂಚಿಕೊಂಡ ರಾಯಭಾರಿಯವರು, "ಕೊನೆಗೂ ರಿಷಿಕೇಶದ ಗಂಗೆಯಲ್ಲಿ ಮೂರು ಬಾರಿ ಪೂರ್ಣ ಮುಳುಗು ಹಾಕಿದೆ! ಇದು ವಿಸ್ಮಯ, ನಮ್ರತೆ ಮತ್ತು ಕೃತಜ್ಞತೆಯಿಂದ ಕೂಡಿದ ಮರೆಯಲಾಗದ ಅನುಭವ," ಎಂದು ಬರೆದುಕೊಂಡಿದ್ದಾರೆ. ಶತಮಾನಗಳಿಂದ ನಡೆದುಬಂದಿರುವ ಸಂಪ್ರದಾಯದ ನಡುವೆ ತಮಗೆ ಆಳವಾದ ಆಧ್ಯಾತ್ಮಿಕ ಅನುಭವವಾಯಿತು ಎಂದು ಅವರು ತಿಳಿಸಿದ್ದಾರೆ.

ಅವರ ಈ ಪೋಸ್ಟ್‌ಗೆ ಇಂಟರ್ನೆಟ್‌ನಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಭಾರತೀಯ ಸಂಸ್ಕೃತಿಯ ಮೇಲಿನ ಅವರ ಗೌರವವನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕೆಲವರು ಅಲ್ಲಿನ ಚಹಾ ಸವಿಯಲು ಮತ್ತು ಸಾಹಸಮಯ ರಾಫ್ಟಿಂಗ್ ಪ್ರಯತ್ನಿಸಲು ಸಲಹೆ ನೀಡಿದರೆ, ಇನ್ನು ಕೆಲವರು ಭಾರತ ಮತ್ತು ಜಪಾನ್ ನಡುವಿನ ನಿಸರ್ಗ ಪ್ರೇಮ ಹಾಗೂ ಸಾಂಸ್ಕೃತಿಕ ಸಂಬಂಧವನ್ನು ನೆನಪಿಸಿಕೊಂಡಿದ್ದಾರೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!