Wednesday, July 15, 2026
Wednesday, July 15, 2026

ಪ್ರವಾಸಿಗರಿಗೆ ಶಾಕ್‌ ನೀಡಿದ ಜಪಾನ್‌ ಸರಕಾರ

ಜುಲೈ 1ರಿಂದ ವೀಸಾ ಶುಲ್ಕ ಐದು ಪಟ್ಟು ಏರಿಕೆ, ಭಾರತೀಯರಿಗೆ ವಿನಾಯಿತಿ ನೀಡಿದ ಜಪಾನ್‌ ಸರಕಾರ

ಜಪಾನ್‌ಗೆ ಪ್ರವಾಸ ಹೋಗುವ ಕನಸು ಕಾಣುತ್ತಿರುವ ವಿದೇಶಿ ಪ್ರವಾಸಿಗರಿಗೆ ಒಂದು ಶಾಕ್‌ ಕಾದಿದೆ. ಜಪಾನ್ ಸರಕಾರವು ಜುಲೈ, 2026ರಿಂದ ವಿದೇಶಿ ನಾಗರಿಕರ ವೀಸಾ ಶುಲ್ಕವನ್ನು ಐದು ಪಟ್ಟು ಹೆಚ್ಚಿಸಲು ನಿರ್ಧರಿಸಿದೆ. ಇದು ಸುಮಾರು ಐದು ದಶಕಗಳ ಬಳಿಕ ವೀಸಾ ಶುಲ್ಕದಲ್ಲಿ ಮಾಡಲಾಗುತ್ತಿರುವ ಮೊದಲ ದೊಡ್ಡ ಪರಿಷ್ಕರಣೆ ಎನ್ನಲಾಗಿದೆ.

ಈಗಿರುವ ವ್ಯವಸ್ಥೆಯಲ್ಲಿ ಏಕ ಪ್ರವೇಶ (Single Entry) ವೀಸಾ ಶುಲ್ಕ 3,000 ಯೆನ್ ಆಗಿದ್ದರೆ, ಹೊಸ ನಿಯಮದಂತೆ ಅದು 15,000 ಯೆನ್ ಆಗಲಿದೆ. ಅದೇ ರೀತಿ ಬಹು ಪ್ರವೇಶ (Multiple Entry) ವೀಸಾ ಶುಲ್ಕ 6,000 ಯೆನ್‌ನಿಂದ 30,000 ಯೆನ್‌ಗೆ ಏರಿಕೆಯಾಗಲಿದೆ. ಭಾರತೀಯ ಕರೆನ್ಸಿಯಲ್ಲಿ ಇದು ಅಂದಾಜು 8,700 ರು. ರಿಂದ 17,500 ರು.ವರೆಗೆ ವೆಚ್ಚವಾಗುವ ಸಾಧ್ಯತೆ ಇದೆ.

Untitled design (81)

1978ರ ಬಳಿಕ ಮೊದಲ ಪರಿಷ್ಕರಣೆ

ಜಪಾನ್ ಸರಕಾರದ ಪ್ರಕಾರ, 1978ರ ಬಳಿಕ ಇದೇ ಮೊದಲ ಬಾರಿಗೆ ವೀಸಾ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಹೆಚ್ಚುತ್ತಿರುವ ಆಡಳಿತಾತ್ಮಕ ವೆಚ್ಚ, ಹಣದುಬ್ಬರ ಮತ್ತು ಕರೆನ್ಸಿ ವಿನಿಮಯ ದರಗಳ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಜಪಾನ್ ವಿಶ್ವದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಚೆರ್ರಿ ಹೂಗಳ ಸೊಬಗು, ಪುರಾತನ ದೇವಾಲಯಗಳು, ಮೌಂಟ್ ಫುಜಿ, ಆಧುನಿಕ ನಗರ ಜೀವನ ಹಾಗೂ ವಿಶಿಷ್ಟ ಸಂಸ್ಕೃತಿ ಪ್ರವಾಸಿಗರನ್ನು ದೊಡ್ಡ ಸಂಖ್ಯೆಯಲ್ಲಿ ಸೆಳೆಯುತ್ತಿವೆ. ಯೆನ್ ಮೌಲ್ಯ ಕುಸಿದ ಕಾರಣ ಕಳೆದ ಕೆಲವು ವರ್ಷಗಳಲ್ಲಿ ಜಪಾನ್ ಪ್ರವಾಸವು ವಿದೇಶಿ ಪ್ರವಾಸಿಗರಿಗೆ ತುಸು ಕೈಗೆಟಕುವಂತಾಗಿತ್ತು. ಆದರೆ, ಹೊಸ ವೀಸಾ ಶುಲ್ಕ ಏರಿಕೆಯಿಂದ ಪ್ರವಾಸ ವೆಚ್ಚ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.

ಭಾರತೀಯರಿಗೆ ವಿನಾಯಿತಿ

ಆದಾಗ್ಯೂ, ಭಾರತೀಯ ಪ್ರವಾಸಿಗರಿಗೆ ಒಂದು ಪ್ರಮುಖ ವಿನಾಯಿತಿ ಇದೆ. ಜಪಾನ್ ಮತ್ತು ಭಾರತದ ನಡುವಿನ ವಿಶೇಷ ದ್ವಿಪಕ್ಷೀಯ ವ್ಯವಸ್ಥೆಯ ಕಾರಣದಿಂದ ಭಾರತೀಯ ನಾಗರಿಕರಿಗೆ ವೀಸಾ ಶುಲ್ಕದಲ್ಲಿ ಈ ಐದು ಪಟ್ಟು ಏರಿಕೆ ಅನ್ವಯಿಸುವುದಿಲ್ಲ ಎಂದು ನಂತರ ಜಪಾನ್ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ಭಾರತೀಯರು ಹಿಂದಿನಂತೆ 500 ರು.ವೀಸಾ ಶುಲ್ಕ (ಜತೆಗೆ ವಿ‌ಎಫ್‌ಎಸ್ ಸೇವಾ ಶುಲ್ಕ) ಪಾವತಿಸಿ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...