ಕರ್ನಾಟಕ ಸರ್ಕಾರವು ಕರಾವಳಿ ಪ್ರವಾಸೋದ್ಯಮ ನೀತಿ ರೂಪಿಸಲು ಸಜ್ಜಾಗಿದ್ದು, ಖಾಸಗಿ ಸಂಸ್ಥೆಗಳಿಗೆ ಈ ಅಭಿವೃಧ್ಧಿ ಕಾರ್ಯದಲ್ಲಿ ಕೈ ಜೋಡಿಸಲು ಅಹ್ವಾನ ನೀಡಿದೆ. ಬೆಂಗಳೂರಿನಲ್ಲಿ ನಡೆದ ಪ್ರವಾಸೋದ್ಯಮ ಮತ್ತು ಆತಿಥ್ಯ ಸಮಾವೇಶದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, “ಕೇರಳ ಮತ್ತು ಗೋವಾ ಮಾದರಿಯಲ್ಲಿ ಕರ್ನಾಟಕದ ಕರಾವಳಿ ಸಂಪನ್ಮೂಲಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರಗೊಳಿಸುವ ನಿಟ್ಟಿನಲ್ಲಿ ಈ ಹೊಸ ನೀತಿಯನ್ನು ತರುವ ಉದ್ದೇಶವಿದೆ” ಎಂಬುದಾಗಿ ತಿಳಿಸಿದರು.

ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಸಹ ಮಾತನಾಡಿ, ರಾಜ್ಯ ಸರ್ಕಾರವು ಹೊಸ ಕರಾವಳಿ ಪ್ರವಾಸೋದ್ಯಮ ನೀತಿಯಡಿ 40 ಪ್ರಮುಖ ಕರಾವಳಿ ಪ್ರದೇಶಗಳನ್ನು ಅಭಿವೃಧ್ಧಿ ಪಡಿಸಲು ಗುರುತಿಸಿರುವುದಾಗಿ ಹೇಳಿದರು. “ಕರ್ನಾಟಕವು ಸುಮಾರು 320 ಕಿಮೀ ಉದ್ದದ ಸುಂದರ ಕರಾವಳಿಯನ್ನು ಹೊಂದಿದೆ. ಕರಾವಳಿ ಪ್ರವಾಸೋದ್ಯಮವು ನಮ್ಮ ಪ್ರಮುಖ ಆದ್ಯತೆಯಾಗಿದೆ ಮತ್ತು ಕರಾವಳಿಯ ಸುಸ್ಥಿರ ಅಭಿವೃದ್ಧಿಗಾಗಿ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯನ್ನು ರಚಿಸಲು ಸರ್ಕಾರ ತೀರ್ಮಾನಿಸಿದೆ” ಎಂದು ಅವರು ತಿಳಿಸಿದರು.

Maravante

ಕರಾವಳಿಯ ಈ ಅಭಿವೃಧ್ಧಿಗೊಳಿಸಲು, ಉನ್ನತ ರೆಸಾರ್ಟ್‌ಗಳನ್ನು ನಿರ್ಮಿಸಲು ಹಾಗೂ ಉತ್ತಮ ಪ್ರವಾಸೋದ್ಯಮ ಮೂಲಸೌಕರ್ಯಗಳನ್ನು ಒದಗಿಸಲು ಖಾಸಗಿ ಸಂಸ್ಥೆಗಳು ಕೈ ಜೋಡಿಸುವಂತೆ ಆಹ್ವಾನಿಸಿದರು. ಕರಾವಳಿ ಕರ್ನಾಟಕವನ್ನು “ಪ್ರವಾಸೋದ್ಯಮದ ನವ ಅಧ್ಯಾಯ” ಎಂದು ವರ್ಣಿಸಿದ ಪಾಟೀಲರು, ಈಗಾಗಲೇ ತಣ್ಣೀರುಭಾವಿ ಕಡಲತೀರ, ಸೋಮೇಶ್ವರ ಬೀಚ್, ಮರವಂತೆ ಬೀಚ್ ಮತ್ತು ಹೊನ್ನಾವರ ಕಡಲತೀರದಂತಹ ಪ್ರಮುಖ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.