ಕೇರಳದ ಕೊಚ್ಚಿಯಲ್ಲಿ ಕರ್ನಾಟಕ ಟೂರಿಸಂ ಸೊಸೈಟಿ (KTS) ವತಿಯಿಂದ ನಿನ್ನೆ ಆಯೋಜಿಸಲಾದ ಡೆಸ್ಟಿನೇಷನ್ ಪ್ರಮೊಷನ್ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕೇರಳದ ಟ್ರಾವೆಲ್ ಟ್ರೇಡ್ ವಲಯದ ಪ್ರಮುಖ ಪ್ರತಿನಿಧಿಗಳಿಗಾಗಿ ನಡೆಸಿದ ಈ ಕಾರ್ಯಕ್ರಮದಲ್ಲಿ, ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು, ಹೊಸ ಪ್ರವಾಸ ವಲಯಗಳು ಹಾಗೂ ರಾಜ್ಯಗಳ ನಡುವೆ ಉಂಟಾಗಬಹುದಾದ ವ್ಯಾವಹಾರಿಕ ಚಟುವಟಿಕೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಯಿತು.

KST hosts tourism promo in Kerala

ಈ ಸಂದರ್ಭದಲ್ಲಿ, ಕೇರಳ ಮೂಲದ ಟ್ರಾವೆಲ್ ಏಜೆಂಟ್‌ಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕರ್ನಾಟಕದ ಪ್ರವಾಸೋದ್ಯಮ ಸಂಪನ್ಮೂಲಗಳು, ಅಭಿವೃದ್ಧಿಯಾಗುತ್ತಿರುವ ಪ್ರವಾಸ ವಲಯ, ಮತ್ತು ಎರಡು ರಾಜ್ಯಗಳ ನಡುವಿನ ಪ್ರವಾಸಿ ಸಂಬಂಧವನ್ನು ಬಲಪಡಿಸುವ ಸಾಧ್ಯತೆಗಳ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲಾಯಿತು.

Destination promotion programme


ಈ ಕುರಿತು ಮಾತನಾಡಿದ ಕರ್ನಾಟಕ ಟೂರಿಸಂ ಸೊಸೈಟಿ ಪ್ರಧಾನ ಕಾರ್ಯದರ್ಶಿ ಜಗದೀಶ್, “ಪ್ರವಾಸಿಗರಿಗೆ ಸುಗಮ ಹಾಗೂ ಸಮೃದ್ಧ ಪ್ರವಾಸಿ ಅನುಭವಗಳನ್ನು ನೀಡಲು ಎರಡೂ ರಾಜ್ಯಗಳು ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಕೈ ಜೋಡಿಸಿ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.