ಕೆಂಪೇಗೌಡ ವಿಮಾನ ನಿಲ್ದಾಣದ ಮುಡಿಗೇರಿದೆ 10 ಜಾಗತಿಕ ಪ್ರಶಸ್ತಿ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಹಾರ, ಪಾನೀಯ (ಎಫ್‌ಎಬಿ) ಹಾಗೂ ಆತಿಥ್ಯ ವ್ಯವಸ್ಥೆಯು ಜಾಗತಿಕ ಮಟ್ಟದಲ್ಲಿ10 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಜಾಗತಿಕ ಮನ್ನಣೆ ಗಳಿಸಿದೆ. ಪ್ರಶಸ್ತಿಗಳ ಮಾಹಿತಿ ನಿಮಗಾಗಿ.
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 10 ಪ್ರಶಸ್ತಿಗಳನ್ನು ಗೆದ್ದು ಭಾರತದ ಹಿರಿಮೆಯನ್ನುಇನ್ನಷ್ಟು ಹೆಚ್ಚಿಸಿದೆ. ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ ವಿಮಾನ ನಿಲ್ದಾಣದ ಆಹಾರ, ಪಾನೀಯ (ಎಫ್‌ಎಬಿ) ಹಾಗೂ ಆತಿಥ್ಯ ವ್ಯವಸ್ಥೆಯು ಸಮ್ಮೇಳನದಲ್ಲಿ ಒಂದೇ ಬಾರಿಗೆ ಹತ್ತು ಪ್ರಶಸ್ತಿಗಳನ್ನು ಪಡೆದ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಶಸ್ತಿಗಳ ವಿವರ
ವರ್ಷದ ಅತ್ಯುತ್ತಮ ಲಾಂಜ್-ಪ್ರಾದೇಶಿಕ ಹಾಗೂ ಜಾಗತಿಕ, ವಿಮಾನ ನಿಲ್ದಾಣದ ಎಫ್ ಅಂಡ್ ಬಿ ವರ್ಷದ ಕೊಡುಗೆ-ಸೆನ್ಸ್ ಆಫ್ ಪ್ಲೇಸ್-ಪ್ರಾದೇಶಿಕ ಮತ್ತು ಜಾಗತಿಕ, ಅತ್ಯುತ್ತಮ ರೆಸ್ಟೋರೆಂಟ್ ವಿನ್ಯಾಸ- ಪ್ರಾದೇಶಿಕ, ವರ್ಷದ ವಿಮಾನ ನಿಲ್ದಾಣದ ಲಾಂಜ್ ಉದ್ಘಾಟನೆ-ಪ್ರಾದೇಶಿಕ ಮತ್ತು ಜಾಗತಿಕ, ವರ್ಷದ ವಿಮಾನ ನಿಲ್ದಾಣದ ಕ್ಯಾಶುಯಲ್ ಡೈನಿಂಗ್ ರೆಸ್ಟೋರೆಂಟ್ (20 ದಶಲಕ್ಷ ಪ್ರಯಾಣಿಕರ ಒಳಗಿನ ವಿಮಾನ ನಿಲ್ದಾಣ)- ಪ್ರಾದೇಶಿಕ ಪ್ರಶಸ್ತಿಗಳು ಲಭಿಸಿವೆ.
ಟರ್ಮಿನಲ್ 2ಕ್ಕೆ ಸಂದಿರುವ ಅಂತಾರಾಷ್ಟ್ರೀಯ ಗೌರವಗಳು : ಯುನೆಸ್ಕೋ ಪ್ರಿಕ್ಸ್ ವರ್ಸೈಲ್ಸ್ 2023: ಟರ್ಮಿನಲ್ 2 ಅನ್ನು 'ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ' ಎಂದು ಗುರುತಿಸಲಾಗಿದೆ ಮತ್ತು 'ವರ್ಲ್ಡ್ ಸ್ಪೆಷಲ್ ಪ್ರೈಜ್ ಫಾರ್ ಆನ್ ಇಂಟೀರಿಯರ್ 2023' ಪ್ರಶಸ್ತಿಯನ್ನು ಗೆದ್ದಿದೆ.
ಸ್ಕೈಟ್ರಾಕ್ಸ್ 5-ಸ್ಟಾರ್ ಏರ್‌ಪೋರ್ಟ್ ಟರ್ಮಿನಲ್ ರೇಟಿಂಗ್: ಭಾರತದಲ್ಲೇ 5-ಸ್ಟಾರ್ ರೇಟಿಂಗ್ ಪಡೆದ ಮೊದಲ ವಿಮಾನ ನಿಲ್ದಾಣದ ಟರ್ಮಿನಲ್ ಎಂಬ ಹೆಗ್ಗಳಿಕೆ ಗಳಿಸಿದೆ. ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಐಜಿಬಿಸಿ) ಪ್ಲಾಟಿನಂ ಸರ್ಟಿಫಿಕೇಶನ್: ಸುಸ್ಥಿರ ವಿನ್ಯಾಸ ಮತ್ತು ನಿರ್ಮಾಣಕ್ಕಾಗಿ ಈ ಪ್ರಮಾಣೀಕರಣವನ್ನು ಪಡೆದಿದೆ. ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್ (ಎಸಿಐ) ಏರ್‌ಪೋರ್ಟ್ ಸರ್ವಿಸ್ ಕ್ವಾಲಿಟಿ (ಎಎಸ್‌ಕ್ಯೂ) ಅವಾರ್ಡ್: 'ಬೆಸ್ಟ್ ಏರ್‌ಪೋರ್ಟ್ ಫಾರ್ ಅರೈವಲ್ಸ್ ಗ್ಲೋಬಲಿ' ಪ್ರಶಸ್ತಿ ಪಡೆದಿದೆ .