ಆಂಧ್ರಪ್ರದೇಶದಲ್ಲಿ ಕೇರಳ ಶೈಲಿಯ ಹೌಸ್‌ಬೋಟ್
ಸಾಹಸ ಪ್ರವಾಸೋದ್ಯಮವನ್ನು ಹೆಚ್ಚಿಸುವುದು, ಕುಟುಂಬಗಳನ್ನು ಆಕರ್ಷಿಸುವುದು ಮತ್ತು ರಾಜ್ಯದ ನೈಸರ್ಗಿಕ ಮತ್ತು ಸಾಂಸ್ಕೃತಿಕ ಸೌಂದರ್ಯವನ್ನು ಪ್ರದರ್ಶಿಸುವ ಉದ್ದೇಶದೊಂದಿಗೆ ಆಂಧ್ರಪ್ರದೇಶ ಪ್ರವಾಸೋದ್ಯಮ ಈ ಯೋಜನೆಯನ್ನು ಸಿದ್ಧಪಡಿಸಿದೆಯಾದರೂ, ಈ ಮೂಲಕ ಹೊಸ ಉದ್ಯೋಗಾವಕಾಶಗಳೂ ಸೃಷ್ಟಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಆಂಧ್ರಪ್ರದೇಶವು ಹೌಸ್‌ಬೋಟ್ ಪ್ರವಾಸೋದ್ಯಮಕ್ಕೆ ಸಜ್ಜಾಗಿದ್ದು, ಕೇರಳ ಶೈಲಿಯ ಹಿನ್ನೀರಿನ ಮೋಡಿಯನ್ನು ಸ್ಥಳೀಯರಿಗೆ ಮತ್ತು ಸಂದರ್ಶಕರಿಗೆ ನೀಡಲು ತಯಾರಿ ನಡೆಸಿಕೊಂಡಿದೆ. ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಭಾಗವಾಗಿ, ವಿಜಯವಾಡದ ಗಂಡಿಕೋಟ, ಸೂರ್ಯಲಂಕಾ, ರಾಜಮಹೇಂದ್ರವರಂ ಮತ್ತು ಭವಾನಿ ದ್ವೀಪಗಳಲ್ಲಿ ಸಂಕ್ರಾಂತಿಯಂದು ಐದು ಹೌಸ್‌ಬೋಟ್‌ಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಿದೆ. ಕೇರಳದ ಖಾಸಗಿ ನಿರ್ವಾಹಕರು ದೋಣಿಗಳನ್ನು ನಿರ್ವಹಿಸಲು ಆಂಧ್ರಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ, ಹತ್ತು ಸ್ಥಳಗಳಿಗೆ ಈ ಯೋಜನೆಯನ್ನು ವಿಸ್ತರಿಸಲು ಚಿಂತನೆ ನಡೆಸಿರುವುದಾಗಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಅಂದಾಜಿನ ಪ್ರಕಾರ, ಪ್ರತಿ ದೋಣಿ ನಾಲ್ಕು ಪ್ರಯಾಣಿಕರನ್ನು ಹೊತ್ತೊಯ್ಯಲಿದ್ದು, ನದಿಗಳು, ಜಲಾಶಯಗಳು ಅಥವಾ ಹಿನ್ನೀರಿನಲ್ಲಿ 20-30 ಕಿಮೀ ಸಂಚಾರ ನಡೆಸಲಿದೆ. ಅಲ್ಲದೆ ಪ್ರವಾಸಿಗರಿಗೆ ರಾತ್ರಿಯ ಊಟ ಮತ್ತು ಹಡಗಿನಲ್ಲಿ ಆರಾಮದಾಯಕ ವಾಸ್ತವ್ಯವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. ಒಟ್ಟಿನಲ್ಲಿ ಸಾಹಸ ಪ್ರವಾಸೋದ್ಯಮವನ್ನು ಹೆಚ್ಚಿಸುವುದು, ಕುಟುಂಬಗಳನ್ನು ಆಕರ್ಷಿಸುವುದು ಮತ್ತು ರಾಜ್ಯದ ನೈಸರ್ಗಿಕ ಮತ್ತು ಸಾಂಸ್ಕೃತಿಕ ಸೌಂದರ್ಯವನ್ನು ಪ್ರದರ್ಶಿಸುವ ಉದ್ದೇಶದೊಂದಿಗೆ ಆಂಧ್ರಪ್ರದೇಶ ಪ್ರವಾಸೋದ್ಯಮ ಈ ಯೋಜನೆಯನ್ನು ಸಿದ್ಧಪಡಿಸಿದೆಯಾದರೂ, ಈ ಮೂಲಕ ಹೊಸ ಉದ್ಯೋಗಾವಕಾಶಗಳೂ ಸೃಷ್ಟಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.