ಕೆಎಸ್‌ಟಿಡಿಸಿ: ಬೆಂಗಳೂರಿನಿಂದ 1 ದಿನದ ಟೂರ್ ಪ್ಯಾಕೇಜ್
ಬೆಂಗಳೂರಿನಿಂದ ಒಂದು ದಿನದ ಪ್ರವಾಸ ಕೈಗೊಳ್ಳುವ ಯೋಚನೆಯಲ್ಲಿದ್ದೀರಾ ? ಹಾಗಾದರೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಮಗಾಗಿ ವಿಶೇಷ ಪ್ಯಾಕೇಜನ್ನು ಪರಿಚಯಿಸಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೆಂಗಳೂರಿನ ಯಶವಂತಪುರದಿಂದ ಬನ್ನೇರುಘಟ್ಟ - ಮುತ್ಯಾಲಮಡುವಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಒಂದು ದಿನ ವ್ಯವಸ್ಥಿತ ಪ್ರವಾಸ ಯೋಜನೆ ಆರಂಭಿಸಿದೆ. ಮಂಗಳವಾರ ಹೊರತುಪಡಿಸಿ, ವಾರದ ಆರು ದಿನ ಪ್ರವಾಸ ಸೇವೆ ಇರಲಿದೆ. ಹವಾನಿಯಂತ್ರಿತ ಬಸ್‌ನಲ್ಲಿ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತಿದೆ. ಒಂದು ದಿನದ ಪ್ರವಾಸದಲ್ಲಿ ಬನ್ನೇರುಘಟ್ಟ ಮೃಗಾಲಯ, ಸಫಾರಿ, ಚಿಟ್ಟೆ ಉದ್ಯಾನ ವೀಕ್ಷಣೆ, ಮುತ್ಯಾಲಮಡುವು ಬೋಟಿಂಗ್ ಜತೆಗೆ, ಸೂರ್ಯಾಸ್ತ ವೀಕ್ಷಿಸಬಹುದು.
ಟಿಕೆಟ್ ದರ ತಲಾ 1,680 ರೂ. ಆಗಿದ್ದು, ಇದರಲ್ಲಿ ಪ್ರವೇಶ ಶುಲ್ಕ, ಸಫಾರಿ, ಬೋಟಿಂಗ್ ಹಾಗೂ ಮೂರು ಹೊತ್ತಿನ ಊಟ-ಉಪಾಹಾರ ಸೇರಿದೆ. ಆಸಕ್ತರು ಕೆಎಸ್‌ಟಿಡಿಸಿ ವೆಬ್‌ಸೈಟ್ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪ್ರವಾಸಿಗರು ನಿಗಮದ ಯಶವಂತಪುರ ಬುಕ್ಕಿಂಗ್ ಕೌಂಟರ್, ನಿಗಮ ಅಧಿಕೃತ ಟ್ರಾವೆಲ್ ಏಜೆಂಟ್‌ಗಳು ಹಾಗೂ ನಿಗಮದ ವೆಬ್‌ಸೈಟ್ ಮೂಲಕ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು. ಮಾಹಿತಿಗೆ https://kstdc.co/ ಅಥವಾ 080 4334 4334/35, 8970650070, 8970650075, 8970650021 ನಂಬರ್‌ಗೆ ಸಂಪರ್ಕಿಸಬಹುದು.