Thursday, July 30, 2026
Thursday, July 30, 2026

ತರುಣ್‌ ಸುಧೀರ್‌ʼಘʼ ಪ್ರವಾಸ

ಭಾರತದಲ್ಲಿ ವಾರಾಣಸಿಯೆಂದರೆ ನನಗಿಷ್ಟ. ಅದಕ್ಕಾಗಿಯೇ ʻರಾಬರ್ಟ್‌ʼ ಸಿನಿಮಾವನ್ನು ಅಲ್ಲಿಯೇ ಚಿತ್ರೀಕರಣ ಮಾಡಿದ್ದೇನೆ. ಅದಕ್ಕಾಗಿ ಸುಮಾರು 10-12 ದಿನಗಳ ಕಾಲ ಅಲ್ಲಿ ಉಳಿದುಕೊಂಡಿದ್ದೆ. ಆ ಊರಿನ ವೈಬ್‌, ಅಲ್ಲಿನ ಪರಿಸರ ಎಲ್ಲವೂ ಫ್ರೇಮ್‌ಗೂ ಸೆಟ್‌ ಆಗುವಂತಿದೆ. ದೈವಿಕ ಅನುಭವ ನಮಗಾಗುತ್ತದೆ. ಅಲ್ಲಿನ ಘಾಟ್‌ಗಳು, ಗಂಗಾ ಆರತಿಗೆ ನಾನು ಮಸನೋತಿದ್ದೇನೆ ಎನ್ನುತ್ತಾರೆ ನಿರ್ದೇಶಕ ತರುಣ್‌ ಸುಧೀರ್.

ಸಾಮಾನ್ಯವಾಗಿ ಕತೆಯೊಂದು ಸಿದ್ಧವಾದಮೇಲೆ ಲೊಕೇಶನ್‌ಗಾಗಿ ಹುಡುಕಾಟ ಶುರುಮಾಡುತ್ತೇವೆ. ಆದರೆ ಕೆಲವೊಮ್ಮ ಕತೆ ಬರೆಯಬೇಕಾದರೆ ಕೆಲವು ಜಾಗಗಳು ನಮ್ಮೊಳಗೆ ಉಳಿದುಬಿಡುತ್ತವೆ. ಉದಾಹರಣಗೆ ʻರಾಬರ್ಟ್‌ʼ ಸಿನಿಮಾದ ಮೊದಲಾರ್ಧವನ್ನು ಉತ್ತರಪ್ರದೇಶದ ಲಕ್ನೋ, ವಾರಾಣಸಿಯಲ್ಲಿ ಚಿತ್ರೀಕರಣ ಮಾಡಿದ್ದೇನೆ. ನನಗನಿಸದಂತೆ ಉತ್ತರಪ್ರದೇಶವನ್ನು ಬಾಲಿವುಡ್‌ ಸಿನಿಮಾಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗಿದೆಯಾದರೂ ಕನ್ನಡ ಚಿತ್ರರಂಗದಲ್ಲಿ ಬಳಸಿರುವುದು ಕಡಿಮೆ. ಸ್ಕ್ರಿಪ್ಟ್‌ ಬರೆಯಬೇಕಾದರೆ ಉತ್ತರಪ್ರದೇಶವನ್ನೇ ಯೋಚಿಸಿಕೊಂಡಿದ್ದೆ. ಅಲ್ಲಿನ ನೇಟಿವಿಟಿಗೆ ತಕ್ಕಂತೆ ಸೀನ್‌ ಮಾಡಿಕೊಂಡಿದ್ದೆ ಎನ್ನುತ್ತಾರೆ ನಿರ್ದೇಶಕ ತರುಣ್‌ ಸುಧೀರ್‌. ಸ್ಟಾರ್‌ ನಿರ್ದೇಶಕನ ಪ್ರವಾಸಿ ಜೀವನ ಈ ವಾರದ ಪ್ರವಾಸಿ ಪ್ರಪಂಚದಲ್ಲಿ

ಇದನ್ನೂ ಓದಿ: ಸೋಲೋ ಬೈಕ್‌ ರೈಡ್‌ ಎಂದರೆ ಸ್ವಾತಂತ್ರ್ಯ

ವೃತ್ತಿಯೊಂದಿಗೆ ಬೆಸೆದ ಬಂಧ

ನನ್ನ ವೃತ್ತಿಯೊಂದಿಗೆ ಪ್ರವಾಸ, ಪ್ರಯಾಣವೆಲ್ಲವೂ ಬೆಸೆದುಕೊಂಡಿದೆ. ಲೊಕೇಶನ್‌ ಹುಡುಕಾಟ, ಸಿನಿಮಾ ಚಿತ್ರೀಕರಣ, ಯಾರನ್ನೋ ಭೇಟಿಯಾಗುವುದು, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಹೀಗೆ ಅನೇಕ ಕಾರಣಗಳಿಗಾಗಿ ನಿರಂತರವಾಗಿ ಪ್ರಯಾಣ ಮಾಡುತ್ತಿರುತ್ತೇನೆ. ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೆ ಒಮ್ಮೆ ಎಲ್ಲ ಕೆಲಸಗಳಿಂದ ಬ್ರೇಕ್‌ ತೆಗೆದುಕೊಂಡು ಕುಟುಂಬ ಅಥವಾ ಸ್ನೇಹಿತರ ಜತೆಗೆ ಟ್ರಾವೆಲ್‌ ಮಾಡುವುದು ರೂಢಿಯಾಗಿದೆ.

Untitled design - 2026-07-30T131422.623

ನವಚೈತನ್ಯ ತುಂಬುವ ಕಬಿನಿ

ಎರಡು ವಾರದ ಹಿಂದಷ್ಟೇ ಕುಟುಂಬದ ಜತೆಗೆ ಕಬಿನಿಗೆ ಭೇಟಿ ನೀಡಿದ್ದೆ. ಪ್ರಕೃತಿಯ ನಡುವೆ ಕಾಲ ಕಳೆಯುವ ಖುಷಿಯೇ ಬೇರೆ. ಬೆಳಗ್ಗೆ ಹಾಗೂ ಸಂಜೆ ಸುಮಾರು ಮೂರು ಗಂಟೆಗಳ ಕಾಲ ಜೀಪ್‌ ನಲ್ಲಿ ಸಫಾರಿ ಮಾಡುತ್ತಿದ್ದರೆ ಇಡೀ ಶರೀರವೇ ನವಚೈತನ್ಯದಿಂದ ತುಂಬಿಕೊಳ್ಳುತ್ತದೆ. ಅಲ್ಲಿ ವೈಲ್ಡ್‌ ಲೈಫ್‌ ನೋಡುವುದು, ಅದರ ದೈನಂದಿನ ಚಟುವಟಿಕೆಗಳನ್ನು ಕಾಣುವುದಂತೂ ಬೇರೆಯದೇ ಅನುಭವ ನೀಡಿತ್ತು.

ಆಸ್ಟ್ರೇಲಿಯಾ ದಿನಗಳು

ಸೋನಲ್‌ ಜತೆಗೆ ಕಳೆದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾಗೆ ಹೋಗಿ ಬಂದೆ. ಆಸ್ಟ್ರೇಲಿಯಾ ಎಂಥವರನ್ನೂ ಮರುಳು ಮಾಡುತ್ತದೆ. ಅಲ್ಲಿ ಮೆಲ್ಬಾರ್ನ್‌ ನಗರ ಹಾಗೂ ಸಿಡ್ನಿ ಸೇರಿದಂತೆ ಅನೇಕ ನಗರಗಳನ್ನು ನೋಡಿಬಂದೆವು. ಅಲ್ಲಿನ ಪ್ರಾಕೃತಿಕ ಸೌಂದರ್ಯ, ಸ್ಥಳೀಯರು ಪ್ರವಾಸಿಗರನ್ನು ಪ್ರೀತಿಯಿಂದ ಬರಮಾಡಿಕೊಳ್ಳುವ ರೀತಿ, ಸಮಯ ಹಾಗೂ ಶಿಸ್ತಿಗೆ ನೀಡುವ ಮಹತ್ವ ಎಲ್ಲವೂ ನನ್ನನ್ನು ಆಕರ್ಷಿಸಿದೆ. ಅಲ್ಲಿನ ಮೆಲ್ಬರ್ನ್‌ ನಗರದಲ್ಲಿ ಒಂದೇ ದಿನದಲ್ಲಿ ಬಿಸಿಲು, ಮಳೆ, ಚಳಿ ಹಾಗೂ ಹಿಮದ ಅನುಭವ ನಮಗಾಗಿದೆ.

ದುಬೈ ಆಹಾರಕ್ಕೆ ಮನಸೋತೆ

ದುಬೈಯ ಆಹಾರ ನನಗಿಷ್ಟ. ನಾನು ನಾನ್‌ ವೆಜ್‌ ಪ್ರಿಯನಾಗಿರುವುದರಿಂದ ನನಗೆ ಅವಕಾಶ ಹೆಚ್ಚಿವೆ. ಸಾಮಾನ್ಯವಾಗಿ ಆಯಾ ದೇಶಗಳು ಅಲ್ಲಿನ ಪ್ರಮುಖ ಆಹಾರ ಪದ್ಧತಿಯನ್ನು ಪ್ರವಾಸಿಗರಿಗೆ ಉಣಬಡಿಸುತ್ತಾರೆ. ಆದರೆ ದುಬೈ ಹಾಗಲ್ಲ. ಅಲ್ಲಿ ಅರೆಬಿಯನ್‌ ಫುಡ್‌ ಜತೆಗೆ ವಿಶ್ವದ ಎಲ್ಲ ಬಗೆಯ ಆಹಾರಗಳನ್ನೂ ಸವಿಯುವ ಅವಕಾಶ ನಮಗಿದೆ. ನಮ್ಮ ಬಿರಿಯಾನಿಗೆ ಹೋಲುವ ಅಲ್ಲಿನ ಮಂದಿ, ಕಬಾಬ್‌ ವೆರೈಟೀಸ್‌, ಬಕ್ಲಾವಾದಂಥ ಸಿಹಿ ಖಾದ್ಯಗಳು ಬಹಳ ರುಚಿಕರವಾಗಿದೆ.

ಮಾಲ್ಡೀವ್ಸ್‌ ಎಂಬ ಅದ್ಭುತ

ಮದುವೆಯಾದ ಕೆಲವೇ ದಿನಗಳಲ್ಲಿ ಟ್ರಾವೆಲ್‌ ಮಾರ್ಟ್‌ ಎಂಬ ಕಂಪೆನಿಯ ಮೂಲಕ ಮಾಲ್ಡೀವ್ಸ್‌ಗೆ ಹನಿಮೂನ್‌ ಹೋಗಿದ್ದೆವು. ಅಲ್ಲಿ ಬೇರೇನೂ ಆಯ್ಕೆಯಿಲ್ಲ. ಎಲ್ಲಿನೋಡಿದರೂ ತಿಳಿನೀಲಿ ಬಣ್ಣದ ನೀರು, ಬಿಳಿ ಮರಳಿನ ನಡುವೆ ಕಾಲ ಕಳೆಯಲು ಇಷ್ಟಪಡುವವರಿಗಂತೂ ಅದು ಹೇಳಿಮಾಡಿಸಿದಂಥ ಜಾಗ.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ರನ್ನನ ಜತೆ

ನಾನು ಬರೆಯುವ ಯಾವುದೇ ಸಿನಿಮಾ ಸ್ಕ್ರಿಪ್ಟ್‌ನಲ್ಲೂ ಫಾರಿನ್‌ ಶೂಟ್‌ಗೆ ಅವಕಾಶವಿರುವುದಿಲ್ಲ ಎಂಬುದೇ ಚಿತ್ರತಂಡ ನನ್ನ ಮೇಲೆ ಮಾಡುವ ಆರೋಪ. ಚೌಕ, ರಾಬರ್ಟ್‌, ಕಾಟೇರ ಸೇರಿದಂತೆ 90 ಶೇಕಡಾ ಸಿನಿಮಾಗಳು ಭಾರತದೊಳಗೆ ಚಿತ್ರೀಕರಣವಾಗಿವೆ. ಆದರೆ ನಾನು ಕ್ರಿಯೇಟಿವ್‌ ಹೆಡ್‌ ಆಗಿದ್ದ ಸುದೀಪ್‌ ಅವರ ಅಭಿನಯದ ರನ್ನ ಸಿನಿಮಾಗಾಗಿ ನಾವು ಸ್ವಿಜರ್‌ಲ್ಯಾಂಡ್‌ ಗೆ ಹೋಗಿದ್ದೆವು. -6 ಡಿಗ್ರಿ ಟೆಂಪರೇಚರ್‌ನಲ್ಲಿ ಕೊರೆಯುವ ಚಳಿಯ ನಡುವೆ ಕೆಲಸ ಮಾಡಿದ ಅನುಭವ ಮಜವಾಗಿತ್ತು.

Untitled design - 2026-07-30T131428.999

ಚಿತ್ರೀಕರಣಕ್ಕೆ ಮೈಸೂರು ಬೆಸ್ಟ್‌

ಚಿತ್ರೀಕರಣವೆಂದರೆ ನನ್ನ ಮೊದಲ ಆಯ್ಕೆ ಮೈಸೂರು. ಎಲ್ಲ ರೀತಿಯ ವಾತಾವರಣ, ಹಿನ್ನೆಲೆಗೂ ಒಪ್ಪುವಂಥ ತಾಣಗಳು ಅಲ್ಲಿವೆ. ಅಲ್ಲಿ ಎಲ್ಲಿಯೇ ಪ್ರಯಾಣ ಮಾಡುವುದೆಂದರೂ 20ನಿಮಿಷಗಳಲ್ಲಿ ಲೊಕೇಶನ್‌ನಲ್ಲಿರುತ್ತೇವೆ. ಅದಕ್ಕೆ ಹೊರತಾಗಿ ಗಜಕೇಸರಿಯಂಥ ಕೆಲವು ಸಿನಿಮಾಗಾಗಿ ಕೇರಳ ಹಾಗೂ ಮಡಿಕೇರಿಯ ಹಲವೆಡೆ ಚಿತ್ರೀಕರಣ ಮಾಡಲಾಗಿತ್ತು.

ವಾರಾಣಸಿಯಲ್ಲಿ ರಾಬರ್ಟ್‌

ಭಾರತದಲ್ಲಿ ವಾರಾಣಸಿಯೆಂದರೆ ನನಗಿಷ್ಟ. ಅದಕ್ಕಾಗಿಯೇ ʻರಾಬರ್ಟ್‌ʼ ಸಿನಿಮಾವನ್ನು ಅಲ್ಲಿಯೇ ಚಿತ್ರೀಕರಣ ಮಾಡಿದ್ದೇನೆ. ಅದಕ್ಕಾಗಿ ಸುಮಾರು 10-12 ದಿನಗಳ ಕಾಲ ಅಲ್ಲಿ ಉಳಿದುಕೊಂಡಿದ್ದೆ. ಆ ಊರಿನ ವೈಬ್‌, ಅಲ್ಲಿನ ಪರಿಸರ ಎಲ್ಲವೂ ಫ್ರೇಮ್‌ಗೂ ಸೆಟ್‌ ಆಗುವಂತಿದೆ. ದೈವಿಕ ಅನುಭವ ನಮಗಾಗುತ್ತದೆ. ಅಲ್ಲಿನ ಘಾಟ್‌ಗಳು, ಗಂಗಾ ಆರತಿಗೆ ನಾನು ಮಸನೋತಿದ್ದೇನೆ.

ಹಾಡುಗಳ ಚಿತ್ರೀಕರಣಕ್ಕೆ ರನ್‌ ಆಫ್‌ ಕಚ್‌

ಗುಜರಾತ್‌ನ ರನ್‌ ಆಫ್‌ ಕಚ್‌ ನನಗೆ ಬಹಳ ಆಪ್ತವೆನಿಸಿದ ಪ್ರವಾಸಿ ತಾಣ. ರಾಬರ್ಟ್‌ನ ʼಕಣ್ಣು ಹೊಡೆಯಾಕʼ ಹಾಡು ಹಾಗೂ ಕಾಟೇರದ ʻಯಾವ ಜನುಮದ ಗೆಳತಿʼ ಹಾಡುಗಳನ್ನು ಅಲ್ಲೇ ಚಿತ್ರೀಕರಣ ಮಾಡಿದ್ದೇನೆ. ಪ್ರಕೃತಿಯ ಈ ಅದ್ಭುತ ತಾಣ ವಿಶ್ಯುವಲಿ ಒಂದು ಹಾಡಿಗೆ ತುಂಬಾ ಸಪೋರ್ಟ್‌ ಮಾಡುತ್ತದೆ.

ದಕ್ಷಿಣ ಭಾರತ ಪ್ರವಾಸ

ಮನೆಯಲ್ಲಿ ಸಿನಿಮಾ ಹಾಗೂ ರಂಗಭೂಮಿ ನಂಟಿರುವವರೇ ಇದ್ದುದರಿಂದ ಚಿಕ್ಕಂದಿನಲ್ಲಿಯೇ ಕರ್ನಾಟಕದ ಪ್ರತಿ ಜಿಲ್ಲೆ, ಪ್ರತಿ ಗ್ರಾಮಕ್ಕೂ ಭೇಟಿ ನೀಡಿದ್ದೇನೆ. ಆದರೆ ನಾನು 8 ವರ್ಷದವನಿದ್ದಾಗ ಒಂದು ಬಾರಿ ಕುಟುಂಬದ ಜತೆಗೆ ದಕ್ಷಿಣ ಭಾರತ ಪ್ರವಾಸ ಮಾಡಿದ್ದೆ. ಊಟಿ, ಕೊಡೈಕೆನಾಲ್‌ನಿಂದ ಪ್ರಾರಂಭಿಸಿ, ರಾಮೇಶ್ವರ ಹೀಗೆ ಅನೇಕ ತಾಣಗಳಿಗೆ ಭೇಟಿ ನೀಡಿದ್ದೆ.

ಶಾಪಿಂಗ್‌ ಕ್ರೇಜ್‌

ಶಾಪಿಂಗ್‌ ಮಾಡಬೇಕೆಂದರೆ ಎಲ್ಲ ದೇಶಗಳಲ್ಲೂ ಅವಕಾಶವಿರುವುದಿಲ್ಲ. ಶಾಪಿಂಗ್‌ ಪ್ರಿಯರಿಗೆ ದುಬೈ ಬೆಸ್ಟ್‌ ಪ್ಲೇಸ್.‌ ಎಲೆಕ್ಟ್ರಾನಿಕ್ಸ್‌, ಬಟ್ಟೆಗಳಿಗೆ ಥೈಲ್ಯಾಂಡ್‌ ಉತ್ತಮ ಆಯ್ಕೆ. ದುಬಾರಿಯಾದರೂ ಶಾಪಿಂಗ್‌ ಮಾಡುತ್ತೇನೆ ಎನ್ನುವವರಿಗೆ ಆಸ್ಟ್ರೇಲಿಯಾದಲ್ಲೂ ಅಣೇಕ ಅವಕಾಶಗಳಿವೆ.

Untitled design - 2026-07-30T131620.182

ದುಬೈನ ಚಿನ್ನದ ಬಿಸ್ಕೆಟ್‌

ನವಗ್ರಹ ಸಿನಿಮಾ ತೆರೆಕಂಡು ಕೆಲವೇ ದಿನಗಳಲ್ಲಿ ನಾನು ಮೊದಲ ಬಾರಿಗೆ ದರ್ಶನ್‌ ಅವರ ಜತೆಗೆ ಕಾರ್ಯಕ್ರಮವೊಂದಲ್ಲಿ ಭಾಗವಹಿಸುವುದಕ್ಕಾಗಿ ದುಬೈಗೆ ತೆರಳಿದ್ದೆ. ಅಲ್ಲಿ ಚಿನ್ನ ಅಗ್ಗದ ಬೆಲೆಗೆ ಸಿಗುತ್ತದೆಯೆಂಬ ಕಾರಣಕ್ಕೆ ನನ್ನ ಬಳಿಯಿದ್ದ ಎಲ್ಲ ಹಣವನ್ನು ಒಟ್ಟುಗೂಡಿಸಿಕೊಂಡು ಅಲ್ಲಿ ಗೋಲ್ಡ್‌ ಬಿಸ್ಟೆಟ್‌ ಖರೀದಿ ಮಾಡಿ, ತಾಯಿಗೆ ಕೊಟ್ಟಿದ್ದೆ. ಅದನ್ನು ಆಭರಣ ಮಾಡಿಸಿಕೊಂಡಿರುವ ಇಂದಿಗೂ ಹಾಕಿಕೊಳ್ಳುತ್ತಾರೆ. ಇದಕ್ಕಿಂತ ಒಳ್ಳೆಯ ನೆನಪು ನನಗೆ ಬೇರೊಂದಿಲ್ಲ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್