‘Symphony in the Mist’- ಮೇಘಾಲಯ ಪ್ರವಾಸೋದ್ಯಮದ ಹೊಸ ಬ್ರ್ಯಾಂಡ್!
ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಮೇಘಾಲಯ ಸರ್ಕಾರ ‘Symphony in the Mist’ ಎಂಬ ನೂತನ ಪ್ರವಾಸೋದ್ಯಮ ಬ್ರ್ಯಾಂಡ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕೇಂದ್ರ ನಾಗರಿಕ ವಿಮಾನಯಾನ ಮತ್ತು ಉತ್ತರ ಪೂರ್ವಾಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಎರಡು ದಿನಗಳ ರಾಜ್ಯ ಭೇಟಿಯ ಸಂದರ್ಭದಲ್ಲಿ ಈ ಬ್ರ್ಯಾಂಡ್‌ನ್ನು ಅನಾವರಣಗೊಳಿಸಿದರು.
ಮೇಘಾಲಯ ಸರ್ಕಾರ ತನ್ನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ‘Symphony in the Mist’ ಎಂಬ ನೂತನ ಪ್ರವಾಸೋದ್ಯಮ ಬ್ರ್ಯಾಂಡ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕೇಂದ್ರ ನಾಗರಿಕ ವಿಮಾನಯಾನ ಮತ್ತು ಉತ್ತರ ಪೂರ್ವಾಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಎರಡು ದಿನಗಳ ರಾಜ್ಯ ಭೇಟಿಯ ಸಂದರ್ಭದಲ್ಲಿ ಈ ಬ್ರ್ಯಾಂಡ್‌ನ್ನು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ 233 ಕೋಟಿ ರುಪಾಯಿಯ ಸೋಹ್ರಾ ಪ್ರವಾಸೋದ್ಯಮ ವಲಯ ಯೋಜನೆಗೂ ಚಾಲನೆ ನೀಡಲಾಯಿತು. ನೊಹ್ಕಲಿಕೈ ಜಲಪಾತ, ಮಾವ್ಸ್ಮೈ ಇಕೋ ಪಾರ್ಕ್, ಸೆವನ್ ಸಿಸ್ಟರ್ಸ್ ಫಾಲ್ಸ್ ಮತ್ತು ಸೋಹ್ರಾ ಎಕ್ಸ್‌ಪೀರಿಯನ್ಸ್ ಸೆಂಟರ್‌ಗಳಂಥ ತಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಹೊಸ ಬ್ರ್ಯಾಂಡ್ ಮೇಘಾಲಯದ ಮಂಜುಮಯ ಬೆಟ್ಟಗಳು, ಜಲಪಾತಗಳು ಮತ್ತು ನಿಸರ್ಗದ ಸೊಬಗನ್ನು ಪ್ರತಿನಿಧಿಸುತ್ತಿದ್ದು, ರಾಜ್ಯವನ್ನು ಭಾರತದ ಪ್ರಮುಖ ನಿಸರ್ಗ ಪ್ರವಾಸಿ ತಾಣವನ್ನಾಗಿಸುವ ಉದ್ದೇಶ ಹೊಂದಿದೆ.