2026 ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರೈಲು ಸಂಪರ್ಕ ಹಾಗೂ ಹಿಮಾಲಯ ಪ್ರದೇಶಗಳಿಗಾಗಿ ಮೌಂಟೇನ್‌ ರೈಲುಗಳನ್ನು ಘೋಷಣೆ ಮಾಡಿದ್ದಾರೆ.

2026ರ ಬಜೆಟ್ ನಲ್ಲಿ ಕೇಂದ್ರ ಸರಕಾರದ ಯೋಜನೆಗಳಲ್ಲಿ ಹಿಮಾದ್ರಿ, ಉತ್ತರಾಖಂಡ್, ಜಮ್ಮು ತಹಲ್ಜೀರ್ ಸೇರಿದಂತೆ ಪರ್ವತ ಪ್ರದೇಶಗಳಿಗೆ ಹೊಸ ರೈಲು ಸಂಪರ್ಕ / ಮೌಂಟೇನ್ ರೈಲು ಸೇವೆಗಳನ್ನು ಕೇಂದ್ರ ಸರಕಾರ ಪರಿಚಯಿಸಿದೆ. ಈ ಸೇವೆಗಳು ಪ್ರವಾಸೋದ್ಯಮ ಮತ್ತು ಸ್ಥಳೀಯ ಸಂಪರ್ಕವನ್ನು ಅಬಿವೃದ್ದಿ ಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ .

ಭಾರತೀಯ ರೈಲ್ವೆ ಇಲಾಖೆ 2026ರ ಬಜೆಟ್‌ನಲ್ಲಿ ರೈಲು ಅನುಷ್ಠಾನ ಹೂಡಿಕೆಯತ್ತ ಹೆಚ್ಚಿನ ಗಮನ ವಹಿಸಲಾಗಿದ್ದು ರೈಲು ಬಜೆಟ್ ಮುಕ್ತಾಯದಲ್ಲಿರುವ ಕ್ಯಾಪೆಕ್ಸ್ (Capex) ಮೊತ್ತವು ₹2.7–2.8 ಲಕ್ಷ ಕೋಟಿ ಆದಾಯವನ್ನು ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ, ಇದನ್ನು ಹೊಸ ಮಾರ್ಗ ಮತ್ತು ಸಂಪರ್ಕ ಪ್ರದೇಶಗಳ ಅಭಿವೃದ್ಧಿಗೆ ಬಳಸಲಾಗುತ್ತದೆ .

ಬಜೆಟ್ 2026ಇಲ್ಲ ಹಿಮಾಲಯ ಮತ್ತು ಪರ್ವತ ಪ್ರದೇಶಗಳಿಗೆ 'ಮೌಂಟೇನ್ ಟ್ರೈನ್' ಯೋಜನೆಗಳನ್ನು ಹೊಸದಾಗಿ ಪ್ರೇರೇಪಿಸಲಾಗುತ್ತಿದೆ. ಇದರಿಂದ ಟೂರಿಸ್ಟ್ ಡೆಸ್ಟಿನೇಶನ್‌ಗಳು ಸುಲಭವಾಗಿ ಸಂಪರ್ಕವಾಗುವುದು, ಸ್ಥಳೀಯ ವ್ಯಾಪಾರ ಮತ್ತು ಉದ್ಯೋಗಗಳಿಗೆ ಬಲ ನೀಡುವುದು, ಮತ್ತು ಜಾಗತಿಕ ಪ್ರವಾಸೋದ್ಯಮದ ಸ್ಪರ್ಧೆಗೆ ಭಾರತ ಸಿದ್ಧವಾಗುವುದು.. ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರವೂ ನಿರ್ಧಾರ ತೆಗೆದುಕೊಂಡಿದೆ.