ಮೈಸೂರು ಅರಮನೆ ಆವರಣದಲ್ಲಿ ಅರಳಿದ ಪುಷ್ಪಲೋಕ
ಪ್ರತಿ ಬಾರಿಯಂತೆ ಈ ಬಾರಿಯೂ ಮಾಗಿ ಉತ್ಸವ ಮೈಸೂರಿನ ಜನತೆಯ ಮೆಚ್ಚುಗೆಯನ್ನು ಪಡೆದಿದ್ದು, ರಂಗು ತುಂಬಿರುವ ಅರಮನೆಯ ಆವರಣಕ್ಕೆ ಜನರ ದಂಡು ಹರಿದು ಬರುತ್ತಿದೆ. ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಈ ಬಾರಿಯ ಮಾಗಿ ಫಲಪುಷ್ಪ ಪ್ರದರ್ಶನದಲ್ಲಿ ಗೌರವ ಸಮರ್ಪಿಸಲಾಗಿದ್ದು, ಬಣ್ಣದ ಹೂಗಳಿಂದ ಸಾಲುಮರದ ತಿಮ್ಮಕ್ಕನ ಪ್ರತಿಮೆಯನ್ನು ನಿರ್ಮಿಸಲಾಗಿದೆ.
ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಅರಮನೆ ಆವರಣದಲ್ಲಿ ಮಾಗಿ ಉತ್ಸವದ ಅಂಗವಾಗಿ, ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಮಾಗಿ ಉತ್ಸವ ಮೈಸೂರಿನ ಜನತೆಯ ಮೆಚ್ಚುಗೆಯನ್ನು ಪಡೆದಿದ್ದು, ರಂಗು ತುಂಬಿರುವ ಅರಮನೆಯ ಆವರಣಕ್ಕೆ ಜನರ ದಂಡು ಹರಿದು ಬರುತ್ತಿದೆ. ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಈ ಬಾರಿಯ ಮಾಗಿ ಫಲಪುಷ್ಪ ಪ್ರದರ್ಶನದಲ್ಲಿ ಗೌರವ ಸಮರ್ಪಿಸಲಾಗಿದ್ದು, ಬಣ್ಣದ ಹೂಗಳಿಂದ ಸಾಲುಮರದ ತಿಮ್ಮಕ್ಕನ ಪ್ರತಿಮೆಯನ್ನು ನಿರ್ಮಿಸಲಾಗಿದೆ.
ಇದರ ಜತೆಗೆ ಶೃಂಗೇರಿಯ ಶಾರದಾಂಬೆ ದೇಗುಲದ ಕಲಾಕೃತಿ ಜನರ ಮೆಚ್ಚುಗೆಯನ್ನು ಪಡೆದಿರುವುದು ಗಮನಾರ್ಹ. ಒಟ್ಟಾರೆ ಇಡೀ ಮೈಸೂರು ಮಾಗಿಯ ಉತ್ಸವದಲ್ಲಿ ಮಿಂದೇಳುತ್ತಿದೆ.