ನಮ್ಮ ಮೆಟ್ರೋ ಪಿಂಕ್ ಲೈನ್: ವರ್ಷದ ಅಂತ್ಯದೊಳಗೆ ಪ್ರಾಯೋಗಿಕ ಸಂಚಾರ ನಿರೀಕ್ಷೆ
ಭೂಗತ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್‌ಗಳನ್ನು (PSDs) ಅಳವಡಿಸಲಾಗುತ್ತಿದ್ದು, ಇದು ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ 'ನಮ್ಮ ಮೆಟ್ರೋ' ಪಿಂಕ್ ಲೈನ್ (ರೈಚ್ 6) ಯೋಜನೆಯ ಭೂಗತ ವಿಭಾಗದ ತಾಂತ್ರಿಕ ಮತ್ತು ಸಿಸ್ಟಮ್ಸ್ ಕಾಮಗಾರಿಗಳು ಬಹುತೇಕ ಅಂತಿಮ ಘಟ್ಟ ತಲುಪಿವೆ. ಕಾಳೇನ ಅಗ್ರಹಾರದಿಂದ ನಾಗಾವರ ವರೆಗಿನ ಒಟ್ಟು 21.3 ಕಿಮೀ. ಉದ್ದದ ಈ ಕಾರಿಡಾರ್‌ನಲ್ಲಿ, ಈ ವರ್ಷದ ಅಂತ್ಯದೊಳಗೆ ಭೂಗತ ಭಾಗದ ಪ್ರಾಯೋಗಿಕ ಸಂಚಾರವನ್ನು (Trial Run) ಆರಂಭಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಇದನ್ನೂ ಓದಿ: 20 ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆ ?
ಉತ್ತರ ಹಾಗೂ ದಕ್ಷಿಣ ಬೆಂಗಳೂರನ್ನು ಸಂಪರ್ಕಿಸುವ ಈ ಪಿಂಕ್ ಲೈನ್ ಯೋಜನೆಯು ಬಿಎಂಆರ್‌ಸಿಎಲ್‌ನ ಅತ್ಯಂತ ಸವಾಲಿನ ಮಾರ್ಗಗಳಲ್ಲಿ ಒಂದಾಗಿದೆ. ಇದರ ಒಟ್ಟು ಮಾರ್ಗದಲ್ಲಿ ಸುಮಾರು 13.8 ಕಿಮೀ. ಭೂಗತ ಸುರಂಗ ಮಾರ್ಗ ಹಾಗೂ 12 ಭೂಗತ ನಿಲ್ದಾಣಗಳನ್ನು ಒಳಗೊಂಡಿದ್ದು, ಪ್ರಸ್ತುತ ಸಿಗ್ನಲಿಂಗ್, ವಿದ್ಯುತ್ ಸರಬರಾಜು, ಟೆಲಿಕಮ್ಯುನಿಕೇಷನ್ ಮತ್ತು ಹಳಿ ಅಳವಡಿಸುವುದು ಸೇರಿದಂತೆ ಪ್ರಮುಖ ಸಿಸ್ಟಮ್ಸ್ ಕಾಮಗಾರಿಗಳು ವೇಗವಾಗಿ ಪೂರ್ಣಗೊಳ್ಳುತ್ತಿವೆ.
ಭೂಗತ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್‌ಗಳನ್ನು (PSDs) ಅಳವಡಿಸಲಾಗುತ್ತಿದ್ದು, ಇದು ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
ಸುರಂಗ ಮಾರ್ಗಗಳ ಸಿವಿಲ್ ಕಾಮಗಾರಿಗಳು ಮುಕ್ತಾಯಗೊಂಡ ಬೆನ್ನಲ್ಲೇ, ರೈಲುಗಳ ಸಂಚಾರಕ್ಕೆ ಅಗತ್ಯವಿರುವ ವಿದ್ಯುತ್ ಹಾಗೂ ಸಿಗ್ನಲ್ ಜೋಡಣೆಯ ಅಂತಿಮ ಪರೀಕ್ಷೆಗಳು ನಡೆಯುತ್ತಿದ್ದು, ವರ್ಷಾಂತ್ಯದೊಳಗೆ ಟ್ರಯಲ್ ರನ್ ನಡೆಸಲು ಅಧಿಕಾರಿಗಳು ಉತ್ಸುಕರಾಗಿದ್ದಾರೆ.
ಬನ್ನೇರುಘಟ್ಟ ರಸ್ತೆ ಮತ್ತು ಎಂ.ಜಿ. ರಸ್ತೆ, ಶಿವಾಜಿನಗರದಂಥ ಜನದಟ್ಟಣೆ ಪ್ರದೇಶಗಳ ಮೂಲಕ ಸಂಚರಿಸಲಿರುವ ಈ ಮಾರ್ಗವು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಗೊಂಡರೆ ನಗರದ ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ.
ಈ ಮಾರ್ಗದ ಮೇಲ್ಸೆತುವೆ ವಿಭಾಗದ ಸುರಕ್ಷತಾ ತಪಾಸಣೆಗಳು ಈಗಾಗಲೇ ಚುರುಕುಗೊಂಡಿದ್ದು, ಸಂಪೂರ್ಣ ಪಿಂಕ್ ಲೈನ್ ಕಾರಿಡಾರ್ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಲ್ಲಿ ಬೆಂಗಳೂರು ಜನತೆಯಿದ್ದಾರೆ.