ದಟ್ಟಣೆಯ ಏರ್‌ ಟ್ರಾಫಿಕ್‌ ಎದುರಿಸುತ್ತಿದ್ದ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಹಾಯವಾಗಲಿ ಎಂದು ನಿರ್ಮಿಸಿದ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸಲು ರೆಡಿ ಆಗಿದೆ.

ಅದಾನಿ ಗ್ರೂಪ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿರುವ ಈ ನೂತನ ವಿಮಾನ ನಿಲ್ದಾಣ ಗುರುವಾರ ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ನೂತನ ವಿಮಾನ ನಿಲ್ದಾಣ, ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಚಾರ ದಟ್ಟಣೆಯ ಒತ್ತಡವನ್ನು ತಗ್ಗಿಸಿ, ವಾಣಿಜ್ಯ ರಾಜಧಾನಿಯ ಬೆಳವಣಿಗೆಗೆ ಸಾಕ್ಷಿಯಾಗಲಿದೆ.

ಬೆಂಗಳೂರಿನಿಂದ ನವಿ ಮುಂಬೈಗೆ ಆಗಮಿಸಿದ ಮತ್ತು ನವಿ ಮುಂಬೈಯಿಂದ ಹೈದರಬಾದ್‌ಗೆ ನಿರ್ಗಮಿಸಿದ ವಿಮಾನಗಳಿಗೆ ಜಲ ಫಿರಂಗಿ ಮೂಲಕ ವಂದನೆ ಸಲ್ಲಿಸಲಾಯಿತು.