Thursday, August 6, 2026
Thursday, August 6, 2026

ನರ್ಮದಾ ನದಿಯಲ್ಲಿ ನೂತನ ಐಷಾರಾಮಿ ಕ್ರೂಸ್ ಚಾಲನೆ!

ಪ್ರಸ್ತುತ ಏಕತಾ ನಗರದಲ್ಲಿ 200 ಪ್ರಯಾಣಿಕರ ಸಾಮರ್ಥ್ಯದ ಕ್ರೂಸ್ ಕಾರ್ಯಾಚರಣೆಯಲ್ಲಿದ್ದು, ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ಬೃಹತ್ ನೌಕೆಯನ್ನು ಪರಿಚಯಿಸಲಾಗಿದೆ.

ಗುಜರಾತ್‌ನಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಮೆ 'ಸ್ಟ್ಯಾಚ್ಯೂ ಆಫ್ ಯೂನಿಟಿ' (Statue of Unity) ನೋಡಲು ಆಗಮಿಸುವ ಪ್ರವಾಸಿಗರಿಗಾಗಿ ಗುಜರಾತ್ ಸರಕಾರವು ಮತ್ತೊಂದು ಬೃಹತ್ ಆಕರ್ಷಣೆಯನ್ನು ಪರಿಚಯಿಸಿದೆ. ನರ್ಮದಾ ನದಿಯಲ್ಲಿ ಸಂಚರಿಸಲು ಕೇವಲ ಪ್ರಕೃತಿ ವೀಕ್ಷಣೆ ಮಾತ್ರವಲ್ಲದೆ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಬಹುದಾದ 600 ಪ್ರಯಾಣಿಕರ ಸಾಮರ್ಥ್ಯದ ಅತ್ಯಾಧುನಿಕ ಐಷಾರಾಮಿ ಕ್ರೂಸ್ ನೌಕೆಯನ್ನು ಯಶಸ್ವಿಯಾಗಿ ಚಾಲನೆಗೊಳಿಸಲಾಗಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರೂಸ್‌ಗೆ ಒತ್ತು: ಪ್ರವಾಸೋದ್ಯಮ ಇಲಾಖೆ

ಪ್ರಸ್ತುತ ಏಕತಾ ನಗರದಲ್ಲಿ 200 ಪ್ರಯಾಣಿಕರ ಸಾಮರ್ಥ್ಯದ ಕ್ರೂಸ್ ಕಾರ್ಯಾಚರಣೆಯಲ್ಲಿದ್ದು, ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ಬೃಹತ್ ನೌಕೆಯನ್ನು ಪರಿಚಯಿಸಲಾಗಿದೆ. ಸುಮಾರು 30 ಮೀಟರ್ ಉದ್ದ ಹಾಗೂ 12 ಮೀಟರ್ ಅಗಲವಿರುವ ಈ ನೂತನ ನೌಕೆಯು ಅಗತ್ಯ ಕಾನೂನು ಅನುಮೋದನೆಗಳು ಹಾಗೂ ಸುರಕ್ಷತಾ ತಪಾಸಣೆಗಳ ನಂತರ ಶೀಘ್ರದಲ್ಲೇ ವಾಣಿಜ್ಯಿಕವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.

ಈ ನೂತನ ಐಷಾರಾಮಿ ಕ್ರೂಸ್ ನೌಕೆಯ ಪ್ರಮುಖ ಸೌಲಭ್ಯಗಳು ಮತ್ತು ಆಕರ್ಷಣೆಗಳ ವಿವರಗಳು ಈ ಕೆಳಗಿನಂತಿವೆ:

  • ಮಲ್ಟಿಪರ್ಪಸ್ ಫ್ಲೋಟಿಂಗ್ ವೆನ್ಯೂ: ಈ ಕ್ರೂಸ್ ಕೇವಲ ಪ್ರವಾಸಿ ವೀಕ್ಷಣೆಗೆಷ್ಟೇ ಸೀಮಿತವಾಗಿರದೆ ತೇಲುವ ಸಭಾಂಗಣವಾಗಿ ಕಾರ್ಯಾಚರಿಸಲಿದೆ. ಇಲ್ಲಿ ಕಾರ್ಪೊರೆಟ್ ಸಭೆಗಳು, ಡೆಸ್ಟಿನೇಷನ್ ವೆಡ್ಡಿಂಗ್, ಜನ್ಮದಿನಾಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಉದ್ಯಮ ಉತ್ಪನ್ನಗಳ ಬಿಡುಗಡೆ ಆಯೋಜಿಸಲು ಅವಕಾಶ ಕಲ್ಪಿಸಲಾಗಿದೆ.
  • ಊಟದ ಸೌಲಭ್ಯ ಹಾಗೂ ವೇದಿಕೆ: ನೌಕೆಯಲ್ಲಿ ಒಂದೇ ಬಾರಿಗೆ 250 ಪ್ರವಾಸಿಗರು ಕುಳಿತು ಆಹಾರ ಸೇವಿಸಬಹುದಾದ ಡೈನಿಂಗ್ ಏರಿಯಾ ಮತ್ತು ಸಾಂಸ್ಕೃತಿಕ ಪ್ರದರ್ಶನಗಳಿಗಾಗಿ 5x4 ಮೀಟರ್ ಅಳತೆಯ ವಿಶೇಷ ವೇದಿಕೆಯನ್ನು ನಿರ್ಮಿಸಲಾಗಿದೆ.
  • ಆಕರ್ಷಕ ದೀಪಾಲಂಕಾರ: ರಾತ್ರಿಯ ವೇಳೆಯಲ್ಲಿ ನರ್ಮದಾ ನದಿಯ ಸೌಂದರ್ಯ ಮತ್ತು ಸ್ಟ್ಯಾಚ್ಯೂ ಆಫ್ ಯೂನಿಟಿಯ ವೈಭವವನ್ನು ವೀಕ್ಷಿಸಲು ನೌಕೆಗೆ ಅತ್ಯಾಧುನಿಕ 'ಆರ್ಕಿಟೆಕ್ಚರಲ್ ಲೈಟಿಂಗ್' ವ್ಯವಸ್ಥೆ ಮಾಡಲಾಗಿದೆ.

ಸ್ಟ್ಯಾಚ್ಯೂ ಆಫ್ ಯೂನಿಟಿ ಪ್ರದೇಶ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಪ್ರಾಧಿಕಾರದ ಪ್ರಕಾರ, ಈ ನೂತನ ಯೋಜನೆಯು ಏಕತಾ ನಗರವನ್ನು ಜಾಗತಿಕ ಮಟ್ಟದ ಪ್ರವಾಸಿ ಕೇಂದ್ರವನ್ನಾಗಿ ಮತ್ತಷ್ಟು ಬಲಪಡಿಸಲಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ