Saturday, August 1, 2026
Saturday, August 1, 2026

ಇನ್‌ಕ್ರೆಡಿಬಲ್ ಇಂಡಿಯಾ ಜಾಗತಿಕ ಪ್ರಚಾರಕ್ಕೆ ಹೊಸ ಅಭಿಯಾನ

ಭಾರತ, ಪ್ರವಾಸೋದ್ಯಮ, ಇನ್‌ಕ್ರೆಡಿಬಲ್ ಇಂಡಿಯಾ, ಅಭಿಯಾನ, ಇನ್‌ಕ್ರೆಡಿಬಲ್ ಇಂಡಿಯಾ ಬೈ ಇಂಡಿಗೋ, ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, India, Tourism, Incredible India, Campaign, Incredible India by IndiGo, Union Ministry of Tourism

ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಮತ್ತು ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಭಾರತದ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಬಲವಾಗಿ ಪ್ರಚಾರ ಮಾಡಲು ಎರಡು ವರ್ಷಗಳ ಅವಧಿಯ ಒಪ್ಪಂದ (MoU) ಮಾಡಿಕೊಂಡಿವೆ. ಇನ್‌ಕ್ರೆಡಿಬಲ್ ಇಂಡಿಯಾ ಬೈ ಇಂಡಿಗೋ ಹೆಸರಿನ ಈ ಅಭಿಯಾನದ ಮೂಲಕ ವಿದೇಶಿ ಪ್ರವಾಸಿಗರನ್ನು ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಗುರಿಯನ್ನು ಹೊಂದಲಾಗಿದೆ.

Untitled design - 2026-08-01T155645.070

ನವದೆಹಲಿದಲ್ಲಿ ಜುಲೈ 30ರಂದು ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು ಹಣಕಾಸು ಆಧಾರಿತವಲ್ಲದ, ಎರಡು ವರ್ಷಗಳ ಅವಧಿಯ ಸಹಭಾಗಿತ್ವವಾಗಿದ್ದು, ಭಾರತವನ್ನು ಪ್ರಮುಖ ಜಾಗತಿಕ ಪ್ರವಾಸಿ ತಾಣವಾಗಿ ಉತ್ತೇಜಿಸುವ ಉದ್ದೇಶ ಹೊಂದಿದೆ.

ಈ ಸಹಭಾಗಿತ್ವದಡಿ ಭಾರತದ ಸಾಂಸ್ಕೃತಿಕ ಪರಂಪರೆ, ಯುನೆಸ್ಕೋ ವಿಶ್ವ ಪರಂಪರೆ ತಾಣಗಳು, ಆಧ್ಯಾತ್ಮಿಕ ಕೇಂದ್ರಗಳು, ವನ್ಯಜೀವಿ ತಾಣಗಳು, ಸಾಹಸ ಪ್ರವಾಸ, ಆರೋಗ್ಯ ಮತ್ತು ವೆಲ್‌ನೆಸ್ ಪ್ರವಾಸೋದ್ಯಮ, ಪ್ರಕೃತಿ ಸೌಂದರ್ಯ ಸೇರಿದಂತೆ ವಿವಿಧ ಪ್ರವಾಸಿ ಆಕರ್ಷಣೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲಾಗುತ್ತದೆ. ಇಂಡಿಗೋ ತನ್ನ ಅಂತಾರಾಷ್ಟ್ರೀಯ ವಿಮಾನ ಜಾಲ, ಡಿಜಿಟಲ್ ವೇದಿಕೆಗಳು, ವಿಮಾನದೊಳಗಿನ ಸೇವೆಗಳು, ಸಾಮಾಜಿಕ ಜಾಲತಾಣಗಳು, ವಿಮಾನ ನಿಲ್ದಾಣಗಳ ಜಾಹೀರಾತುಗಳು ಹಾಗೂ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನಗಳ ಮೂಲಕ ಈ ಅಭಿಯಾನವನ್ನು ನಡೆಸಲಿದೆ.

ಇದನ್ನೂ ಓದಿ: ಗ್ಲೋಬಲ್ ಪಾಸ್‌ಪೋರ್ಟ್ ಇಂಡೆಕ್ಸ್ 2026: ಭಾರತಕ್ಕೆ ಎಷ್ಟನೇ ಸ್ಥಾನ?

ಪ್ರವಾಸೋದ್ಯಮ ಸಚಿವಾಲಯವು ‘ಇನ್‌ಕ್ರೆಡಿಬಲ್ ಇಂಡಿಯಾ’ ಬ್ರ್ಯಾಂಡ್, ಪ್ರಚಾರ ಸಾಮಗ್ರಿ ಹಾಗೂ ವಿವಿಧ ಪ್ರವಾಸೋದ್ಯಮ ಪಾಲುದಾರರೊಂದಿಗೆ ಸಮನ್ವಯದ ನೆರವು ನೀಡಲಿದೆ. ಇಂಡಿಗೋ ಭಾರತದಲ್ಲಿನ ವೈವಿಧ್ಯಮಯ ಪ್ರವಾಸಿ ತಾಣಗಳ ಕುರಿತು ವಿಶೇಷ ವಿಷಯಗಳನ್ನು ಸಿದ್ಧಪಡಿಸಿ ವಿಶ್ವದ ಕೋಟ್ಯಂತರ ಪ್ರಯಾಣಿಕರಿಗೆ ತಲುಪಿಸಲಿದೆ.

ಈ ಒಪ್ಪಂದವು ಇತ್ತೀಚೆಗೆ ಏರ್ ಇಂಡಿಯಾ ಮತ್ತು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ನಡುವೆ ನಡೆದ ಸಹಭಾಗಿತ್ವದ ಮುಂದುವರಿದ ಭಾಗವಾಗಿದೆ. ಭಾರತದ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಪ್ರಚಾರ ಮಾಡುವ ಮೂಲಕ ವಿದೇಶಿ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲು ಸರಕಾರ ವಿಮಾನಯಾನ ಸಂಸ್ಥೆಗಳೊಂದಿಗೆ ಸಮನ್ವಯದ ಕಾರ್ಯತಂತ್ರವನ್ನು ಅನುಸರಿಸುತ್ತಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!