ಹೋಮ್ ಸ್ಟೇಗಳಿಗೆ ಹೊಸ ನಿಯಮ
ಎಲ್ಲ ಹೋಮ್ ಸ್ಟೇ ಗಳಲ್ಲಿ, ಪೊಲೀಸ್ SOS ಆ್ಯಪ್ ಡೌನ್ ಲೋಡ್ ಮಾಡಿ ಕ್ಯೂಆರ್ ಡಿಸ್ಪ್ಲೇ, ಆ್ಯಪ್ ನಲ್ಲಿ ಸಿಬ್ಬಂದಿ ಕುರಿತು ಸಂಪೂರ್ಣ ಮಾಹಿತಿಯ ಜತೆಗೆ ಮಾಲೀಕರ ಕುರಿತು ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಡಗು ಹೋಮ್ ಸ್ಟೇನಲ್ಲಿ ಸಂಭವಿಸಿದ್ದ ಲೈಂಗಿಕ ದೌರ್ಜನ್ಯ ಘಟನೆಯ ಬಳಿಕ ರಾಜ್ಯ ಸರಕಾರ ಹೋಮ್ ಸ್ಟೇಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಯಾವುದೇ ಹೋಮ್ ಸ್ಟೇ ಅಥವಾ ವಸತಿ ಸ್ಥಳಗಳು ತಮ್ಮ ನೋದಣಿ ಪ್ರಮಾಣಪತ್ರ ಮತ್ತು ಪರವಾನಗಿಯನ್ನು ರಿಸೆಪ್ಷನ್‌ನಲ್ಲಿ ಪ್ರದರ್ಶನ ಮಾಡುವಂತೆ ಖಡಕ್ ಆದೇಶ ನೀಡಲಾಗಿದೆ. ಅಲ್ಲದೆ ಯಾವುದೇ ಪ್ರವಾಸಿ ನಿರ್ವಾಹಕರು ಅಥವ ಪ್ರವಾಸಿಗರು ಬುಕಿಂಗ್ ಮಾಡುವಾಗ ರಿಜಿಸ್ಟರ್ಡ್ ಹೋಮ್ ಸ್ಟೇಗಳನ್ನೇ ಬುಕ್ ಮಾಡುವಂತೆ ಸರಕಾರ ತಿಳಿಸಿದೆ.
ಇದರ ಜತೆಗೆ ಎಲ್ಲ ಹೋಮ್ ಸ್ಟೇ ಗಳಲ್ಲಿ, ಪೊಲೀಸ್ SOS ಆ್ಯಪ್ ಡೌನ್ ಲೋಡ್ ಮಾಡಿ ಕ್ಯೂಆರ್ ಡಿಸ್ಪ್ಲೇ, ಆ್ಯಪ್ ನಲ್ಲಿ ಸಿಬ್ಬಂದಿ ಕುರಿತು ಸಂಪೂರ್ಣ ಮಾಹಿತಿಯ ಜತೆಗೆ ಮಾಲೀಕರ ಕುರಿತು ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಯಮ ಉಲ್ಲಂಘಿಸಿದ ಹೋಮ್‌ಸ್ಟೇಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.