Saturday, February 28, 2026
Saturday, February 28, 2026

ವಿಮಾನ ಪ್ರಯಾಣಿಕರಿಗೆ ಡಿಜಿಸಿಎ ಸಿಹಿ ಸುದ್ದಿ

ಈ ತಿದ್ದುಪಡಿ ನಿಯಗಳ ಅನ್ವಯ ವಿಮಾನ ಪ್ರಯಾಣಿಕರು ತಾವು ಟಿಕೆಟ್‌ ಬುಕಿಂಗ್ ಮಾಡಿದ 48 ಗಂಟೆಗಳ ಒಳಗೆ ಯಾವುದೇ ಚಾರ್ಜಸ್‌ ಇಲ್ಲದೆ ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಬಹುದು. ಟಿಕೆಟ್‌ಗಳಲ್ಲಿನ ಪ್ರಯಾಣಿಕರ ಹೆಸರಿನ ದೋಷಗಳನ್ನೂ ಸರಿಪಡಿಸಿಕೊಳ್ಳಬಹುದು.

ಭಾರತೀಯ ವಿಮಾನ ಪ್ರಯಾಣಿಕರಿಗೆ ಡೈರೆಕ್ಟರೇಟ್‌ ಜನರಲ್‌ ಆಫ್‌ ಸಿವಿಲ್‌ ಏವಿಯೇಷನ್‌ ಸಿಹಿ ಸುದ್ದಿ ನೀಡಿದೆ. ವಿಮಾನ ಯಾನಕ್ಕೆ ಬುಕ್‌ ಮಾಡಿದ ಟಿಕೆಟ್‌ಗಳ ಕ್ಯಾನ್ಸಲೇಷನ್‌ ಮತ್ತು ಹೆಸರು ಬದಲಾಣೆಗಳಿಗೆ ಇದ್ದ ಹೆಚ್ಚುವರಿ ಚಾರ್ಜ್‌ಗಳನ್ನು ತೆರವುಗೊಳಿಸಿದೆ.

ಹೌದು, ವಿಮಾನಯಾನ ಟಿಕೆಟ್ ರದ್ದತಿ, ಬದಲಾವಣೆಗಳು ಮತ್ತು ಮರುಪಾವತಿಗಳ ನಿಯಮಗಳಿಗೆ ಡಿಜಿಸಿಎ ತಿದ್ದುಪಡಿ ತಂದಿದೆ. ಈ ತಿದ್ದುಪಡಿ ನಿಯಗಳ ಅನ್ವಯ ವಿಮಾನ ಪ್ರಯಾಣಿಕರು ತಾವು ಟಿಕೆಟ್‌ ಬುಕಿಂಗ್ ಮಾಡಿದ 48 ಗಂಟೆಗಳ ಒಳಗೆ ಯಾವುದೇ ಚಾರ್ಜಸ್‌ ಇಲ್ಲದೆ ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಬಹುದು. ಟಿಕೆಟ್‌ಗಳಲ್ಲಿನ ಪ್ರಯಾಣಿಕರ ಹೆಸರಿನ ದೋಷಗಳನ್ನೂ ಸರಿಪಡಿಸಿಕೊಳ್ಳಬಹುದು.

ನೇರವಾಗಿ ವಿಮಾನ ಯಾನ ಸಂಸ್ಥೆಗಳ ವೆಬ್‌ಸೈಟ್‌ನಲ್ಲಿ ಬುಕಿಂಗ್‌ ಮಾಡಿದ್ದರೆ 24 ಗಂಟೆಗಳ ಒಳಗೆ ಶುಲ್ಕರಹಿತವಾಗಿ ಹೆಸರಿನ ತಿದ್ದುಪಡಿಗೆ ಕೋರಬಹುದು.

ಟಿಕೆಟ್‌ ಟ್ರಾವೆಲ್‌ ಏಜೆನ್ಸಿಗಳ ಮೂಲಕ ಬುಕಿಂಗ್‌ ಆಗಿದ್ದರೆ, ಅದರ ಮರುಪಾವತಿಯ ಜವಾಬ್ದಾರಿ ವಿಮಾನಯಾನ ಸಂಸ್ಥೆಯ ಮೇಲಿರುತ್ತದೆ. 14 ಕೆಲಸದ ದಿನಗಳಲ್ಲಿ ಹಣ ಮರುಪಾವತಿಯನ್ನು ಖಚಿತಪಡಿಸುವಂತೆ ಡಿಜಿಸಿಎ ವಿಮಾನ ಯಾನ ಸಂಸ್ಥೆಗಳಿಗೆ ತಿಳಿಸಿದೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ