ದೇಬ್ರಿಗಢ ಅರಣ್ಯ ಸಂರಕ್ಷಣಾ ವಲಯದಲ್ಲಿ ಹೋಮ್ ಸ್ಟೇ ಆರಂಭ
ಧೋದ್ರುಕುಸುಮ್ ಗ್ರಾಮದಲ್ಲಿ ಸ್ಥಾಪಿಸಲಾದ ಈ ಹೋಮ್ ಸ್ಟೇ ಕ್ಲಸ್ಟರ್‌ನಲ್ಲಿ ಐದು ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಿರುವ ಕೊಠಡಿಗಳು ಪ್ರವಾಸಿಗರಿಗೆ ಲಭ್ಯವಾಗಲಿವೆ. ಸ್ಥಳೀಯ ವಸ್ತುಗಳಿಂದಲೇ ನಿರ್ಮಿಸಲ್ಪಟ್ಟ ಈ ಮನೆಗಳು, ಪ್ರವಾಸಿಗರು ಪ್ರಕೃತಿಯ ಮಡಿಲಿನಲ್ಲಿ ಗ್ರಾಮೀಣ ವಾತಾವರಣದ ಸೊಬಗನ್ನು ಅನುಭವಿಸಲು ಅವಕಾಶ ಕಲ್ಪಿಸಿಕೊಡುತ್ತವೆ. ಪ್ರತಿ ಹೋಮ್ ಸ್ಟೇಗೆ ಆಧುನಿಕ ಸ್ನಾನಗೃಹ, ವಿದ್ಯುತ್, ನೀರು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.
ದೇಬ್ರಿಗಢ ಅರಣ್ಯ ಸಂರಕ್ಷಣಾ ವಲಯದಲ್ಲಿ ಮೊದಲ ಬಾರಿಗೆ ಹೋಮ್ ಸ್ಟೇ ಸೌಲಭ್ಯವನ್ನು ಪರಿಚಯಿಸಲಾಗಿದ್ದು, ರಾಜ್ಯದ ಇಕೋ-ಟೂರಿಸಂ ವಲಯದಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಪ್ರಕೃತಿ ಆಧಾರಿತ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜತೆಗೆ ಸ್ಥಳೀಯ ಸಮುದಾಯಗಳಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಈ ಯೋಜನೆ ಪ್ರಾರಂಭವಾಗಿದೆ.
ಧೋದ್ರುಕುಸುಮ್ ಗ್ರಾಮದಲ್ಲಿ ಸ್ಥಾಪಿಸಲಾದ ಈ ಹೋಮ್ ಸ್ಟೇ ಕ್ಲಸ್ಟರ್‌ನಲ್ಲಿ ಐದು ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಿರುವ ಕೊಠಡಿಗಳು ಪ್ರವಾಸಿಗರಿಗೆ ಲಭ್ಯವಾಗಲಿವೆ. ಸ್ಥಳೀಯ ವಸ್ತುಗಳಿಂದಲೇ ನಿರ್ಮಿಸಲ್ಪಟ್ಟ ಈ ಮನೆಗಳು, ಪ್ರವಾಸಿಗರು ಪ್ರಕೃತಿಯ ಮಡಿಲಿನಲ್ಲಿ ಗ್ರಾಮೀಣ ವಾತಾವರಣದ ಸೊಬಗನ್ನು ಅನುಭವಿಸಲು ಅವಕಾಶ ಕಲ್ಪಿಸಿಕೊಡುತ್ತವೆ. ಪ್ರತಿ ಹೋಮ್ ಸ್ಟೇಗೆ ಆಧುನಿಕ ಸ್ನಾನಗೃಹ, ವಿದ್ಯುತ್, ನೀರು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.

ಈ ಹೋಮ್ ಸ್ಟೇ ಗಳನ್ನು ಸ್ಥಳೀಯ ಮೂರು ಕುಟುಂಬಗಳು ಒಟ್ಟಾಗಿ ಸೇರಿ ನಿರ್ವಹಿಸುತ್ತಿದ್ದು, ಇದು ಸಮುದಾಯ ಆಧಾರಿತ ಪ್ರವಾಸೋದ್ಯಮದ ಪ್ರಮುಖ ಮಾದರಿಯಾಗಿದೆ. ಪ್ರವಾಸಿಗರಿಗೆ ಆತಿಥ್ಯ ನೀಡುವುದು, ಸ್ಥಳೀಯ ಅಡುಗೆಯನ್ನು ತಯಾರಿಸಿ ಪ್ರವಾಸಿಗರಿಗೆ ಉಣಬಡಿಸುವುದು, ಸಂಸ್ಕೃತಿ–ಪಾರಂಪರ್ಯಗಳನ್ನು ಅವರಿಗೆ ಪರಿಚಯಿಸುವುದು ಹಾಗೂ ಅಗತ್ಯವಾದ ಮಾರ್ಗದರ್ಶನ ಒದಗಿಸುವ ಎಲ್ಲಾ ಸೇವೆಗಳನ್ನೂ ಹಳ್ಳಿಯ ಜನರೇ ನಿರ್ವಹಿಸಲಿದ್ದಾರೆ. ಇದರ ಮೂಲಕ ಸಮುದಾಯಕ್ಕೆ ನೇರ ಆರ್ಥಿಕ ಲಾಭ ಸಿಗುವುದರ ಜತೆಗೆ, ಸ್ಥಳೀಯ ಜೀವನಶೈಲಿ ಮತ್ತು ಪರಂಪರೆಗೆ ಹೊಸ ಮೌಲ್ಯವೂ ದೊರಕಲಿದೆ.
ದೇಬ್ರಿಗಢ ಅರಣ್ಯ ಸಂರಕ್ಷಣಾ ವಲಯ, ಹಿರಾಕುಡ್ ಜಲಾಶಯದ ಪಕ್ಕದಲ್ಲಿರುವ ಪ್ರಮುಖ ವನ್ಯಜೀವಿ ತಾಣವಾಗಿದ್ದು, ದೋಣಿಸವಾರಿ, ಪಕ್ಷಿ ವೀಕ್ಷಣೆ, ಸಫಾರಿ ಮುಂತಾದ ಸಾಹಸಿ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಜಾಗದಂತಿದೆ.