ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಇರಾನ್- ಓಮನ್ ಒಪ್ಪಂದ
ಉಭಯ ರಾಷ್ಟ್ರಗಳ ಸಾಂಸ್ಕೃತಿಕ ಪರಂಪರೆ, ಕಡಲತೀರದ ಸಂಪತ್ತು ಮತ್ತು ವೈದ್ಯಕೀಯ ಮೂಲಸೌಕರ್ಯಗಳ ಸಾಮರ್ಥ್ಯವನ್ನು ಪರಸ್ಪರ ಉಪಯೋಗಿಸಿಕೊಂಡು ಪ್ರವಾಸೋದ್ಯಮದ ಬೆಳವಣಿಗೆಗಾಗಿ ಶ್ರಮಿಸುವತ್ತ ಎರಡೂ ರಾಷ್ಟ್ರಗಳು ದಾಪುಗಾಲನ್ನಿಟ್ಟಿವೆ.
ಇರಾನ್ ಮತ್ತು ಒಮಾನ್ ರಾಷ್ಟ್ರಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿವೆ. ಎರಡೂ ರಾಷ್ಟ್ರಗಳು ಮರೈನ್ ಟೂರಿಸಂ, ಮೆಡಿಕಲ್ ಟೂರಿಸಂ ಮತ್ತು ಸುಸ್ಥಿರ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸಲು ಒಪ್ಪಂದ ಮಾಡಿಕೊಂಡಿವೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಇರಾನ್‌ನ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಒಮಾನ್‌ನ ಸಂಸ್ಕೃತಿ, ಕ್ರೀಡೆ ಮತ್ತು ಯೂತ್ ಅಫೇರ್ಸ್ ಸಚಿವ ಸಲೇಮ್ ಬಿನ್ ಮೊಹಮ್ಮದ್ ಅಲ್ ಮಹ್ರೂಕಿ ಭಾಗವಹಿಸಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.
ಉಭಯ ರಾಷ್ಟ್ರಗಳ ಸಾಂಸ್ಕೃತಿಕ ಪರಂಪರೆ, ಕಡಲತೀರದ ಸಂಪತ್ತು ಮತ್ತು ವೈದ್ಯಕೀಯ ಮೂಲಸೌಕರ್ಯಗಳ ಸಾಮರ್ಥ್ಯವನ್ನು ಪರಸ್ಪರ ಉಪಯೋಗಿಸಿಕೊಂಡು ಪ್ರವಾಸೋದ್ಯಮದ ಬೆಳವಣಿಗೆಗಾಗಿ ಶ್ರಮಿಸುವತ್ತ ಎರಡೂ ರಾಷ್ಟ್ರಗಳು ದಾಪುಗಾಲನ್ನಿಟ್ಟಿವೆ.

ಮರೈನ್ ಟೂರಿಸಂ ಕ್ಷೇತ್ರದಲ್ಲಿ, ಹಾರ್ಮುಜ್ ಖಡಿ ಪ್ರದೇಶದ ನೈಸರ್ಗಿಕ ಸಂಪತ್ತನ್ನು ಪ್ರವಾಸೋದ್ಯಮದ ಹೊಸ ತಾಣವನ್ನಾಗಿ ಅಭಿವೃದ್ಧಿಪಡಿಸಲು ಎರಡು ರಾಷ್ಟ್ರಗಳು ನಿರ್ಧರಿಸಿವೆ. ಅದೇ ರೀತಿ, ಮೆಡಿಕಲ್ ಟೂರಿಸಂನ ಅಡಿಯಲ್ಲಿ ಇರಾನ್‌ನ ಉನ್ನತ ವೈದ್ಯಕೀಯ ಸೇವೆಗಳನ್ನು ಒಮಾನ್ ಪ್ರವಾಸಿಗರು ಉಪಯೋಗಿಸಿಕೊಳ್ಳುವ ಯೋಜನೆ ರೂಪಿಸಲಾಗಿದೆ.
ಸುಸ್ಥಿರ ಪ್ರವಾಸೋದ್ಯಮದ ದೃಷ್ಟಿಯಿಂದ, ಪರಿಸರ ಸಂರಕ್ಷಣೆ, ಸಮುದಾಯಗಳ ಪಾಲ್ಗೊಳ್ಳುವಿಕೆ ಮತ್ತು ಸಾಂಸ್ಕೃತಿಕ ಸಮನ್ವಯಕ್ಕೆ ಎರಡೂ ರಾಷ್ಟ್ರಗಳು ಬದ್ಧವಿರುವುದಾಗಿ ತಿಳಿಸಿವೆ. ಈ ಎಲ್ಲ ಕ್ರಮಗಳು ಪ್ರವಾಸೋದ್ಯಮದ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಸಮತೋಲನ ಸಾಧಿಸಲು ಪ್ರಮುಖ ಅಸ್ತ್ರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ, ನೇರ ವಿಮಾನಸೇವೆಗಳ ವಿಸ್ತರಣೆ, ಎರಡೂ ರಾಷ್ಟ್ರಗಳು ಒಟ್ಟಾಗಿ ಪ್ರವಾಸೋದ್ಯಮದ ಪ್ರದರ್ಶನಗಳನ್ನು ನಡೆಸುವುದು ಮತ್ತು ಪ್ರವಾಸೋದ್ಯಮದ ಬೆಳವಣಿಗೆ ಸಂಬಂಧಿತ ಸಂಶೋಧನೆಗೆ ಸಹಕಾರ ನೀಡುವಂಥ ಪ್ರಮುಖ ವಿಚಾರಗಳು ಚರ್ಚಿಸಲ್ಪಟ್ಟವು.