ಸೌದಿಯಾ ವಿಮಾನಯಾನ ಸಂಸ್ಥೆಯಿಂದ ರಿಯಾಯಿತಿ
ಸೌದಿ ಅರೇಬಿಯಾದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಸೌದಿಯಾ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಶೇ.50ರವರೆಗೆ ರಿಯಾಯಿತಿ ನೀಡುವ ವಿಶೇಷ ಕೊಡುಗೆಯನ್ನು ಘೋಷಿಸಿದೆ.
ಸೌದಿ ಅರೇಬಿಯಾದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಸೌದಿಯಾ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಶೇ.50ರವರೆಗೆ ರಿಯಾಯಿತಿ ನೀಡುವ ವಿಶೇಷ ಕೊಡುಗೆಯನ್ನು ಘೋಷಿಸಿದೆ.
ಸೌದಿ ಅರೇಬಿಯಾದಿಂದ ವಿವಿಧ ಅಂತಾರಾಷ್ಟ್ರೀಯ ತಾಣಗಳಿಗೆ ಹಾಗೂ ಸೌದಿ ಮೂಲಕ ಸಂಪರ್ಕ ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಈ ಆಫರ್ ಅನ್ವಯವಾಗಲಿದೆ. ಸೌದಿಯಾದ ಜಾಲವು ನಾಲ್ಕು ಖಂಡಗಳ ಹಲವು ತಾಣಗಳನ್ನು ಒಳಗೊಂಡಿದ್ದು, ಪ್ರವಾಸೋದ್ಯಮ ಮತ್ತು ಉಮ್ರಾ ಪ್ರಯಾಣವನ್ನು ಉತ್ತೇಜಿಸುವುದು ಕೊಡುಗೆಯ ಉದ್ದೇಶವಾಗಿದೆ.
ಈ ಕೊಡುಗೆಯಡಿ ಟಿಕೆಟ್‌ಗಳನ್ನು ಆಗಸ್ಟ್ 20ರಿಂದ ಸೆಪ್ಟೆಂಬರ್ 3, 2026ರವರೆಗೆ ಕಾಯ್ದಿರಿಸಬಹುದು. ಪ್ರಯಾಣದ ಅವಧಿ ಸೆಪ್ಟೆಂಬರ್ 1ರಿಂದ ಡಿಸೆಂಬರ್ 10, 2026ರವರೆಗೆ ಇರಲಿದೆ. ಏಕಮುಖ ಮತ್ತು ರಿಟರ್ನ್ ಟಿಕೆಟ್‌ಗಳೆರಡಕ್ಕೂ ಆಫರ್ ಅನ್ವಯವಾಗಲಿದ್ದು, ಗೆಸ್ಟ್ ಹಾಗೂ ಬಿಸಿನೆಸ್ ಕ್ಲಾಸ್ ಪ್ರಯಾಣಿಕರು ಇದರ ಪ್ರಯೋಜನ ಪಡೆಯಬಹುದು.
ಸೌದಿಯಾದ ಡಿಜಿಟಲ್, ವಿಮಾನ ನಿಲ್ದಾಣ ಮತ್ತು ವಿಮಾನದೊಳಗಿನ ಸೇವೆಗಳೂ ಪ್ರಯಾಣಿಕರಿಗೆ ಲಭ್ಯವಿರಲಿವೆ. ಅಲ್‌ಫುರ್ಸಾನ್ ಸದಸ್ಯರಿಗೆ ಹೆಚ್ಚುವರಿಯಾಗಿ, ಈ ಅವಧಿಯಲ್ಲಿ ಬುಕ್ ಮಾಡಿದ ವಿಮಾನ ಪ್ರಯಾಣಕ್ಕೆ ಶೇ.100 ಬೋನಸ್ ಟಿಯರ್ ಕ್ರೆಡಿಟ್ ದೊರೆಯಲಿದೆ.