ಚೋ-ಲಾ ಮತ್ತು ಡೋಕ್-ಲಾ ಪಾಸ್‌ಗಳನ್ನು ಪ್ರವಾಸಿಗರಿಗೆ ತೆರೆದ ಸಿಕ್ಕಿಂ
ಚೋ-ಲಾ ಪಾಸ್ 1967ರ ಭಾರತ–ಚೀನಾ ಸಂಘರ್ಷದ ಇತಿಹಾಸಕ್ಕೆ ಸಾಕ್ಷಿಯಾಗಿದ್ದರೆ, ಡೋಕ್-ಲಾ ಪಾಸ್ 2017ರಲ್ಲಿ ಭಾರತ ಮತ್ತು ಚೀನಾ ಮುಖಾಮುಖಿಯಾದ ಸಂದರ್ಭಕ್ಕೆ ಸಾಕ್ಷಿಯಾಗಿದೆ. ಈ ಪಾಸ್‌ಗಳು ಸಿಕ್ಕಿಂ, ಭೂತಾನ್ ಮತ್ತು ಚೀನಾ ಮೂರು ದೇಶಗಳಿಗೆ ಹತ್ತಿರವಿರುವುದರಿಂದ ವಿಶೇಷ ಮಹತ್ವ ಪಡೆದಿವೆ.
ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಸಿಕ್ಕಿಂ ಸರಕಾರವು ಭಾರತ ರಣಭೂಮಿ ದರ್ಶನ (Bharat Ran Bhoomi Darshan) ಯೋಜನೆಯಡಿ ಚೋ-ಲಾ ಮತ್ತು ಡೋಕ್-ಲಾ ಪಾಸ್‌ಗಳನ್ನು ಪ್ರವಾಸಿಗರಿಗೆ ಅಧಿಕೃತವಾಗಿ ತೆರೆದಿದೆ. ಈ ಕ್ರಮವು ಸಿಕ್ಕಿಂ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವುದರ ಜತೆಗೆ, ದೇಶದ ಸೈನಿಕರ ಇತಿಹಾಸವನ್ನು ಜನರಿಗೆ ಪರಿಚಯಿಸುವ ಮಹತ್ವದ ಹೆಜ್ಜೆಯಾಗಿದೆ.
ಚೋ-ಲಾ ಪಾಸ್ 1967ರ ಭಾರತ–ಚೀನಾ ಸಂಘರ್ಷದ ಇತಿಹಾಸಕ್ಕೆ ಸಾಕ್ಷಿಯಾಗಿದ್ದರೆ, ಡೋಕ್-ಲಾ ಪಾಸ್ 2017ರಲ್ಲಿ ಭಾರತ ಮತ್ತು ಚೀನಾ ಮುಖಾಮುಖಿಯಾದ ಸಂದರ್ಭಕ್ಕೆ ಸಾಕ್ಷಿಯಾಗಿದೆ. ಈ ಪಾಸ್‌ಗಳು ಸಿಕ್ಕಿಂ, ಭೂತಾನ್ ಮತ್ತು ಚೀನಾ ಮೂರು ದೇಶಗಳಿಗೆ ಹತ್ತಿರವಿರುವುದರಿಂದ ವಿಶೇಷ ಮಹತ್ವ ಪಡೆದಿವೆ.

ಪ್ರವಾಸಿಗರಿಗೆ ಪ್ರವೇಶವನ್ನು ಕಟ್ಟುನಿಟ್ಟಿನ ಭದ್ರತಾ ಕ್ರಮಗಳು ಮತ್ತು ನಿರ್ದಿಷ್ಟ ಮಾರ್ಗಸೂಚಿಗಳ ಅಡಿಯಲ್ಲಿ ಮಾತ್ರ ಅನುಮತಿಸಲಾಗುತ್ತದೆ ಎಂದು ಸಿಕ್ಕಿಂ ಸರಕಾರ ಸ್ಪಷ್ಟಪಡಿಸಿದೆ. ಅಗತ್ಯ ಪರವಾನಗಿಯೊಂದಿಗೆ, ಭದ್ರತಾ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿಯೇ ಪ್ರವಾಸಿಗರು ಈ ಸ್ಥಳಗಳನ್ನು ವೀಕ್ಷಿಸಬೇಕಾಗುತ್ತದೆ.
ಈ ಯೋಜನೆಯು ಕೇಂದ್ರ ಸರಕಾರದ ʼರಣಭೂಮಿ ದರ್ಶನ ಇನಿಶಿಯೇಟಿವ್ʼನ ಭಾಗವಾಗಿದ್ದು, ಯುದ್ಧ ಇತಿಹಾಸಕ್ಕೆ ಸಂಬಂಧಿಸಿದ ಸ್ಥಳಗಳನ್ನು ಪ್ರವಾಸೋದ್ಯಮದ ಮೂಲಕ ಜನತೆಗೆ ಪರಿಚಯಿಸುವ ಗುರಿ ಹೊಂದಿದೆ. ಇದರೊಂದಿಗೆ ಸ್ಥಳೀಯ ಆರ್ಥಿಕತೆ ಬಲಪಡಿಸುವುದು ಮತ್ತು ಯುವ ಪೀಳಿಗೆಯಲ್ಲಿ ದೇಶಭಕ್ತಿ ಹಾಗೂ ಐತಿಹಾಸಿಕ ಜಾಗೃತಿ ಮೂಡಿಸುವುದು ಸರಕಾರದ ಉದ್ದೇಶವಾಗಿದೆ.