13ನೇ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮೇಳಕ್ಕೆ ಸಜ್ಜಾದ ಸಿಕ್ಕಿಂ
ಭಾರತ ಸರಕಾರದ ಪ್ರವಾಸೋದ್ಯಮ ಸಚಿವಾಲಯ ಹಾಗೂ ಸಿಕ್ಕಿಂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಆಯೋಜಿಸುತ್ತಿರುವ ಈ ಮೇಳದಲ್ಲಿ ದೇಶದ ವಿವಿಧ ರಾಜ್ಯಗಳು ಮತ್ತು 18ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬಿ2ಬಿ ಸಂವಾದಗಳು, ಪ್ರದರ್ಶನಗಳು, ಸ್ಥಳೀಯ ಹಸ್ತಶಿಲ್ಪ ಹಾಗೂ ಸಂಸ್ಕೃತಿ ಪ್ರದರ್ಶನಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿವೆ.
ಸಿಕ್ಕಿಂ ರಾಜ್ಯವು ನವೆಂಬರ್ 13ರಿಂದ 16ರವರೆಗೆ 13ನೇ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮೇಳ (13th International Tourism Mart – ITM 2025) ವನ್ನು ಆಯೋಜಿಸುತ್ತಿದೆ. ಈ ಮೇಳವು ಸಿಕ್ಕಿಂ ರಾಜಧಾನಿ ಗ್ಯಾಂಗ್ಟಾಕ್‌ನಲ್ಲಿ ನಡೆಯಲಿದ್ದು, ಸಮುದಾಯ ಆಧರಿತ ತನ್ನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ರಾಜ್ಯ ಸಜ್ಜಾಗಿದೆ.

ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಹಾಗೂ ಸಿಕ್ಕಿಂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಆಯೋಜಿಸುತ್ತಿರುವ ಈ ಮೇಳದಲ್ಲಿ ದೇಶದ ವಿವಿಧ ರಾಜ್ಯಗಳು ಮತ್ತು 18ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬಿ2ಬಿ ಸಂವಾದಗಳು, ಪ್ರದರ್ಶನಗಳು, ಸ್ಥಳೀಯ ಹಸ್ತಶಿಲ್ಪ ಹಾಗೂ ಸಂಸ್ಕೃತಿ ಪ್ರದರ್ಶನಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿವೆ.
ITM 2025ರ ಮೂಲಕ ಸಿಕ್ಕಿಂ ಮತ್ತು ಇಡೀ ಈಶಾನ್ಯ ಭಾರತದ ಪ್ರವಾಸೋದ್ಯಮ ವಲಯದ ಬೆಳವಣಿಗೆಗೆ ಹೊಸ ವೇಗ ದೊರೆಯುವ ನಿರೀಕ್ಷೆಯಿದೆ. ಈ ಕಾರ್ಯಕ್ರಮವು ಹೂಡಿಕೆಯನ್ನು ಸೆಳೆಯಲು, ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹಾಗೂ ಸುಸ್ಥಿರ ಪ್ರವಾಸೋದ್ಯಮದ ಅಭಿವೃದ್ಧಿಗೆ ಪ್ರಮುಖ ವೇದಿಕೆಯಾಗುವ ನಂಬಿಕೆಯನ್ನು ಸರಕಾರ ವ್ಯಕ್ತಪಡಿಸಿದೆ.