Monday, September 7, 2026
Monday, September 7, 2026

ಅಮೃತಸರ್‌ ವಿಮಾನ ನಿಲ್ದಾಣದ ಬಳಿ ಶಂಕಿತ ಡ್ರೋನ್‌ಗಳು ಪತ್ತೆ

ರಾತ್ರಿಯ ವೇಳೆಯಲ್ಲಿ ವಿಮಾನ ನಿಲ್ದಾಣದ ನಿರ್ಬಂಧಿತ ವಲಯದ ಸುತ್ತಮುತ್ತ ಅನುಮಾನಾಸ್ಪದ ಡ್ರೋನ್‌ಗಳ ಚಲನವಲನಗಳು ಕಂಡುಬಂದ ತಕ್ಷಣ, ಸ್ಥಳದಲ್ಲಿದ್ದ ರಡಾರ್ ಹಾಗೂ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ.

ಪಂಜಾಬ್‌ನ ಅಮೃತಸರ್‌ನಲ್ಲಿರುವ ಶ್ರೀ ಗುರು ರಾಮ್ ದಾಸ್ ಜೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ವಾಯುಪ್ರದೇಶದಲ್ಲಿ ಶಂಕಿತ ಡ್ರೋನ್‌ಗಳು ಹಾರಾಟ ನಡೆಸಿರುವುದು ಪತ್ತೆಯಾಗಿದ್ದು, ಭದ್ರತಾ ದೃಷ್ಟಿಯಿಂದ ತಕ್ಷಣವೇ ವಿಮಾನಗಳ ಹಾದಿಯನ್ನು ಬದಲಾಯಿಸಿ ತುರ್ತು ಭದ್ರತಾ ಎಚ್ಚರಿಕೆಯನ್ನು ಘೋಷಿಸಲಾಗಿದೆ. ವಿಮಾನಯಾನ ಸುರಕ್ಷತೆಗೆ ಸಂಭವಿಸಬಹುದಾದ ಗಂಡಾತರವನ್ನು ತಪ್ಪಿಸಲು ಭದ್ರತಾ ಏಜೆನ್ಸಿಗಳು ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರವು ತ್ವರಿತ ಕಾರ್ಯಾಚರಣೆ ಕೈಗೊಂಡಿವೆ.

ಇದನ್ನೂ ಓದಿ: ಅಮೃತ್‌ಸರ್‌ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ಎಡವಟ್ಟು

ರಾತ್ರಿಯ ವೇಳೆಯಲ್ಲಿ ವಿಮಾನ ನಿಲ್ದಾಣದ ನಿರ್ಬಂಧಿತ ವಲಯದ ಸುತ್ತಮುತ್ತ ಅನುಮಾನಾಸ್ಪದ ಡ್ರೋನ್‌ಗಳ ಚಲನವಲನಗಳು ಕಂಡುಬಂದ ತಕ್ಷಣ, ಸ್ಥಳದಲ್ಲಿದ್ದ ರಡಾರ್ ಹಾಗೂ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಣ (ATC) ಕೊಠಡಿಯು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಆ ಸಮಯದಲ್ಲಿ ಲ್ಯಾಂಡ್ ಆಗಬೇಕಿದ್ದ ಮತ್ತು ಟೇಕ್‌ಆಫ್ ಆಗಬೇಕಿದ್ದ ವಿಮಾನಗಳನ್ನು ಸುರಕ್ಷಿತವಾಗಿ ಇತರ ಹತ್ತಿರದ ವಿಮಾನ ನಿಲ್ದಾಣಗಳಿಗೆ ತಿರುಗಿಸಿದೆ.

ಸಂಶಯಾಸ್ಪದ ವಸ್ತುಗಳ ಪತ್ತೆಯ ಬೆನ್ನಲ್ಲೇ ಪಂಜಾಬ್ ಪೊಲೀಸ್ ಪಡೆ, ಗಡಿ ಭದ್ರತಾ ಪಡೆ (BSF) ಹಾಗೂ ಗುಪ್ತಚರ ಇಲಾಖೆಯು ಜಂಟಿಯಾಗಿ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧನಾ ಕಾರ್ಯಾಚರಣೆ ಆರಂಭಿಸಿವೆ. ಗಡಿ ಭಾಗಕ್ಕೆ ಹತ್ತಿರವಿರುವ ಅಮೃತಸರ ವಿಮಾನ ನಿಲ್ದಾಣದ ಭದ್ರತೆಯು ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವುದಿರಿಂದ, ಈ ಡ್ರೋನ್‌ಗಳ ಮೂಲ ಹಾಗೂ ಅವುಗಳ ಉದ್ದೇಶದ ಕುರಿತು ಉನ್ನತ ಮಟ್ಟದ ತನಿಖೆ ಮುಂದುವರಿದಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ