Wednesday, November 12, 2025
Wednesday, November 12, 2025

ಓವರ್‌ ಟೂರಿಸಂ ನಿಯಂತ್ರಿಸಲು ನೂತನ ತೆರಿಗೆ ನೀತಿ ಜಾರಿ

ಥೈಲ್ಯಾಂಡ್ ಸರ್ಕಾರವು ಪ್ರತಿ ವಿದೇಶಿ ಪ್ರವಾಸಿಗರಿಂದ 300 ಬಾತ್ ತೆರಿಗೆ ವಸೂಲಿ ಮಾಡಲು ಯೋಜನೆ ರೂಪಿಸಿದ್ದು, ಇದರ ಮೂಲಕ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಕೈಗೊಳ್ಳುವುದು, ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವುದು, ಅಗತ್ಯ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುವುದು ಮತ್ತು ಪರಿಸರ ಸಂರಕ್ಷಣೆಗೆ ನಿಧಿ ಸಂಗ್ರಹಿಸುವ ಯೋಜನೆ ಹೊಂದಿದೆ. ಇತರ ರಾಷ್ಟ್ರಗಳಾದ ಜಪಾನ್, ನಾರ್ವೇ, ಗ್ರೀಸ್, ಇಟಲಿ ಮತ್ತು ಸ್ಪೇನ್ ಕೂಡ ಇದೇ ಮಾದರಿಯ ತೆರಿಗೆ ನೀತಿಗಳನ್ನು ಅನುಸರಿಸಲು ಸಜ್ಜಾಗಿವೆ.

ಪ್ರವಾಸೋದ್ಯಮದ ತ್ವರಿತ ಬೆಳವಣಿಗೆಯಿಂದಾಗಿ ಪರಿಸರದ ಮೇಲೆ ಉಂಟಾಗುತ್ತಿರುವ ಒತ್ತಡವನ್ನು ನಿಯಂತ್ರಿಸಲು, ಥೈಲ್ಯಾಂಡ್ ಸೇರಿದಂತೆ ಜಪಾನ್, ನಾರ್ವೇ, ಗ್ರೀಸ್, ಇಟಲಿ ಮತ್ತು ಸ್ಪೇನ್ ದೇಶಗಳು 2026ರಿಂದ ಹೊಸ ಪ್ರವಾಸೋದ್ಯಮ ತೆರಿಗೆಗಳನ್ನು ಜಾರಿಗೆ ತರಲು ನಿರ್ಧರಿಸಿವೆ. ಈ ಯೋಜನೆಯು ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜತೆಗೆ ಸ್ಥಳೀಯ ಸಂಸ್ಕೃತಿ ಹಾಗೂ ನೈಸರ್ಗಿಕ ಸಂಪತ್ತನ್ನು ಕಾಪಾಡುವ ಉದ್ದೇಶವನ್ನು ಹೊಂದಿದೆ.

Thailand tourism (1)


ಥೈಲ್ಯಾಂಡ್ ಸರ್ಕಾರವು ಪ್ರತಿ ವಿದೇಶಿ ಪ್ರವಾಸಿಗರಿಂದ ಹೆಚ್ಚುವರಿ ತೆರಿಗೆ ವಸೂಲಿ ಮಾಡಲು ಯೋಜನೆ ರೂಪಿಸಿದ್ದು, ಇದರ ಮೂಲಕ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಕೈಗೊಳ್ಳುವುದು, ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವುದು, ಅಗತ್ಯ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುವುದು ಮತ್ತು ಪರಿಸರ ಸಂರಕ್ಷಣೆಗೆ ನಿಧಿ ಸಂಗ್ರಹಿಸುವ ಯೋಜನೆ ಹೊಂದಿದೆ. ಇತರ ರಾಷ್ಟ್ರಗಳಾದ ಜಪಾನ್, ನಾರ್ವೇ, ಗ್ರೀಸ್, ಇಟಲಿ ಮತ್ತು ಸ್ಪೇನ್ ಕೂಡ ಇದೇ ಮಾದರಿಯ ತೆರಿಗೆ ನೀತಿಗಳನ್ನು ಅನುಸರಿಸಲು ಸಜ್ಜಾಗಿವೆ.

ಈ ರೀತಿಯ ಕ್ರಮವು ಓವರ್‌ ಟೂರಿಸಂ(Over tourism)ನಿಂದ ಉಂಟಾಗುತ್ತಿರುವ ಹಾನಿಯನ್ನು ಸರಿಪಡಿಸಿ, ಪ್ರವಾಸಿಗರಲ್ಲಿ ರೆಸ್ಪಾನ್ಸಿಬಲ್‌ ಟೂರಿಸ್ಟ್‌ (Responsible tourist) ಮನೋಭಾವವನ್ನು ಬೆಳೆಸಿ ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಕಾರಿಯಾಗಿದೆ.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ