ಪ್ರಸ್ತುತ ನಡೆಯುತ್ತಿರುವ ಯುದ್ಧ ಹಾಗೂ ಇತರ ಕಾರಣಗಳಿಂದಾಗಿ ಥೈಲ್ಯಾಂಡ್‌ ಪ್ರವಾಸೋದ್ಯಮ ಸವಾಲೂಗಳನ್ನು ಎದುರಿಸುತ್ತಿದೆ. ಇದನ್ನು ಬಗೆಹರಿಸಲು ಥೈಲ್ಯಾಂಡ್ ಸರಕಾರ ಬೃಹತ್ "ತುರ್ತು ಕ್ರಿಯಾ ಯೋಜನೆ"ಯನ್ನು ಘೋಷಿಸಿದೆ. ವಿಶೇಷವಾಗಿ ಬ್ಯಾಂಕಾಕ್, ಫುಕೆಟ್ ಮತ್ತು ಚಿಯಾಂಗ್ ಮಾಯ್‌ನಂಥ ಪ್ರಮುಖ ಪ್ರವಾಸಿ ತಾಣಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ.

ಇತ್ತೀಚಿನ ಭದ್ರತಾ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು, ಥೈಲ್ಯಾಂಡ್ ಸರಕಾರ ಪ್ರವಾಸಿಗರ ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಪ್ರಮುಖ ಪ್ರವಾಸಿ ತಾಣಗಳಲ್ಲಿ ಗಸ್ತು ತಿರುಗುವ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಬ್ಯಾಂಕಾಕ್ ಮತ್ತು ಫುಕೆಟ್‌ನಂಥ ನಗರಗಳಲ್ಲಿ ಸುಧಾರಿತ ಎಐ ಚಾಲಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರಿಗಾಗಿ ಬಹುಭಾಷಾ ಸಹಾಯವಾಣಿ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿದೆ.

ಇದನ್ನೂ ಓದಿ: ಎಚ್-1ಬಿ ವೀಸಾ ಹೊಸ ರೂಲ್ಸ್

ನಗರದೊಳಗೆ ಸುಲಭ ಸಂಚಾರಕ್ಕಾಗಿ ಸಾರಿಗೆ ಜಾಲವನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಪ್ರವಾಸಿಗರಿಂದ ಹೆಚ್ಚಿನ ಹಣ ವಸೂಲಿ ಮಾಡುವುದನ್ನು ತಡೆಯಲು ಟ್ಯಾಕ್ಸಿ ಮತ್ತು ದೋಣಿ ಸೇವೆಗಳಿಗೆ ಕಟ್ಟುನಿಟ್ಟಿನ ದರ ಪಟ್ಟಿಯನ್ನು ಜಾರಿಗೆ ತರಲಾಗಿದೆ.

ಥೈಲ್ಯಾಂಡ್‌ಗೆ ಬರುವ ಪ್ರತಿಯೊಬ್ಬ ಪ್ರವಾಸಿಗರಿಗೆ ಸಮಗ್ರ ವಿಮಾ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸರಕಾರ ಉತ್ತೇಜಿಸುತ್ತಿದೆ. ಪ್ರವಾಸಿ ತಾಣಗಳ ಸಮೀಪದಲ್ಲಿ ಅತ್ಯಾಧುನಿಕ ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಪ್ರವಾಸಿಗರನ್ನು ಆಕರ್ಷಿಸಲು ಸರಕಾರ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಕೆಲವು ದೇಶಗಳ ಪ್ರವಾಸಿಗರಿಗೆ ವೀಸಾ ನಿಯಮಗಳನ್ನು ಸಡಿಲಗೊಳಿಸಲಾಗಿದೆ ಅಥವಾ ಶುಲ್ಕ ರಿಯಾಯಿತಿ ನೀಡಲಾಗಿದೆ. ಹೊಟೇಲ್‌‌ಗಳು ಮತ್ತು ವಿಮಾನಯಾನ ಸಂಸ್ಥೆಗಳೊಂದಿಗೆ ಸಹಕರಿಸಿ ರಿಯಾಯಿತಿ ದರದ ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡಲಾಗಿದೆ.