ಬಿಹಾರದಲ್ಲೊಂದು ಮೆಗಾ ಫಿಲಂ ಸಿಟಿ!
ರಾಜ್‌ಗಿರ್‌ನ ವಿಶೇಷವಾದ ಗಿರಿಧಾಮಗಳು, ಐತಿಹಾಸಿಕ ತಾಣಗಳು ಹಾಗೂ ಅಭಿವೃದ್ಧಿಗೊಂಡ ಸಾರಿಗೆ-ಸಂಪರ್ಕ ವ್ಯವಸ್ಥೆಗಳ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಇದೊಂದು ಪ್ರಮುಖ ಮೂವಿ ಶೂಟಿಂಗ್ ಹಬ್ ಆಗಬಹುದೆಂಬ ಮುಂದಾಲೋಚನೆ ಬಿಹಾರ ಸರಕಾರದ್ದು.
ಭಾರತದ ಪೂರ್ವದ ಪ್ರದೇಶಗಳಲ್ಲಿ ಸಿನಿಮಾ ನಿರ್ಮಾಣದ ಕೇಂದ್ರವನ್ನು ಹುಟ್ಟುಹಾಕುವ ಉದ್ದೇಶದಿಂದ ಬಿಹಾರ ಸರಕಾರವು ರಾಜ್‌ಗಿರ್‌ನಲ್ಲಿ ಮೆಗಾ ಫಿಲಂ ಸಿಟಿಯನ್ನು ನಿರ್ಮಿಸುವ ತಯಾರಿಯಲ್ಲಿದೆ. ಈ ಯೋಜನೆಯ ಮೂಲಕ ಬಿಹಾರದಲ್ಲಿ ಪ್ರವಾಸೋದ್ಯಮದ ಬೆಳವಣಿಗೆ ಸಾಧ್ಯವಾಗುವುದಷ್ಟೇ ಅಲ್ಲದೆ ಇತರೇ ನಿರ್ಮಾಣ ಸಂಸ್ಥೆಗಳನ್ನು ಆಕರ್ಷಿಸುವ ಮೂಲಕ ಸಾಕಷ್ಟು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲು ಸಹಕಾರಿಯಾಗಲಿದೆ. ಅತ್ಯಾಧುನಿಕ ಸ್ಟುಡಿಯೋಗಳು, ಔಟ್‌ಡೋರ್ ಸೆಟ್ಸ್, ಪೋಸ್ಟ್ ಪ್ರೊಡಕ್ಷನ್ ಸೌಲಭ್ಯಗಳು ಮಾತ್ರವಲ್ಲದೆ ಜಾಗತಿಕ ಗುಣಮಟ್ಟದ ಮೂಲಸೌಕರ್ಯಗಳನ್ನು ಈ ಮೆಗಾ ಫಿಲಂ ಸಿಟಿ ಹೊಂದಿರಲಿದ್ದು, ಭಾರತೀಯ ಹಾಗೂ ಅಂತಾರಾಷ್ಟ್ರೀಯ ಸಿನಿಮಾ ತಯಾರಕರನ್ನು ಏಕಕಾಲದಲ್ಲಿ ಆಕರ್ಷಿಸುವುದಾಗಿ ಮೂಲಗಳು ತಿಳಿಸಿವೆ. ನಿರ್ದೇಶಕ ರಾಜಮೌಳಿಯವರ ಮುಂದಿನ ಚಿತ್ರವನ್ನು ಇಲ್ಲಿಯೇ ಚಿತ್ರೀಕರಣ ಮಾಡಬೇಕಾಗಿ ಬಿಹಾರ ಸರಕಾರ ಬೇಡಿಕೆಯನ್ನೂ ಇಟ್ಟಿದೆ. ಒಟ್ಟಿನಲ್ಲಿ ರಾಜ್‌ಗಿರ್‌ನ ವಿಶೇಷವಾದ ಗಿರಿಧಾಮಗಳು, ಐತಿಹಾಸಿಕ ತಾಣಗಳು ಹಾಗೂ ಅಭಿವೃದ್ಧಿಗೊಂಡ ಸಾರಿಗೆ-ಸಂಪರ್ಕ ವ್ಯವಸ್ಥೆಗಳ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಇದೊಂದು ಪ್ರಮುಖ ಮೂವಿ ಶೂಟಿಂಗ್ ಹಬ್ ಆಗಬಹುದೆಂಬ ಮುಂದಾಲೋಚನೆ ಬಿಹಾರ ಸರಕಾರದ್ದು.