ತ್ರಿಶೂರಿನಲ್ಲಿ ಅಡ್ವೆಂಚರ್ ಕೇಂದ್ರಗಳನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಕೆ
ಮುನಿಯಾಟ್ಟುಕುನ್ನು ಬೆಟ್ಟದ ತುದಿಯಿಂದ ಪ್ರವಾಸಿಗರು ಸುಂದರವಾದ ಹಸಿರು ಅರಣ್ಯ ಪ್ರದೇಶಗಳನ್ನು ವೀಕ್ಷಿಸಬಹುದು ಜತೆಗೆ ತ್ರಿಶೂರು ನಗರವನ್ನೂ ವೀಕ್ಷಿಸಬಹುದಾಗಿದೆ. ಕುಂಜಾಲಿಪುರ ಶಿಖರದಿಂದ ಕನಕಮಲಾ ಮತ್ತು ಚಾಲಕುಡಿ ತಾಣಗಳು ನೋಡುಗರ ಕಣ್ಮನ ಸೆಳೆಯುತ್ತವೆ.
ತ್ರಿಶೂರು ಜಿಲ್ಲೆಯಲ್ಲಿ ಸಾಹಸ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿ (DTPC) ಮುನಿಯಾಟ್ಟುಕುನ್ನು ಮತ್ತು ಕುಂಜಲಿಪಾರ ಎಂಬ ಎರಡು ನೈಸರ್ಗಿಕ ತಾಣಗಳನ್ನು ಅಡ್ವೆಂಚರ್ ಟೂರಿಸಂ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ 2 ಕೋಟಿ ರುಪಾಯಿ ವೆಚ್ಚದ ಯೋಜನೆಯ ಬಗ್ಗೆ ವಿವರವಾದ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದೆ.
ಮುನಿಯಾಟ್ಟುಕುನ್ನು ಪ್ರದೇಶವು ಇಂಚಕುಂಡು ಪಂಚಾಯತಿ ವ್ಯಾಪ್ತಿಗೆ ಸೇರಿದ್ದು, ಐತಿಹಾಸಿಕ ʼಮುಣಿಯರಾಸʼ ಕಲ್ಲಿನ ಸಮಾಧಿಗಳಿಗಾಗಿ ಹೆಸರುವಾಸಿಯಾಗಿದೆ. ಅದರಂತೆ ಕುಂಜಾಲಿಪುರ ಪ್ರದೇಶವು ಮಟ್ಟಾತ್ತುರು ಪಂಚಾಯತಿ ವ್ಯಾಪ್ತಿಗೆ ಸೇರುತ್ತದೆ. ಎರಡೂ ಜಾಗಗಳನ್ನು ಬಸ್ ಅಥವಾ ಸ್ವಂತ ವಾಹನಗಳ ಮೂಲಕ ತಲುಪಬಹುದು ಆದರೆ ಬೆಟ್ಟಗಳ ಶಿಖರ ತಲುಪಲು ಸುಮಾರು 1.5 ಕಿಮೀ ಟ್ರೆಕ್ಕಿಂಗ್ ಅಗತ್ಯವಿದೆ.

ಮುನಿಯಾಟ್ಟುಕುನ್ನು ಬೆಟ್ಟದ ತುದಿಯಿಂದ ಪ್ರವಾಸಿಗರು ಸುಂದರವಾದ ಹಸಿರು ಅರಣ್ಯ ಪ್ರದೇಶಗಳನ್ನು ವೀಕ್ಷಿಸಬಹುದು ಜತೆಗೆ ತ್ರಿಶೂರು ನಗರವನ್ನೂ ವೀಕ್ಷಿಸಬಹುದಾಗಿದೆ. ಕುಂಜಾಲಿಪುರ ಶಿಖರದಿಂದ ಕನಕಮಲಾ ಮತ್ತು ಚಾಲಕುಡಿ ತಾಣಗಳು ನೋಡುಗರ ಕಣ್ಮನ ಸೆಳೆಯುತ್ತವೆ.
ಈ ಯೋಜನೆಯಡಿ, ಟ್ರೆಕ್ಕಿಂಗ್ ತಾಣಗಳಲ್ಲಿ ಪ್ರವೇಶ ದ್ವಾರ, ವಾಕ್-ವೇ, ವ್ಯೂವ್ ಪಾಯಿಂಟ್, ಕ್ಯಾಫೆಟೇರಿಯಾ, ಗಾಜಿನ ಸೇತುವೆ, ಜಿಪ್‌ಲೈನ್ ಮತ್ತು ಸಿಸಿಟಿವಿ ನಿಗಾವ್ಯವಸ್ಥೆ ಸೇರಿದಂತೆ ಅನೇಕ ಮೂಲಸೌಕರ್ಯಗಳನ್ನು ನಿರ್ಮಿಸುವ ಪ್ರಸ್ತಾಪವಿದೆ. ಈ ಬೆಟ್ಟಗಳ ಪಾದಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.