ಸಫಾರಿ ಮರುಪ್ರಾರಂಭಿಸಲು ಪ್ರವಾಸೋದ್ಯಮ ವಲಯದಿಂದ ಒತ್ತಾಯ
ಸಫಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ನಂತರ ಪ್ರವಾಸಿಗರ ಆಗಮನ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಇದರ ಪರಿಣಾಮವಾಗಿ ಹೋಮ್‌ಸ್ಟೇ, ಜೀಪ್ ಸಫಾರಿ ಸೇವೆಗಳು, ಸ್ಥಳೀಯ ಆಹಾರಮಳಿಗೆಗಳು ಮತ್ತು ಕೈತೋಟ ಉತ್ಪನ್ನಗಳ ಮಾರಾಟಕ್ಕೂ ಹೊಡೆತ ಬಿದ್ದಿದೆ. ವನ್ಯಜೀವಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿರುವ ಈ ಪ್ರದೇಶದ ಗ್ರಾಮೀಣ ಆರ್ಥಿಕತೆಯೂ ಕುಗ್ಗಿರುವುದು ಉದ್ಯಮಿಗಳ ಆತಂಕಕ್ಕೆ ಕಾರಣವಾಗಿದೆ.
ಇತ್ತೀಚೆಗೆ ನಡೆದ ಹುಲಿ ದಾಳಿಗಳ ಹಿನ್ನೆಲೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ಸೇವೆಗಳನ್ನು ಸ್ಥಗಿತಗೊಳಿಸಿರುವ ಸರಕಾರದ ನಿರ್ಧಾರದಿಂದ ಸ್ಥಳೀಯ ಪ್ರವಾಸೋದ್ಯಮ ವಲಯದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಸಫಾರಿ ವಾಹನ ಚಾಲಕರು, ಮಾರ್ಗದರ್ಶಕರು, ಹೊಟೇಲ್ ಹಾಗೂ ರಿಸಾರ್ಟ್ ಸಿಬ್ಬಂದಿ ಸೇರಿದಂತೆ ನೂರಾರು ಕುಟುಂಬಗಳು ತಮ್ಮ ದೈನಂದಿನ ಆದಾಯವನ್ನು ಕಳೆದುಕೊಂಡಿರುವುದಾಗಿ ಪ್ರವಾಸೋದ್ಯಮ ಸಂಘಟನೆಗಳು ತಿಳಿಸಿವೆ.
ಸಫಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ನಂತರ ಪ್ರವಾಸಿಗರ ಆಗಮನ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಇದರ ಪರಿಣಾಮವಾಗಿ ಹೋಮ್‌ಸ್ಟೇ, ಜೀಪ್ ಸಫಾರಿ ಸೇವೆಗಳು, ಸ್ಥಳೀಯ ಆಹಾರಮಳಿಗೆಗಳು ಮತ್ತು ಕೈತೋಟ ಉತ್ಪನ್ನಗಳ ಮಾರಾಟಕ್ಕೂ ಹೊಡೆತ ಬಿದ್ದಿದೆ. ವನ್ಯಜೀವಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿರುವ ಈ ಪ್ರದೇಶದ ಗ್ರಾಮೀಣ ಆರ್ಥಿಕತೆಯೂ ಕುಗ್ಗಿರುವುದು ಉದ್ಯಮಿಗಳ ಆತಂಕಕ್ಕೆ ಕಾರಣವಾಗಿದೆ.

ಪ್ರವಾಸೋದ್ಯಮ ಸಂಘಗಳು ಸರಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ, ಸೂಕ್ತ ಭದ್ರತಾ ಕ್ರಮಗಳನ್ನು ಬಲಪಡಿಸಿ ಸಫಾರಿಯನ್ನು ಪುನರ್ ಆರಂಭಿಸುವ ಅಗತ್ಯವಿದೆ ಎಂದು ತಿಳಿಸಿವೆ. “ಪ್ರವಾಸಿಗರ ಸುರಕ್ಷತೆ ನಮಗೆ ಪ್ರಾಮುಖ್ಯವಾದರೂ, ದೀರ್ಘಕಾಲ ಸಫಾರಿ ನಿಷೇಧವು ಸಾವಿರಾರು ಜನರ ಜೀವನೋಪಾಯವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಪರಿಸರ ಮತ್ತು ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಸಫಾರಿಯನ್ನು ಮರುಪ್ರಾರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಸಂಘಟನೆ ಪ್ರತಿನಿಧಿಗಳು ತಿಳಿಸಿದ್ದಾರೆ.