Monday, December 8, 2025
Monday, December 8, 2025

Netflix ಜತೆ ಒಪ್ಪಂದ ಮಾಡಿಕೊಂಡ ಪ್ರವಾಸೋದ್ಯಮ ಸಚಿವಾಲಯ

ಸರಕಾರ ನೀಡಿದ ಮಾಹಿತಿಯ ಪ್ರಕಾರ, ಒಪ್ಪಂದದ ಭಾಗವಾಗಿ Netflix ತನ್ನ ಚಿತ್ರಗಳು, ಡಾಕ್ಯುಮೆಂಟರಿ, ವೆಬ್‌ಸೀರೀಸ್ ಮತ್ತು ಇತರೆ ದೃಶ್ಯಮಾಧ್ಯಮಗಳ ಮೂಲಕ ಭಾರತದಲ್ಲಿನ ವಿವಿಧ ಪ್ರವಾಸಿ ತಾಣಗಳನ್ನು ಜಗತ್ತಿಗೆ ಪರಿಚಯಿಸುವ ಕಾರ್ಯದಲ್ಲಿ ಕೈಜೋಡಿಸಲಿದೆ. ಕಥೆ ಮತ್ತು ದೃಶ್ಯ ಸಂವಹನದ ಮುಖಾಂತರ ಭಾರತೀಯ ಪ್ರವಾಸೋದ್ಯಮಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮನ್ನಣೆ ಸಿಗುತ್ತಿರುವುದು ವಿಶೇಷ.

ಜಾಗತಿಕ ಮಟ್ಟದಲ್ಲಿ ಭಾರತದ ಪ್ರವಾಸಿ ತಾಣಗಳ ಪ್ರಚಾರಕ್ಕಾಗಿ ಭಾರತದ ಪ್ರವಾಸೋದ್ಯಮ ಸಚಿವಾಲಯವು Netflix ಜತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಮೂಲಕ ಭಾರತದ ನೈಸರ್ಗಿಕ ಸೌಂದರ್ಯ, ಸಂಸ್ಕೃತಿ ಮತ್ತು ಸ್ಥಳೀಯ ಜೀವನ ಶೈಲಿಯ ಪರಿಚಯವನ್ನು ವಿಶ್ವದ ಕೋಟ್ಯಾಂತರ ವೀಕ್ಷಕರಿಗೆ ತಲುಪಿಸುವ ಗುರಿಯನ್ನು ಪ್ರವಾಸೋದ್ಯಮ ಸಚಿವಾಲಯವು ಹೊಂದಿದೆ.

Netflix Joins Hands with Tourism Ministry to Promote Incredible India

ಸರಕಾರ ನೀಡಿದ ಮಾಹಿತಿಯ ಪ್ರಕಾರ, ಒಪ್ಪಂದದ ಭಾಗವಾಗಿ Netflix ತನ್ನ ಚಿತ್ರಗಳು, ಡಾಕ್ಯುಮೆಂಟರಿ, ವೆಬ್‌ಸೀರೀಸ್ ಮತ್ತು ಇತರೆ ದೃಶ್ಯಮಾಧ್ಯಮಗಳ ಮೂಲಕ ಭಾರತದಲ್ಲಿನ ವಿವಿಧ ಪ್ರವಾಸಿ ತಾಣಗಳನ್ನು ಜಗತ್ತಿಗೆ ಪರಿಚಯಿಸುವ ಕಾರ್ಯದಲ್ಲಿ ಕೈಜೋಡಿಸಲಿದೆ. ಕಥೆ ಮತ್ತು ದೃಶ್ಯ ಸಂವಹನದ ಮುಖಾಂತರ ಭಾರತೀಯ ಪ್ರವಾಸೋದ್ಯಮಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮನ್ನಣೆ ಸಿಗುತ್ತಿರುವುದು ವಿಶೇಷ.

ಗ್ರಾಮೀಣ ಪ್ರವಾಸೋದ್ಯಮ, ಹೋಮ್‌ಸ್ಟೇ, ಸಾಂಸ್ಕೃತಿಕ ಹಬ್ಬಗಳು, ಪಾರಂಪರಿಕ ಕಲಾ ರೂಪಗಳು ಹಾಗೂ ಸ್ಥಳೀಯ ಸಮುದಾಯಗಳ ಜೀವನಶೈಲಿ ಮುಂತಾದ ಹಲವು ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಲು ಈ ಒಪ್ಪಂದವು ಸಹಾಯಕವಾಗಲಿದೆ. ಸರಕಾರವು ಗ್ರಾಮೀಣ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಈ ಸಂದರ್ಭದಲ್ಲಿ Netflix ನಂಥ ಜಾಗತಿಕ ವೇದಿಕೆಯೊಂದಿಗಿನ ಈ ಸಹಯೋಗವು ಪ್ರವಾಸೋದ್ಯಮ ಕ್ಷೇತ್ರಕ್ಕೆ ಚೈತನ್ಯ ತುಂಬಲಿದೆ.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!