ಹೊಟೇಲ್ ವಾಸ್ತವ್ಯ ಮತ್ತು ಬಸ್ ಪ್ರಯಾಣಕ್ಕೆ ವಿಧಿಸಲಾಗುವ ಜಿಎಸ್‌ಟಿ ತೆರಿಗೆಗಳನ್ನು ಕಡಿತಗೊಳಿಸಿರುವುದು ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಲಿದೆ ಎಂದು ಕೇಂದ್ರ ಸಮಾಜ ಕಲ್ಯಾಣ ಸಚಿವಾಲಯ ತಿಳಿಸಿದೆ. “ಈ ಕ್ರಮದಿಂದ ಪ್ರವಾಸ ಹೆಚ್ಚು ಕೈಗೆಟುಕುವಂತಾಗುತ್ತದೆ, ಹೂಡಿಕೆಗಳಿಗೆ ಉತ್ತೇಜನ ಸಿಗುವುದರ ಜತೆಗೆ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಸೆಪ್ಟೆಂಬರ್ 22ರಿಂದ ಜಾರಿಗೆ ಬಂದಿರುವ ಈ ಸುಧಾರಿತ ತೆರಿಗೆ ದರಗಳು ಆತಿಥ್ಯ, ಸಾರಿಗೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳನ್ನು ಬಲಪಡಿಸುವ ಉದ್ದೇಶವನ್ನು ಹೊಂದಿವೆ.

foriegn

ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ-

2021ರಲ್ಲಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗರ ಸಂಖ್ಯೆ 15.27 ಲಕ್ಷವಾಗಿದ್ದರೆ, 2024ರಲ್ಲಿ ಅದು 99.52 ಲಕ್ಷಕ್ಕೆ ಏರಿಕೆಯಾಗಿದೆ. ಕೋವಿಡ್ ನಂತರದ ಅವಧಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಪುನಃ ಚೈತನ್ಯ ಪಡೆದುಕೊಂಡಿರುವುದನ್ನು ಈ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ. “ಪ್ರಯಾಣ ಹಾಗೂ ವಸತಿ ಹೆಚ್ಚು ಅಗ್ಗವಾದಂತೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯೂ ಹೆಚ್ಚಲಿದೆ” ಎಂದು ಸಚಿವಾಲಯ ಹೇಳಿದೆ.

gst benefit

ಹೊಟೇಲ್ ಕೊಠಡಿಗಳ ಮೇಲಿನ ಜಿಎಸ್‌ಟಿ ಕಡಿತ:-

₹7,500ಕ್ಕಿಂತ ಕಡಿಮೆ ದರದ ಹೊಟೇಲ್ ಕೊಠಡಿಗಳ ಮೇಲೆ ಜಿಎಸ್‌ಟಿ ದರವನ್ನು 12%ರಿಂದ 5%ಕ್ಕೆ ಇಳಿಸಲಾಗಿದೆ. ಇದರಿಂದ –

  • ಮಧ್ಯಮ ವರ್ಗದ ಪ್ರವಾಸಿಗರಿಗೆ ವಾಸ್ತವ್ಯ ಇನ್ನಷ್ಟು ಅಗ್ಗವಾಗಲಿದೆ.
  • ಜಿಎಸ್‌ಟಿ ಸುಧಾರಣೆ ಅಂತಾರಾಷ್ಟ್ರೀಯ ಮಟ್ಟದ ತೆರಿಗೆ ನೀತಿಗೆ ಹೊಂದಿಕೊಳ್ಳುವ ಮೂಲಕ ವಿದೇಶಿ ಪ್ರವಾಸಿಗರಿಗೆ ಭಾರತ ಹೆಚ್ಚು ಆಕರ್ಷಕವಾಗಲಿದೆ.
  • ವಾರಾಂತ್ಯ ಪ್ರವಾಸ, ತೀರ್ಥಯಾತ್ರೆ, ಪರಂಪರೆ ಹಾಗೂ ಪರಿಸರ ಪ್ರವಾಸೋದ್ಯಮ ಉತ್ತೇಜನ ಪಡೆಯಲಿದೆ.
  • ಮಧ್ಯಮ ಮಟ್ಟದ ಹೊಟೇಲ್‌ಗಳು, ಹೋಮ್‌ಸ್ಟೇಗಳು, ಅತಿಥಿ ಗೃಹಗಳಲ್ಲಿ ಹೂಡಿಕೆ ಹೆಚ್ಚಾಗಿ, ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಾಧ್ಯವಾಗಲಿದೆ.

ಬಸ್‌ಗಳ ಮೇಲಿನ ಜಿಎಸ್‌ಟಿ ಕಡಿತ:-

10ಕ್ಕಿಂತ ಹೆಚ್ಚು ಸೀಟುಗಳಿರುವ ಬಸ್‌ಗಳ ಮೇಲಿನ ಜಿಎಸ್‌ಟಿ ದರವನ್ನು 28%ರಿಂದ 18%ಕ್ಕೆ ಇಳಿಸಲಾಗಿದೆ. ಇದರಿಂದ –

  • ಹೊಸ ಬಸ್‌ಗಳ ಬೆಲೆ ಕಡಿಮೆಯಾಗಲಿದ್ದು, ಪ್ರವಾಸಿ ಸಂಸ್ಥೆಗಳು, ಶಾಲೆಗಳು, ಕಂಪನಿಗಳು ಹಾಗೂ ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಅನುಕೂಲವಾಗಲಿದೆ.
  • ಟಿಕೆಟ್ ದರ ಇಳಿಕೆಯಿಂದ ಗ್ರಾಮೀಣ ಹಾಗೂ ಅರೆ-ನಗರ ಮಾರ್ಗಗಳಲ್ಲಿ ಪ್ರಯಾಣ ಹೆಚ್ಚು ಕೈಗೆಟುಕುವಂತಾಗಲಿದೆ.
  • ಖಾಸಗಿ ವಾಹನ ಬಳಕೆಯಿಂದ ಸಾರ್ವಜನಿಕ ಸಾರಿಗೆಗೆ ಜನರು ತಿರುಗಿಕೊಳ್ಳುವುದರಿಂದ ಸಂಚಾರ ದಟ್ಟಣೆ ಮತ್ತು ಮಾಲಿನ್ಯ ಕಡಿಮೆಯಾಗಲಿದೆ.
  • ಹೊಸ ಬಸ್‌ಗಳನ್ನು ಖರೀದಿಸಿ, ಹಳೆಯ ಬಸ್‌ಗಳನ್ನು ನವೀಕರಿಸಲು ಉತ್ತೇಜನ ದೊರೆತು, ಸಾರ್ವಜನಿಕ ಸಾರಿಗೆ ಹೆಚ್ಚು ಆರಾಮದಾಯಕ ಹಾಗೂ ಸುರಕ್ಷಿತವಾಗಲಿದೆ.

ಒಟ್ಟಾರೆ, ಈ ಜಿಎಸ್‌ಟಿ ಸುಧಾರಣೆಗಳು ಪ್ರವಾಸೋದ್ಯಮವನ್ನು ಹೆಚ್ಚು ಅಗ್ಗದ, ಸುಲಭವಾಗಿ ಲಭ್ಯವಾಗುವ ರೀತಿಯಲ್ಲಿ ರೂಪಿಸುವುದರ ಜೊತೆಗೆ ಹೂಡಿಕೆ ಹಾಗೂ ಉದ್ಯೋಗಾವಕಾಶಗಳಿಗೂ ಹೊಸ ದಾರಿ ತೆರೆಯಲಿವೆ.