ಇಕೋ ಟೂರಿಸಂಗೆ ಉತ್ತರಪ್ರದೇಶ ಪ್ರವಾಸೋದ್ಯಮದಿಂದ ಉತ್ತೇಜನ
ವಿಶೇಷವಾಗಿ ಥಾರು ಸಮುದಾಯದಂಥ ಸ್ಥಳೀಯ ಜನರು ಹೋಮ್‌ಸ್ಟೇ, ಪಾರಂಪರಿಕ ಆಹಾರ, ಕೈತೋಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಇಕೋ-ಟೂರಿಸಂಗೆ ಕೊಡುಗೆ ನೀಡುತ್ತಿದ್ದಾರೆ. ಇದರಿಂದ ಆರ್ಥಿಕ ಅಭಿವೃದ್ಧಿಯ ಜತೆಗೆ ಪರಿಸರ ಸಂರಕ್ಷಣೆಯ ಗುರಿಯನ್ನೂ ಸಾಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸರ ಸಂರಕ್ಷಣೆ ಮತ್ತು ಇಕೋ-ಟೂರಿಸಂ ಅಭಿವೃದ್ಧಿಗೆ ಸಮುದಾಯಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯವೆಂದು ಉತ್ತರಪ್ರದೇಶ ಸರಕಾರ ಅಭಿಪ್ರಾಯಪಟ್ಟಿದೆ. ಈ ದಿಸೆಯಲ್ಲಿ ರಾಜ್ಯ ಸರಕಾರ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಸ್ಥಳೀಯ ಸಮುದಾಯಗಳನ್ನು ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ನೇರವಾಗಿ ತೊಡಗಿಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಪ್ರದೇಶ ಇಕೋ-ಟೂರಿಸಂ ಡೆವಲಪ್‌ಮೆಂಟ್ ಬೋರ್ಡ್ ಕಳೆದ ಮೂರು ವರ್ಷಗಳಲ್ಲಿ ಸುಮಾರು 161 ಕೋಟಿ ರುಪಾಯಿ ಹೂಡಿಕೆ ಮಾಡಿದ್ದು, ರಾಜ್ಯದ ವಿವಿಧ ಪ್ರಕೃತಿ ಮತ್ತು ವನ್ಯಜೀವಿ ಪ್ರದೇಶಗಳಲ್ಲಿ ನೇಚರ್ ಟ್ರೈಲ್‌ಗಳು, ವೀಕ್ಷಣಾ ಗೋಪುರಗಳು, ಪಕ್ಷಿಧ್ಯಾನ ಕೇಂದ್ರಗಳು, ಗಜೆಬೋಗಳು ಮತ್ತು ಸಣ್ಣ ಕಾಫೆಟೇರಿಯಾಗಳನ್ನು ನಿರ್ಮಿಸಲಾಗಿದೆ.

ದುಧ್ವಾ, ಪಿಲಿಭೀತ್, ಕಟರ್ಣಿಯಾಗಾಟ್ ಸೇರಿದಂತೆ ಪ್ರಮುಖ ವನ್ಯಜೀವಿ ಸಂರಕ್ಷಿತ ಪ್ರದೇಶಗಳಲ್ಲಿ ಈ ಯೋಜನೆಗಳು ಜಾರಿಯಾಗಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದರೊಂದಿಗೆ ವನ್ಯಜೀವಿ ಸಂರಕ್ಷಣೆಯೂ ಬಲಪಡುತ್ತಿದ್ದು, ಸ್ಥಳೀಯ ಸಮುದಾಯಗಳಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ.
ವಿಶೇಷವಾಗಿ ಥಾರು ಸಮುದಾಯದಂಥ ಸ್ಥಳೀಯ ಜನರು ಹೋಮ್‌ಸ್ಟೇ, ಪಾರಂಪರಿಕ ಆಹಾರ, ಕೈತೋಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಇಕೋ-ಟೂರಿಸಂಗೆ ಕೊಡುಗೆ ನೀಡುತ್ತಿದ್ದಾರೆ. ಇದರಿಂದ ಆರ್ಥಿಕ ಅಭಿವೃದ್ಧಿಯ ಜತೆಗೆ ಪರಿಸರ ಸಂರಕ್ಷಣೆಯ ಗುರಿಯನ್ನೂ ಸಾಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ವಿಕ್ಸಿತ ಯುಪಿ @ 2047’ ಯೋಜನೆಯ ಭಾಗವಾಗಿ, ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಉತ್ತೇಜಿಸಿ, ಸಂರಕ್ಷಣೆ ಮತ್ತು ಪ್ರವಾಸೋದ್ಯಮದ ನಡುವೆ ಸಮತೋಲನ ಸಾಧಿಸುವುದು ಸರಕಾರದ ಮುಖ್ಯ ಗುರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.